Home » KVS : ಕೆವಿಎಸ್‌ ನಿಂದ 4 ಸಾವಿರಕ್ಕಿಂತ ಹೆಚ್ಚು ಉದ್ಯೋಗ| ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆ ದಿನ.

KVS : ಕೆವಿಎಸ್‌ ನಿಂದ 4 ಸಾವಿರಕ್ಕಿಂತ ಹೆಚ್ಚು ಉದ್ಯೋಗ| ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆ ದಿನ.

by Mallika
0 comments

ಕೇಂದ್ರಿಯ ವಿದ್ಯಾಲಯ ಸಂಘಟನೆಯು (ಕೆವಿಎಸ್‌) 4000 ಕ್ಕೂ ಅಧಿಕ ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಕೆಳಗಿನಂತೆ ತಿಳಿದು
ಅರ್ಜಿ ಸಲ್ಲಿಸಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 09-11-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16-11-2022

ಅರ್ಜಿ ಶುಲ್ಕ ಎಷ್ಟು?
ಪ್ರಾಂಶುಪಾಲ, ಉಪ-ಪ್ರಾಂಶುಪಾಲ ಹುದ್ದೆಗಳಿಗೆ ರೂ.1500, ಇತರೆ ಹುದ್ದೆಗಳಿಗೆ ರೂ.1000 ಅರ್ಜಿ ಶುಲ್ಕ ಪಾವತಿಸಬೇಕು.

ಹುದ್ದೆಗಳ ವಿವರ
ಪ್ರಾಂಶುಪಾಲ : 278
ಉಪ-ಪ್ರಾಂಶುಪಾಲ: 176
ಹಣಕಾಸು ಅಧಿಕಾರಿ : 07
ಸೆಕ್ಷನ್ ಆಫೀಸರ್ : 22
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) : 1200
ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ) : 2154
ಮುಖ್ಯೋಪಾಧ್ಯಾಯರು : 237
ಒಟ್ಟು ಹುದ್ದೆಗಳು : 4014

ವಿದ್ಯಾರ್ಹತೆ :
ಪ್ರಾಂಶುಪಾಲ : ಪಿಜಿ, ಬಿ.ಇಡಿ ಜತೆಗೆ 8 ವರ್ಷ ಕಾರ್ಯಾನುಭವ.
ಉಪ-ಪ್ರಾಂಶುಪಾಲ: ಪಿಜಿ, ಬಿ.ಇಡಿ ಜತೆಗೆ 5 ವರ್ಷ ಕಾರ್ಯಾನುಭವ.
ಹಣಕಾಸು ಅಧಿಕಾರಿ : ಪದವಿ ಜತೆಗೆ 4 ವರ್ಷ ಕಾರ್ಯಾನುಭವ.
ಸೆಕ್ಷನ್ ಆಫೀಸರ್ : ಪದವಿ ಜತೆಗೆ 4 ವರ್ಷ ಕಾರ್ಯಾನುಭವ.
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) : ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಶಿಕ್ಷಣ.
ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್ (ಟಿಜಿಟಿ) : ಪದವಿ ಜತೆಗೆ ಬಿ.ಇಡಿ ಶಿಕ್ಷಣ ಪಡೆದಿರಬೇಕು.
ಮುಖ್ಯೋಪಾಧ್ಯಾಯರು : ಪಿಆರ್‌ಟಿ ಜತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ.

ಅಪ್ಲಿಕೇಶನ್‌ ಸಲ್ಲಿಸಲು ಗರಿಷ್ಠ ವಯೋಮಿತಿ
ಸ್ನಾತಕೋತ್ತರ ಪದವಿ ಉಪನ್ಯಾಸಕರು(ಪಿಜಿಟಿ) – 40 ವರ್ಷ.
ತರಬೇತಿ ಪದವಿ ಉಪನ್ಯಾಸಕರು(ಟಿಜಿಟಿ) – 35 ವರ್ಷ.
ಪ್ರಾಥಮಿಕ ಶಿಕ್ಷಕರು (ಪಿಆರ್‌ಟಿ) – 30 ವರ್ಷ.
ಪ್ರಾಂಶುಪಾಲರು – 50 ವರ್ಷ.
ಉಪ-ಪ್ರಾಂಶುಪಾಲರು – 45 ವರ್ಷ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ ವಿಳಾಸ : www.kvsangathan.nic.in

ಅರ್ಜಿ ಸಲ್ಲಿಸಲು ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನೋಟಿಫಿಕೇಶನ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ.

You may also like

Leave a Comment