Home » Viral video : ಪಕ್ಕದಲ್ಲೇ ವರ ಇರುವಾಗಲೇ ವಧುವಿಗೆ ಪ್ರಪೋಸ್ ಮಾಡೇ ಬಿಟ್ಟ ಯುವಕ | ವರ ಮಾಡಿದ್ದೇನು ಗೊತ್ತೇ?

Viral video : ಪಕ್ಕದಲ್ಲೇ ವರ ಇರುವಾಗಲೇ ವಧುವಿಗೆ ಪ್ರಪೋಸ್ ಮಾಡೇ ಬಿಟ್ಟ ಯುವಕ | ವರ ಮಾಡಿದ್ದೇನು ಗೊತ್ತೇ?

0 comments

ಮದುವೆ ಅಂದರೆ ಹಿರಿಯರ ಪ್ರಕಾರ ಒಂದು ಶ್ರೇಷ್ಠ ಭಾವನೆ ಅಲ್ಲದೆ ಏಳೇಳು ಜನ್ಮದ ಅನುಭಂದ ಅನ್ನೋ ನಂಬಿಕೆ ಇದೆ. ಆದರೆ ಇತ್ತೀಚಿಗೆ ಮದುವೆ ಒಂದು ಪ್ಯಾಷನ್, ಮೋಜು ಮಸ್ತಿ ಮಾಡೋ ಸಮಾರಂಭ ಅನ್ನೋ ಹಾಗೆ ಆಗಿದೆ. ಜೊತೆಗೆ ವಧು ವರರನ್ನು ವಿಶೇಷವಾಗಿ ಮಂಟಪಕ್ಕೆ ಕರೆದೊಯ್ಯುವುದು, ಮಂಟಪದಲ್ಲಿ ಬೇಕು ಬೇಕಾದಂತೆ ಕುಣಿಯುವುದು, ವಧು ವರನಿಗೆ ಹಾಸ್ಯ ಮಯ ಉಡುಗೊರೆ ನೀಡುವುದು ಮುಂತಾದ ರೀತಿಯ ಮದುವೆಯ ಅನೇಕ ರೀತಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದರೆ ಈ ರೀತಿಯ ವೀಡಿಯೊವನ್ನು ನೀವು ಹಿಂದೆಂದೂ ನೋಡಿರಲು ಸಾಧ್ಯವಿಲ್ಲ. ಈ ವೀಡಿಯೋದಲ್ಲಿ ಕಾಣುವ ವಧು-ವರರು ಕನಸಿನಲ್ಲಿಯೂ ಇಂತಹ ಘಟನೆ ನಡೆಯುತ್ತದೆ ಎಂದು ಯೋಚಿಸಿರಲು ಸಾಧ್ಯವಿಲ್ಲ.

ಈ ವೀಡಿಯೊದಲ್ಲಿ, ವಧು-ವರರು ತಮ್ಮ ಮದುವೆಯ ಉಡುಗೆಯಲ್ಲಿ ಮಂಟಪದಲ್ಲಿ ಎಲ್ಲರ ಆಶೀರ್ವಾದ ಪಡೆಯಲು ಕುಳಿತಿದ್ದರು. ಆ ಸಮಯ ಅತಿಥಿಗಳ ನಡುವೆ ಒಂದು ಹುಡುಗ ತನ್ನ ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡು ಬಂದು ಮೊಣಕಾಲುಗಳ ಮೇಲೆ ಕುಳಿತುಕೊಳ್ಳುತ್ತಾನೆ.

ವಧು ಮೊದಲು ಈ ದೃಶ್ಯ ನೋಡಿ ಹಿಂಜರಿಯುತ್ತಾಳೆ. ಆದರೆ ನಂತರ ನಗುತ್ತಾ ಗುಲಾಬಿ ಹೂವನ್ನು ತೆಗೆದುಕೊಳ್ಳುತ್ತಾಳೆ. ಈ ಹುಡುಗನ ಪ್ರಸ್ತಾಪವನ್ನು ನೋಡಿ ವಧುವಿನ ಜೊತೆಗೆ ಎಲ್ಲಾ ಅತಿಥಿಗಳು ನಗಲು ಪ್ರಾರಂಭಿಸುತ್ತಾರೆ. ಅದೇ ಸಮಯದಲ್ಲಿ, ವರನು ತನ್ನ ಮದುವೆಯಲ್ಲಿ ವಧುವಿಗೆ ಪ್ರಪೋಸ್ ಮಾಡುತ್ತಿದ್ದರೂ ಸಹ ಏನು ಮಾತನಾಡದೆ ತನ್ನಷ್ಟಕ್ಕೆ ಸುಮ್ಮನಿರುತ್ತಾನೆ.

ಅಷ್ಟೇ ಅಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಹಲವು ಜನ ಲೈಕ್ ಮಾಡಿದ್ದಾರೆ.ಈ ವೀಡಿಯೊವನ್ನು ಸಾವಿರಾರು ಜನರು ವೀಕ್ಷಿಸಿರುತ್ತಾರೆ. ಕಾಮೆಂಟ್ ವಿಭಾಗದಲ್ಲಿ ಜನರು ನಗುವ ಎಮೋಜಿಯನ್ನು ಕಳಿಸಿದ್ದಾರೆ. ಒಟ್ಟಿನಲ್ಲಿ ಜನರಿಗೆ ಒಂದು ರೀತಿಯಲ್ಲಿ ಮನೋರಂಜನೆ ಮಾಡಿದಂತೆ ಆಗಿದೆ.

https://www.instagram.com/reel/CjZdNhpJIna/?utm_source=ig_web_copy_link

You may also like

Leave a Comment