Home » Shocking News : ಅಪ್ರಾಪ್ತೆ ಮೇಲೆ ಅತ್ಯಾಚಾರ ನಂತರ ಚೀಲದಲ್ಲಿ ತುಂಬಿ ಕಾಡಿಗೆ ಎಸೆದ ಕಾಮುಕ | ವಿಸ್ಮಯ ನಡೆದದ್ದೇ ಆಮೇಲೆ!!!

Shocking News : ಅಪ್ರಾಪ್ತೆ ಮೇಲೆ ಅತ್ಯಾಚಾರ ನಂತರ ಚೀಲದಲ್ಲಿ ತುಂಬಿ ಕಾಡಿಗೆ ಎಸೆದ ಕಾಮುಕ | ವಿಸ್ಮಯ ನಡೆದದ್ದೇ ಆಮೇಲೆ!!!

0 comments

ಅಪ್ರಾಪ್ತೆ ಯುವತಿಯನ್ನು ತನ್ನ ‘ಗೆಳತಿ’ ಎಂದು ಹೇಳಿಕೊಂಡು ಅಪಹರಿಸಿರುವುದರ ಜೊತೆಗೆ ಅತ್ಯಾಚಾರ ಮಾಡಿ, ಕೊಲೆ ಪ್ರಯತ್ನ ನಡೆಸಿದ ಘಟನೆ ಅಸ್ಸಾಂ ನಲ್ಲಿ ನಡೆದಿದೆ.

ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ (Shocking News) ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಿ, ಅತ್ಯಾಚಾರ ನಡೆಸಿ, ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ್ದು ಸಾಲದೆಂಬಂತೆ ಆಕೆಯನ್ನು ಚೀಲದಲ್ಲಿ ತುಂಬಿ ಕಾಡಿನಲ್ಲಿ ಎಸೆದಿರುವ ಘಟನೆ ನಡೆದಿದೆ.

ಅಪ್ರಾಪ್ತ ಬಾಲಕಿ ಅಕ್ಟೋಬರ್ 3ರಂದು ಬೇರೊಬ್ಬರೊಂದಿಗೆ ದುರ್ಗಾ ಪೂಜೆಯ ಮಂಟಪಕ್ಕೆ ಹೋಗಿದ್ದಾಳೆಂದು ತಿಳಿಯುತ್ತಿದ್ದಂತೆ, ಕೋಪಗೊಂಡ 26ರ ಹರೆಯದ ವಿಕೃತ ಕಾಮಿ, ಹುಡುಗಿಯ ಮೇಲೆ ನಿರ್ದಾಕ್ಷಿಣ್ಯವಾಗಿ ದೌರ್ಜನ್ಯವೆಸಗಿ ಆಕೆಯ ಕತ್ತು ಸೀಳಲು ಯತ್ನಿಸಿ, ಚೀಲದಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾನೆ.

ವಿಕೃತ ಕಾಮಿ ವ್ಯಕ್ತಿತ್ವ ಹೊಂದಿರುವ ಆಸಾಮಿ ಹುಡುಗಿ ಸತ್ತುಹೋಗಿದ್ದಾಳೆ ಎಂದು ಭಾವಿಸಿ, ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ. ಆದರೆ, ಅದೃಷ್ಟವಶಾತ್ ಬಾಲಕಿ ಅಚ್ಚರಿಯ ರೀತಿಯಲ್ಲಿ ಬದುಕುಳಿದು, ಪ್ರಾಣಾಪಾಯದಿಂದ ತನ್ನ ಮೇಲೆ ನಡೆದ ದೌರ್ಜನ್ಯ ಮತ್ತು ಕೊಲೆ ಪ್ರಯತ್ನದ ಬಗ್ಗೆ ಮನೆಯವರಿಗೆ ತಿಳಿಸಿದ್ದಾಳೆ.

ವಿಷಯ ತಿಳಿದ ತಕ್ಷಣ ಮನೆಯವರು ಪೋಲಿಸ್ ಸ್ಟೇಷನ್ಗೆ ದೌಡಾಯಿಸಿ ದೂರು ಸಲ್ಲಿಸಿದ್ದಾರೆ. ಬಾಲಕಿಯ ಮನೆಯವರ ದೂರಿನ ಅನ್ವಯ, ಅಪ್ರಾಪ್ತೆಯನ್ನು ತನ್ನ ‘ಗೆಳತಿ’ ಎಂದು ಹೇಳಿಕೊಂಡು ಅಪಹರಿಸಿ, ಅತ್ಯಾಚಾರ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ 26 ವರ್ಷದ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ತನ್ನ ಮೇಲೆ ಹಲ್ಲೆ ನಡೆದು, ಲೈಂಗಿಕ ದೌರ್ಜನ್ಯವಾದರೂ ಕೂಡ ತ್ರಾಸದಾಯಕವಾಗಿ ಬಾಲಕಿ ಮನೆಗೆ ತಲುಪಿ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಕೊಲೆಯಿಂದ ಪಾರಾದರೂ ಕೂಡ ಇದೀಗ, ಆಕೆ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವುದು ಖೇದಕರ ಸಂಗತಿ.

You may also like

Leave a Comment