Home » ಸ್ವೆಟರ್ ಕ್ಲೀನಿಂಗ್ ಹೇಗಿರಬೇಕು ಗೊತ್ತೇ?

ಸ್ವೆಟರ್ ಕ್ಲೀನಿಂಗ್ ಹೇಗಿರಬೇಕು ಗೊತ್ತೇ?

0 comments

ಮಳೆಗಾಲದ ಛತ್ರಿ ರೈನ್ ಕೋಟ್ ಎಲ್ಲಾ ಮೂಲೆ ಸೇರುತ್ತಿದೆ. ಮಳೆಗಾಲ ಸರಿದಂತೆ ಜೊತೆ ಜೊತೆಗೆ ಚಳಿಗಾಲ ಬಂದೇ ಬಿಟ್ಟಿತು ನೋಡಿ. ಹೌದು ಅಂದಹಾಗೆ ಚಳಿ ಅಂದಾಗ ಸ್ವೆಟರ್ ನೆನಪಾಗುವುದು ಸಹಜ ತಾನೇ. ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ. ಆದ್ರೆ ನಿಮ್ಮ ಸ್ವೆಟರ್ ಗಳು ಹೆಚ್ಚು ಬಾಳಿಕೆ ಬರುವಂತೆ ಮಾಡಲು ಕೆಲವೊಂದು ವಿಧಾನಗಳಿವೆ.

• ಬಹಳಷ್ಟು ಜನರು ಚಳಿಗಾಲವೆಲ್ಲಾ ಒಂದೇ ಸ್ವೆಟರ್ ಬಳಸುತ್ತಾರೆ. ಎರಡು ಇದ್ದರೆ ಒಳಿತು. ಯಾಕೆಂದರೆ ಒಂದನ್ನೇ ಹೆಚ್ಚು ಕಾಲ ಬಳಸಿದರೆ ಸುಕ್ಕಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ ಹಿಂದೆ ಬಾಗಿದಂತೆ ಕಂಡು ಬರುತ್ತದೆ. ಆದ ಕಾರಣ ಬಳಸಿದ ಪ್ರತಿ ದಿನವೂ ಗಾಳಿಯಲ್ಲಿ ಆರಿಸುವುದು ಒಳಿತು.

• ಚಳಿಗಾಲದಲ್ಲಿ ಉಪಯೋಗಿಸುವ ಉಣ್ಣೆ ಉಡುಗೆಗಳನ್ನು ಡ್ರೈ ಕ್ಲೀನ್ ಮಾಡಿಸದೆ ಇರುವುದು ಒಳಿತು. ಮನೆಯಲ್ಲಿ ತಣ್ಣೀರಿನಲ್ಲಿ ಬೇಬಿ ಶ್ಯಾಂಪೂ ಹಾಕಿ ಒಗೆಯಬೇಕು. ಚಳಿಗಾಲದ ಆರಂಭದಲ್ಲಿ ಬಳಸದೇ ಇರುವುದಕ್ಕೆ ಮೊದಲು, ಚಳಿಗಾಲ ಆದ ನಂತರ ಭದ್ರಗೊಳಿಸುವುದಕ್ಕೆ ಮುನ್ನ ಮತ್ತೊಂದು ಬಾರಿ ಒಗೆದರೆ ಸಾಕು.

• ಒದ್ದೆಯಾಗಿರುವ ಕಾಶ್ಮೀರಿ ಸ್ವೆಟರ್ ಅನ್ನು ಯಾವ ಕಾರಣಕ್ಕೂ ಜೋತಾಡುವಂತೆ ಇಡದಿರಿ. ಆ ರೀತಿ ಮಾಡಿದರೆ ಸಡಿಲವಾಗುತ್ತದೆ. ಅಷ್ಟೇ ಅಲ್ಲದೆ ಅವುಗಳನ್ನು ಹೆಚ್ಚು ಬಿಸಿಲಿನಲ್ಲಿ ಇಡಬಾರದು. ಸ್ವಲ್ಪ ಪ್ರಮಾಣದಲ್ಲಿ ಬಿಸಿಲು ಬೀಳುವ ಕಡೆ ಒಣಗುವುದಕ್ಕೆ ಹಾಕಬೇಕು.

• ಆದಷ್ಟು ಸ್ವೆಟರ್ ಧರಿಸಿದ ನಂತರ ಸುಗಂಧದ್ರವ್ಯಗಳನ್ನು ಬಳಸಬಾರದು. ಆಹಾರ ಸೇವಿಸುವಾಗ ಪದಾರ್ಥಗಳು ಬಿದ್ದರೆ ತಕ್ಷಣವೇ ಅವುಗಳನ್ನು ಶುಭ್ರಗೊಳಿಸಿ ಕಲೆಯಾಗದಂತೆ ಜಾಗ್ರತೆ ವಹಿಸಬೇಕು. ಇದಕ್ಕಾಗಿ ಬೇಕಿಂಗ್ ಸೋಡಾ ಬಳಸಬಹುದು.

ಈ ರೀತಿಯಾಗಿ ನಿಮ್ಮ ಸ್ವೆಟರ್ ನ್ನು ಜೋಪಾನ ಆಗಿರಿಸಿಕೊಳ್ಳುವುದು ಉತ್ತಮ.

You may also like

Leave a Comment