Home » BIGG NEWS : 7 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ – ಸರಕಾರದಿಂದ ಅಧಿಸೂಚನೆ

BIGG NEWS : 7 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ – ಸರಕಾರದಿಂದ ಅಧಿಸೂಚನೆ

0 comments

ಬೆಂಗಳೂರು ರಾಜ್ಯ ಸರ್ಕಾರವು ಚಾಮರಾಜನಗರ, ಬೀದರ್ ಕೊಡಗು, ಹಾಸನ, ಹಾವೇರಿ, ಕೊಪ್ಪ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕಳೆದ ಬಾರಿಯ ವಿಧಾನಸಭೆಯ ಅಧಿವೇಶನದಲ್ಲಿ ಏಳು ಹೊಸ ವಿವಿಗಳ ಸ್ಥಾಪನೆಗೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ 2022 ಕ್ಕೆ ಅನುಮೋದನೆ ನೀಡಿತ್ತು. ಹಾಗೆಯೇ ಹೊಸ ವಿವಿಗಳ ಸ್ಥಾಪನೆಗೆ ಸೋಮವಾರ ಅಧಿಸೂಚನೆ ಹೊರಡಿಸಿದೆ. ಆ ದಿನದಿಂದಲೇ ವಿವಿಗಳ ಕೇಂದ್ರ ಸ್ಥಳಗಳು ಜಾರಿಗೆ ಬರಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

ಹಾಗೇ ಮೈಸೂರು ವಿವಿಯಿಂದ ವಿಭಜಿಸಿರುವ ಚಾಮರಾಜನಗರ ವಿವಿಗೆ ಜಿಲ್ಲೆಯ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಕೇಂದ್ರ ಸ್ಥಳವಾಗಿದೆ. ಇನ್ನೂ, ಹಾಸನ ವಿವಿಗೆ ಜಿಲ್ಲೆಯ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಮಂಡ್ಯ ವಿವಿಗೆ ಜಿಲ್ಲೆಯ ಸ‌ರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಗುಲ್ಬರ್ಗಾ ವಿವಿಯಿಂದ ವಿಭಜನೆಯಾಗಿರುವ ಬೀದರ್ ವಿವಿಗೆ ಭಾಲ್ಕಿ ತಾಲೂಕಿನ ಹಾಲಹಳ್ಳಿಯ ಜ್ಞಾನ ಕಾರಂಜಿ ಮಂಗಳೂರು ವಿವಿಯಿಂದ ವಿಭಜಿಸಿರುವ ಕೊಡಗು ವಿವಿಗೆ ಕುಶಾಲನಗರದ ಚಿಕ್ಕಲುವಾರ, ವಿಜಯನಗರ ಶ್ರೀಕೃಷ್ಣದೇವಾರಾಯ ವಿವಿಯಿಂದ ವಿಭಜಿಸಿರುವ ಕೊಪ್ಪಳ ವಿವಿಗೆ ತಳಕಲ್ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ರಾಣಿ ಚೆನ್ನಮ್ಮ ವಿವಿಯಿಂದ ವಿಭಜಿಸಿರುವ ಬಾಗಲಕೋಟಿ ವಿವಿಗೆ ಜಮಖಂಡಿ, ಕರ್ನಾಟಕ ವಿವಿಯಿಂದ ವಿಭಜಿಸಿರುವ ಹಾವೇರಿ ನೂತನ ವಿವಿಗೆ ಜಿಲ್ಲೆ ಕೆರೆಮತ್ತಿಹಳ್ಳಿಯನ್ನು ಕೇಂದ್ರ ಸ್ಥಳವನ್ನಾಗಿ ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

You may also like

Leave a Comment