Home » ಕಿರುತೆರೆಯ ಖ್ಯಾತ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ! ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೊಳಗಾದ ನಟ!

ಕಿರುತೆರೆಯ ಖ್ಯಾತ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ! ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೊಳಗಾದ ನಟ!

by Mallika
0 comments

ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದ ಖ್ಯಾತ ನಟನೋರ್ವ ಅಸುನೀಗಿದ ಘಟನೆಯೊಂದು ಇಂದು ನಡೆದಿದೆ. ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರು (Siddhaanth Vir Surryavanshi ) ಹೃದಯಾಘಾತದಿಂದ ಇಂದು ನವೆಂಬರ್ 11ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಿದ್ಧಾಂತ್ ಅವರು ಕುಸಿದು ಬಿದ್ದಿದ್ದರು. ಈ ಬಗ್ಗೆ ನಿರೂಪಕ ಜಯ್ ಭಾಸ್ಕುಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾಂತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿದ್ಧಾಂತ್ ಇಹಲೋಕ ತ್ಯಜಿಸಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಕಷ್ಟು ಧಾರಾವಾಹಿಗಳಲ್ಲಿ ಅವರು ಲೀಡ್ ಪಾತ್ರಗಳಲ್ಲಿ ಅಭಿನಯಿಸಿದ್ದ ಈ ನಟ, ‘ಕಸೂತಿ ಜಿಂದಗಿ ಕೇ’, ‘ಕೃಷ್ಣ ಅರ್ಜುನ್’, ‘ಕ್ಯಾ ದಿಲ್ ಮೇ ಹೇ’ ಮುಂತಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ‘ಕ್ಯೂ ರಿಸ್ತೋ ಮೇ ಕಟ್ಟಿ ಬಟ್ಟಿ’, ‘ಜಿದ್ದಿ ದಿಲ್’ ಅವರ ಕೊನೆಯ ಟಿವಿ ಪ್ರಾಜೆಕ್ಟ್‌ ಗಳಾಗಿದೆ.

ಇರಾ ಎನ್ನುವವರ ಜೊತೆ 2015ರಲ್ಲಿ ಸಿದ್ಧಾಂತ್ ಮದುವೆಯಾಗಿತ್ತು. ನಂತರ ಕಾರಣಾಂತರಗಳಿಂದ ವಿಚ್ಛೇದನ ಪಡೆದರು. ಅನಂತರ ಸಿದ್ಧಾಂತ್ ಅವರು 2017ರಲ್ಲಿ ಅಲೆಶಿಯಾ ಎಂಬಾಕೆಯ ಜೊತೆ ಮದುವೆ ಮಾಡಿಕೊಂಡರುಮ ಮೊದಲ ಮದುವೆಯಿಂದ ಸಿದ್ಧಾಂತ್‌ಗೆ ಮಗಳಿದ್ದಾಳೆ. ಸಿದ್ಧಾಂತ್‌ಗೂ ಮುನ್ನ ಅಲೆಶಿಯಾ ಅವರು ಬೇರೆ ಮದುವೆಯಾಗಿದ್ದರು. ಮೊದಲ ಮದುವೆಯಿಂದ ಅಲೆಶಿಯಾಗೆ ಮಗ ಇದ್ದಾನೆ.

You may also like

Leave a Comment