Home » ‘ಮಂಗಳೂರು’ ಎಂದು ಬದಲಾವಣೆ ಮಾಡಿ : ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶ

‘ಮಂಗಳೂರು’ ಎಂದು ಬದಲಾವಣೆ ಮಾಡಿ : ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶ

0 comments

ಮಂಗಳೂರು : ವಿಮಾನ ನಿಲ್ದಾಣ ಸಂಸ್ಥೆ ಮಂಗಳೂರು ತನ್ನ ದಾಖಲೆಗಳಲ್ಲಿ ‘ಮ್ಯಾಂಗಲೋರ್’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದಿರುವ ಹೆಸರನ್ನು ‘ಮಂಗಳೂರು’ ಎಂದು ಬದಲಾವಣೆ ಮಾಡಿ ಎಂದು ಆದೇಶಿಸಿದೆ.

ವಿಮಾನ ನಿಲ್ದಾಣದಲ್ಲಿರುವ ಬೋರ್ಡ್ ಸಹಿತ ಸ್ವಾಗತ ಕಮಾನುಗಳಲ್ಲಿ ಈಗಾಗಲೇ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬರೆಯಲಾಗಿದೆ.

ಆದರೆ, ಪ್ರಾಧಿಕಾರದ ದಾಖಲೆಗಳಲ್ಲಿ ಮಾತ್ರ ‘ಮ್ಯಾಂಗಲೋರ್’ ಎಂದೇ ಇದೆ. ಆದರೆ, ಮಂಗಳೂರು ನಗರದಲ್ಲಿಯೂ ‘ಮಂಗಳೂರು’ ಪದ ಬಳಕೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಗೂ ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ. ಡಿ.1ರಿಂದ ಇದು ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

You may also like

Leave a Comment