Home » Good News: ಜನಸಾಮಾನ್ಯರಿಗೆ ಸಿಹಿ ಸುದ್ದಿ, ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ

Good News: ಜನಸಾಮಾನ್ಯರಿಗೆ ಸಿಹಿ ಸುದ್ದಿ, ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ

by Mallika
0 comments

ಜನ ಸಾಮಾನ್ಯರಿಗೆ ಖುಷಿಯ ಸುದ್ದಿ ಎಂದೇ ಹೇಳಬಹುದು. ಖಾದ್ಯ ತೈಲಗಳ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಮಾರ್ಚ್ ನಲ್ಲಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಪರಿಣಾಮವಾಗಿ ಉಕ್ರೇನ್ ನಿಂದ ತೈಲ ಆಮದು ನಮ್ಮ ದೇಶಕ್ಕೆ ಕಡಿಮೆಯಾಗಿತ್ತು. ಹಾಗಾಗಿ ಈ ಕಾರಣದಿಂದಾಗಿ, ಖಾದ್ಯ ತೈಲಗಳ ಬೆಲೆಗಳು ಏರಿಕೆಯಾಗಿತ್ತು. ಹೀಗಾಗಿ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಹಾಗೂ ಆರ್ಥಿಕವಾಗಿ ತೊಂದರೆ ಅನುಭವಿಸಿದರು.

ಭಾರತದಲ್ಲಿ ಕಡ್ಲೆಕಾಯಿ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಯನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ.
ನಮ್ಮ ದೇಶದಲ್ಲಿ ಇದರ ಉತ್ಪಾದನೆ ಕಡಿಮೆ ಇರುವುದರಿಂದ ಈ ಎಣ್ಣೆಕಾಳುಗಳ ಉತ್ಪಾದನೆಯನ್ನು ನೆರೆಯ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಆಮದುಗಳು ಕಡಿಮೆಯಾದಂತೆ ಬೆಲೆಗಳು ತೀವ್ರವಾಗಿ ಏರಿಕೆ ಕಂಡು ಬಂದಿದೆ. ಪ್ರಸ್ತುತ, ಒಂದು ತಿಂಗಳ ಅವಧಿಯಲ್ಲಿ ಬೆಲೆಗಳು ತೀವ್ರವಾಗಿ ಇಳಿದಿವೆ.

ಈ ಮೊದಲು ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್ ಗೆ 210 ರೂ.ಗಳಾಗಿದ್ದು, ಈಗ ಅದು ಲೀಟರ್ ಗೆ 150 ರೂ.ಗೆ ಇಳಿದಿದೆ. ಪಲ್ಲಿ ತೈಲದ ಬೆಲೆ ಪ್ರತಿ ಲೀಟರ್ ಗೆ 220ರೂ.ಗಳಿಂದ 165 ರೂ.ಗೆ ಇಳಿದಿದೆ. ತಾಳೆ ಎಣ್ಣೆಯ ಬೆಲೆಯನ್ನು ಪ್ರತಿ ಲೀಟರ್ ಗೆ 150 ರೂ.ಗಳಿಂದ 95 ರೂ.ಗೆ ಇಳಿಸಲಾಗಿದೆ. ಈ ಹಿಂದೆ ನಾಗರಿಕ ಸರಬರಾಜು ಇಲಾಖೆಯ ಮೂಲಕ ಪಡಿತರ ಅಂಗಡಿಗಳಲ್ಲಿ ತಾಳೆ ಎಣ್ಣೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು ಈ ತೈಲದ ಪೂರೈಕೆಯನ್ನು ನಿಲ್ಲಿಸಿದೆ. ಪ್ರಸ್ತುತ, ತೈಲದ ಬೆಲೆ ಪ್ರತಿ ಲೀಟರ್ಗೆ 55 ರೂ.ಗಳಿಂದ 60 ರೂ.ಗೆ ಇಳಿದಿದೆ.

You may also like

Leave a Comment