Home » ಮಮ್ಮಿಯನ್ನು ಮಮ್ಮಿ ಮಾಡಿದ ಮಗಳ ಗೆಳೆಯ | ಅಮ್ಮನ ಕೊಡುಗೆಗೆ ಮಗಳಿಗೆ ಡಬಲ್ ಶಾಕ್ !

ಮಮ್ಮಿಯನ್ನು ಮಮ್ಮಿ ಮಾಡಿದ ಮಗಳ ಗೆಳೆಯ | ಅಮ್ಮನ ಕೊಡುಗೆಗೆ ಮಗಳಿಗೆ ಡಬಲ್ ಶಾಕ್ !

0 comments

ತಾಯಿ-ಮಗಳ ಸಂಬಂಧ ಪದಗಳಿಗೂ ಮೀರಿದ್ದು.ಆಕೆ ಮಗಳಿಗೆ ಅಕ್ಕಳಾಗಿ,ಗೆಳತಿಯಾಗಿ ಎಲ್ಲಾ ಸ್ಥಾನಗಳನ್ನು ತುಂಬುತ್ತಾಳೆ.ಇಂತಹ ಹೊಂದಾಣಿಕೆ ಬೇರೆಲ್ಲೂ ಸಿಗಲಾರದು.ಮಗಳಾದವಳಿಗೆ ತನ್ನ ದಿನನಿತ್ಯದ ಆಗು-ಹೋಗುಗಳನ್ನು ತಾಯಿಯ ಬಳಿ ಹೇಳಿದರೇನೆ ಮನಸ್ಸಿಗೆ ಸಮಾಧಾನ.ತಾಯಿ ತನ್ನ ಮಕ್ಕಳ ಏಳಿಗೆಗಾಗಿ ಶ್ರಮಿಸುವವಳು, ಮಕ್ಕಳ ಖುಷಿಯನ್ನು ಬಯಸುವವಳು.ಆಕೆ ಮಗಳ ರಕ್ಷಕಿಯಾಗಿರುತ್ತಾಳೆ.ಆದರೆ ಇಲ್ಲಿ ತಾಯಿ ತನ್ನ ಮಗಳ ಜೀವನದ ಖುಷಿಯನ್ನು ಕಸಿದುಕೊಂಡ ಭಕ್ಷಕಿಯಾಗಿದ್ದಾಳೆ.

