Home » ರಾಜ್ಯದಲ್ಲಿ ಮತ್ತೆ ಸಂಭವಿಸಿದ ಭೂಕಂಪ | ಹೆಚ್ಚಾಯ್ತು ಜನತೆಯ ದಿಗಿಲು|

ರಾಜ್ಯದಲ್ಲಿ ಮತ್ತೆ ಸಂಭವಿಸಿದ ಭೂಕಂಪ | ಹೆಚ್ಚಾಯ್ತು ಜನತೆಯ ದಿಗಿಲು|

0 comments

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಲ್ಲಿ ಭೂಕಂಪನ ಸಂಭವಿಸಿ ಜನರಲ್ಲಿ ಆತಂಕದ ಛಾಯೆ ಆವರಿಸಿದೆ. ಮೇಲಿಂದ ಮೇಲೆ ಸಂಭವಿಸುತ್ತಿರುವ ಕಂಪನಗಳಿಂದ ಜನರು ಗಾಬರಿಗೊಂಡಿದ್ದು, ಇದೀಗ ಮತೊಮ್ಮೆ ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 9.45 ಹಾಗೂ ಅ. 29 ರಂದು ನಸುಕಿನ ಜಾವ 4.40ಕ್ಕೆ ಭೂಕಂಪನದ ಅನುಭವವಾಗಿದೆ.

ಒಟ್ಟು ಎರಡು ಬಾರಿ ಭೂಮಿ ನಲುಗಿದ್ದರಿಂದ ಜನರು ಆತಂಕದಲ್ಲಿದ್ದಾರೆ. ವಿಜಯಪುರ ನಗರ, ಮನಗೂಳಿ, ಗೋಳಗುಮ್ಮಟ ಪ್ರದೇಶ ಸೇರಿ ನಗರದ ಸುತ್ತ ಮುತ್ತದಲ್ಲಿ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆಯಲ್ಲಿ ಭೂಕಂಪನವಾಗಿದೆ.

ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದ್ದು, 5 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪನವಾಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮ ಭೂಕಂಪನದ ಕೇಂದ್ರಬಿಂದುವಾಗಿದ್ದು, ಎರಡನೇ ಭೂಕಂಪನದ ಕೇಂದ್ರಬಿಂದು ವಿಜಯಪುರ ತಾಲೂಕಿನ ಹಂಚಿನಾಳ ಗ್ರಾಮವಾಗಿದೆ.

ಎರಡೂ ಕಡೆಗಳಲ್ಲೂ 2.8 ತೀವ್ರತೆಯಲ್ಲಿ ಭೂಕಂಪನವಾಗಿದೆ. ಭೂಕಂಪನ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ. ಪ್ರಾಕೃತಿಕ ವಿಕೋಪಗಳ ನಡುವೆ ಜನರು ಆತಂಕಗೊಂಡು ಮುಂದೇನು ಕಾದಿದೆಯೋ ಎಂಬ ಭೀತಿಯಿಂದ ದಿನದೂಡುತ್ತಿದ್ದಾರೆ.

You may also like

Leave a Comment