Home » Avatar : ‘ಅವತಾರ್ ದಿ ವೇ ಆಫ್ ವಾಟರ್ ‘ ಬರಲಿದೆ ಕನ್ನಡದಲ್ಲಿ | ಟ್ರೇಲರ್ ಬಿಡುಗಡೆ | ನಮಸ್ತೆ ಇಂಡಿಯಾ ಎಂದ ನಿರ್ಮಾಪಕ

Avatar : ‘ಅವತಾರ್ ದಿ ವೇ ಆಫ್ ವಾಟರ್ ‘ ಬರಲಿದೆ ಕನ್ನಡದಲ್ಲಿ | ಟ್ರೇಲರ್ ಬಿಡುಗಡೆ | ನಮಸ್ತೆ ಇಂಡಿಯಾ ಎಂದ ನಿರ್ಮಾಪಕ

0 comments

ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರೂನ್ ನಿರ್ದೇಶನದ ಬ್ಲಾಕ್ ಬಾಸ್ಟರ್ ಸಿನಿಮಾ’ಅವತಾರ್’ನ ಮುಂದುವರೆದ ಭಾಗವಾದ ‘ಅವತಾರ್ ದಿ ವೇ ಆಫ್ ವಾಟರ್’ ಹೊಸ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.

ಕಳೆದ ವಾರ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಅದರಲ್ಲಿ ಡಿಸೆಂಬರ್ 16ಕ್ಕೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ಮಾತ್ರ ಸಿನಿಮಾ ರಿಲೀಸ್ ಎಂದು ತಿಳಿಸಲಾಗಿತ್ತು. ಇದರ ಬೆನ್ನಲ್ಲೇ ಕನ್ನಡಿಗರು ಗರಂ ಆಗಿದ್ದಾರೆ. ಕನ್ನಡದಲ್ಲೇ ಡಬ್ ಮಾಡಿ ನಾವು ಕನ್ನಡದಲ್ಲೇ ಅವತಾರ್-2 ನೋಡುತ್ತೇವೆ ಎಂದು ಹೇಳಿದ್ದಾರೆ.

ಇಂತಹ ಬಹು ನಿರೀಕ್ಷಿತ ಸಿನಿಮಾವನ್ನು ಕನ್ನಡಿಗರು ಕನ್ನಡದಲ್ಲಿ ಏಕೆ ನೋಡಬಾರದು? ಮಲೆಯಾಳಂನಲ್ಲಿ ಅವಕಾಶವಿದ್ದು, ಕನ್ನಡಕ್ಕೆ ಏಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದೀಗ ಕನ್ನಡಿಗರ ಒತ್ತಾಯಕ್ಕೆ ಮಣಿದು ಭಾರತದಲ್ಲಿನ ಚಿತ್ರದ ಹಂಚಿಕೆದಾರರಾದ ’20th ಸೆಂಚುರಿ ಸ್ಟುಡಿಯೋಸ್ ಇಂಡಿಯಾ’ ಕಂಪನಿ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡತ್ತೇವೆ ಎಂದು ತಿಳಿಸಿದ್ದಾರೆ. ಇದರಂತೆ ಪೂರ್ವಭಾವಿಯಾಗಿ ಚಿತ್ರದ ಕನ್ನಡ ಟ್ರೇಲರ್ ಅನ್ನು ಇಂದು ಯೂಟ್ಯೂಬಲ್ಲಿ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅನೇಕ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಲಿವುಡ್ ನಿರ್ಮಾಪಕ ಜಾನ್ ಲ್ಯಾಂಡ್ ನಮಸ್ತೆ ಇಂಡಿಯಾ, ನಾನು ಭಾರತದ ಬಹುಭಾಷಾ ಸಂಸ್ಕೃತಿಯನ್ನು ಗೌರವಿಸುತ್ತೇನೆ, ಆರು ಭಾಷೆಗಳಲ್ಲಿ ಅವತಾರ್ 2 ಬಿಡುಗಡೆಯಾಗುತ್ತಿದೆ. ಡಿಸೆಂಬರ್ 16ರಂದು ಪ್ಯಾಂಡೋರಗೆ ಬನ್ನಿ. ಈಗ ಹೊಚ್ಚಹೊಸ ಟ್ರೆಯಲರ್ ಅನ್ನು ನೋಡಿ ಮತ್ತು ಆನಂದಿಸಿ ಎಂದು ಹೇಳಿದ್ದಾರೆ ಟ್ವೀಟ್ ಮಾಡಿದ್ದಾರೆ.

You may also like

Leave a Comment