Home » 8 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ | ಗಂಡನ ಕಿರುಕುಳಕ್ಕೆ ನೊಂದು ಸಾವು!!!

8 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ | ಗಂಡನ ಕಿರುಕುಳಕ್ಕೆ ನೊಂದು ಸಾವು!!!

0 comments

ಕೆಲವೊಂದು ಸಲ ಹೆಣ್ಣಾಗಿ ಹುಟ್ಟಬಾರದು ಅನ್ನಿಸುವಷ್ಟು ಸಮಾಜದಲ್ಲಿ ಹೆಣ್ಣಿಗೆ ಹಿಂಸೆ ನೀಡುವವರು ಇದ್ದಾರೆ ಇಂತಹ ಅನ್ಯಾಯಗಳಿಗೆ ಕೊನೆ ಇಲ್ಲವೇನೋ ಅಥವಾ ಜನರಿಗೆ ಕಾನೂನಿನ ಭಯ ಇಲ್ಲವೋ ಅರ್ಥ ಆಗುತ್ತಿಲ್ಲ.

ಹೌದು ಇಲ್ಲೊಂದು ಮುಗ್ಧ ಹೆಣ್ಣು ಗಂಡನ ಕಿರುಕುಳಕ್ಕೆ ಮನನೊಂದು 8 ತಿಂಗಳ ಗರ್ಭಿಣಿ ನೇಣಿಗೆ ಶರಣಾದ ಘಟನೆ ನೆಲಮಂಗಲದ ಉತ್ತರ ತಾಲೂಕು ಶಿವಪುರದಲ್ಲಿ ನಡೆದಿದೆ.

ಮೃತ ಗರ್ಭಿಣಿ ಸೌಂದರ್ಯ (19) ಒಂಭತ್ತು ತಿಂಗಳ ಹಿಂದೆ ಸಂತೋಷ್ ಎಂಬಾತನ ಜತೆಗೆ ಪ್ರೀತಿಸಿ ಮದುವೆಯಾಗಿದ್ದಳು. ಆರಂಭದಲ್ಲಿ ಅನ್ನೋನ್ಯವಾಗಿದ್ದ ಈ ಜೋಡಿಯ ದಾಂಪತ್ಯದಲ್ಲಿ ದಿನಕಳೆದಂತೆ ಬಿರುಕು ಮೂಡಿತ್ತು. ಸೌಂದರ್ಯ ಹಾಗೂ ಸಂತೋಷ್ ಮನೆಯವರಿಗೆ ತಿಳಿಸದೆ ವಿವಾಹವಾಗಿದ್ದರು. ಖಾಸಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸೌಂದರ್ಯಾಳಿಗೆ ಇತ್ತೀಚೆಗೆ ಗಾರ್ಮೆಂಟ್‌ನಲ್ಲಿ ಎಲ್ಲರೂ ಸೇರಿ ಸೀಮಂತ ಕಾರ್ಯ ಮಾಡಿದ್ದರು. ಇದೀಗ ಸೌಂದರ್ಯ ಗಂಡ ಸಂತೋಷ್ ನೀಡುತ್ತಿದ್ದ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂತೋಷ್ ವಿರುದ್ಧ ಸೌಂದರ್ಯ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಪ್ರಸ್ತುತ ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿಚಾರಣೆ ನಡೆದ ನಂತರ ಸತ್ಯಾ ಸತ್ಯತೆಗಳು ತಿಳಿದು ಬರಲಿದೆ.

You may also like

Leave a Comment