Home » ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ | ಬೈಕ್ ಸವಾರ ಗಂಭೀರ

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ | ಬೈಕ್ ಸವಾರ ಗಂಭೀರ

by Praveen Chennavara
0 comments

ಪುತ್ತೂರು: ಬಸ್ಸು ಹಾಗೂ ಬೈಕ್ ನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ದ ಪುತ್ತೂರು ಕಬಕ-ಮಿತ್ತೂರು ನಡುವಿನ ಕೂವೆತ್ತಿಲ ತಿರುವಿನಲ್ಲಿ ನಡೆದಿದೆ.

ಬೈಕ್ ಸವಾರ ಕೂವೆತ್ತಿಲ ನಿವಾಸಿ ಟ್ಯಾಂಕರ್ ಚಾಲಕ ಜಗ್ಗ ಯಾನೆ ಜಗದೀಶ್ ಗೌಡ (28) ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.

ಬಿ.ಸಿ.ರೋಡಿನಿಂದ ಪುತ್ತೂರಿಗೆ ಹೋಗುತ್ತಿದ್ದ ತೆರಳುತ್ತಿದ್ದ ಬಸ್ ಹಾಗೂ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಮಧ್ಯೆ ಕಬಕ-ಮಿತ್ತೂರು ನಡುವಿನ ಕೂವೆತ್ತಿಲ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಮುಂಭಾಗದಲ್ಲಿ ಅಡಿಭಾಗಕ್ಕೆ ನುಸುಳಿ ಸಿಲುಕಿಕೊಂಡಿದೆ. ಜಗದೀಶ್ ಒಂದು ವಾರದ ಹಿಂದಷ್ಟೇ ತನ್ನ ಸ್ನೇಹಿತ ಖರೀದಿಸಿದ್ದ ಹೊಸ ಬೈಕಲ್ಲಿ ಕಬಕಕ್ಕೆ ಹೋಗಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ರಭಸಕ್ಕೆ ಬೈಕ್ ಜಖಂಗೊಂಡಿದೆ. ಕೂಡಲೇ ಸ್ಥಳೀಯರು ಗಾಯಾಳವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

You may also like

Leave a Comment