ಈಕೆ ವನೆಸ್ಸಾ ಕೆಲಸಕ್ಕೆಂದು ಮೆಕ್ಸಿಕೋಗೆ ಹೋಗಿದ್ದಳು.ಆಕೆ ತನ್ನ ಗೆಳೆಯನನ್ನು ಮನೆಯಲ್ಲಿ ಇರುವಂತೆ ತಿಳಿಸಿ ತನ್ನ ತಾಯಿಯ ಜೊತೆ ಅವನನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳಿ ಹೋಗುತ್ತಾಳೆ.ತನ್ನ ಕೆಲಸದ ಬಿಡುವಿನ ಸಮಯದಲ್ಲಿ ಮನೆಗೆ ಮರಳುವೆನೆಂದು ಫೋನಿನಲ್ಲಿ ತಾಯಿಯ ಜೊತೆ ತಿಳಿಸಿದಾಕೆ 2 ತಿಂಗಳ ನಂತರ ಮೆಕ್ಸಿಕೋದಿಂದ ಮನೆಗೆ ವಾಪಾಸ್ಸಾಗುತ್ತಾಳೆ.ಮನೆಗೆ ಬಂದಾಕೆ ತಾಯಿ ಗರ್ಭಿಣಿಯಾಗಿರುವುದನ್ನು ಕಂಡು ಖುಷಿಯಿಂದ ಅಮ್ಮನ ಬಳಿ ಬಂದು ಮಾತನಾಡುತ್ತಾಳೆ. ಸ್ವಲ್ಪ ಮಾತುಕತೆಯ ನಂತರ ವನೆಸ್ಸಾ ಗೆ ತಾಯಿಯ ಮಾತು ಕೇಳಿ ಆಘಾತವಾಗುತ್ತದೆ.ಹೇಗೆಂದರೆ ಭೂಮಿ ಬಿರುಕುಬಿಟ್ಟಂತಾಗುತ್ತದೆ.ಕಾರಣ ತನ್ನ ತಾಯಿಯ ಹೊಟ್ಟೆಯಲ್ಲಿರುವ ಮಗುವಿಗೆ ತನ್ನ ಗೆಳೆಯನೇ ಕಾರಣ ಎಂದು ತಿಳಿದು ಮತ್ತಷ್ಟು ದಿಗ್ಬ್ರಾಂತಳಾಗುತ್ತಾಳೆ. ಮಗಳಾದವಳು ತಾಯಿಯ ಇಂತಹ ನೀಚಕೆಲಸವನ್ನು ಹೇಗೆ ತಾನೆ ಸಹಿಸುತ್ತಾಳೆ ಅಲ್ಲವೇ.ಹಾಗೇ ಇದರಿಂದ ಕೋಪಗೊಂಡ ಯುವತಿ ಕೂಡಲೇ ತನ್ನ ತಾಯಿ ಹಾಗೂ ಗೆಳೆಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಲ್ಲದೆ, ಇದರಿಂದ ಬೇಸರಗೊಂಡು ಅಮೆರಿಕಕ್ಕೆ ಹೊರಟುಹೋಗಿದ್ದಾಳೆ. ಈ ನೋವಿನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಯುವತಿಯ ತಾಯಿ ಮತ್ತು ಆಕೆಯ ಗೆಳೆಯನ ಮೇಲೆ ಜನರು ಕೋಪಗೊಂಡು ಛೀಮಾರಿ ಹಾಕುತ್ತಿದ್ದಾರೆ ,ಇನ್ನೂ ಕೆಲವರು ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಹಾಸ್ಯಾಸ್ಪದವಾಗಿ ಕಾಮೆಂಟ್‌ ಮಾಡಿದ್ದಾರೆ. ಯುವತಿ ಮಾನಸಿಕವಾಗಿ ನೊಂದು-ಬೆಂದು ಹೋಗಿದ್ದಾಳೆ.ತನಗಿಂತ ಹೆಚ್ಚಾಗಿ ಪ್ರೀತಿಸಿ,ತನ್ನ ಸರ್ವಸ್ವವನ್ನೂ ಧಾರೆ ಎರೆದರೂ, ಎಂದಿಗೂ ಕ್ಷಮಿಸಲಾರದ ಮೋಸ ಮಾಡಿದ ಗೆಳೆಯ ಒಂದು ಕಡೆಯಾದ್ರೆ, ತನ್ನನ್ನು ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿ ಕರುಳ ಬಳ್ಳಿಗೆ ವಂಚನೆ ಮಾಡಿದರು ಎಂದು ತಿಳಿದ ಯುವತಿ ಮಾನಸಿಕವಾಗಿ ಕುಗ್ಗಿ ಹೋದಳು.ಅತ್ತಾಗ ಸಂತೈಸಬೇಕಾದ, ಮಗಳ ಜೀವನಕ್ಕೆ ಸೇತುವೆಯಾಗಬೇಕಾದ ತಾಯಿಯೇ ಹೀಗೆ ಮಾಡಿದರೆ ಆಕೆ ಏನು ಮಾಡಲು ಸಾಧ್ಯ. ಬೇಲಿಯೇ ಎದ್ದು ಹೊಲ ಮೆಯ್ದ ಹಾಗೆ,ಮಗಳಿಗೆ ಆಧಾರಸ್ತಂಭವಾಗಿದ್ದ ತನ್ನ ನೋವುಗಳ ಔಷಧಿಯಾಗಿದ್ದ ತಾಯಿ ಮಗಳಿಗೆ ಮರೆಯಲಾರದ ನೋವಾಗಿಬಿಟ್ಟಳು.ತನ್ನ ಜೀವನದ ಖುಷಿಯನ್ನು ಕಸಿದುಕೊಂಡಳು.

You may also like

Leave a Comment