ಚಿತ್ರರಂಗದಲ್ಲಿ ಸಾಕಷ್ಟು ಮಿಂಚಿರುವ ಖ್ಯಾತ ನಟಿ ಹನ್ಸಿಕಾ ಅವರು ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹನ್ಸಿಕಾ ಮೋಟ್ವಾನಿ ಅವರು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಿಂದಾಸ್ ಸಿನಿಮಾದಲ್ಲಿ ಹನ್ಸಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ತಮ್ಮ ಭಾವಿ ಪತಿ ಪ್ರಪೋಸ್ ಮಾಡಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹನ್ಸಿಕಾ ಮೋಟ್ವಾನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತುಂಬಾ ಕಡಿಮೆ ಮಾತನಾಡುತ್ತಾರೆ. ಅವರು ಹೆಚ್ಚಾಗಿ ಪರ್ಸನಲ್ ಸುದ್ದಿಗಳನ್ನು ಶೇರ್ ಮಾಡುವುದಿಲ್ಲ. ಆದರೆ ಇದೀಗ ಅವರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಟಿ ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಅವರೊಂದಿಗೆ ಮದುವೆ ಆಗುತ್ತಾರೆ ಎನ್ನಲಾಗಿದೆ.

ರಾಜಸ್ಥಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ವಿವಾಹ ನಡೆಯಲಿದೆ. ಮದುವೆಯ ಬಗ್ಗೆ ಪೂರ್ಣ ಮಾಹಿತಿಗಳು ಹೊರಬಿದ್ದಿವೆ. ಇನ್ನೂ ಮದುವೆಗೂ ಮುನ್ನ ಹೈಫಿಲ್ ಟವರ್ ಮುಂದೆ ಭಾವಿ ಪತಿ ಸೊಹೈಲ್ ಕಥುರಿಯಾ ಅವರು ಹನ್ಸಿಕಾ ಮೊಟ್ವಾನಿ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಡಿಸೆಂಬರ್ 2 ರಂದು ನಟಿ ಹನ್ಸಿಕಾ ಅವರ ಮದುವೆಯ ಪೂರ್ವ ಸಂಭ್ರಮಗಳು ಪ್ರಾರಂಭವಾಗಲಿವೆ. ಈ ಶುಭ ಕಾರ್ಯಕ್ರಮವು ಸೂಫಿ ರಾತ್ರಿಯೊಂದಿಗೆ ಪ್ರಾರಂಭವಾಗಲಿದೆ. ಡಿಸೆಂಬರ್ 3 ರಂದು ಮೆಹೆಂದಿ ಮತ್ತು ಸಂಗೀತ ಸಮಾರಂಭಗಳು ನಡೆಯಲಿವೆ. ಡಿಸೆಂಬರ್ 4 ರಂದು ಹನ್ಸಿಕಾ ಮತ್ತು ಸೊಹೈಲ್ ಅವರ ಹಳದಿ ಕಾರ್ಯಕ್ರಮ ನಡೆಯುತ್ತದೆ. ಇದಾದ ಬಳಿಕ ಸಂಜೆ ಸಪ್ತಪದಿ ನಡೆಯಲಿದೆ. ಆರತಕ್ಷತೆಯ ಬದಲಿಗೆ, ರಾತ್ರಿಯಲ್ಲಿ ಕ್ಯಾಸಿನೋದಲ್ಲಿ ಪಾರ್ಟಿ ಇರಲಿದೆ ಎಂದು ತಿಳಿದುಬಂದಿದೆ.
