Home » RD Account : ಆರ್ ಡಿ ಖಾತೆ ತೆರೆಯಲು ಬಯಸುವಿರಾ? ಹಾಗಾದರೆ ಈ ವಿಷಯ ತಿಳಿದುಕೊಳ್ಳಿ!

RD Account : ಆರ್ ಡಿ ಖಾತೆ ತೆರೆಯಲು ಬಯಸುವಿರಾ? ಹಾಗಾದರೆ ಈ ವಿಷಯ ತಿಳಿದುಕೊಳ್ಳಿ!

0 comments

ಆರ್‌ಡಿ ಎಂದೇ ಪ್ರಸಿದ್ಧವಾಗಿರುವ ರಿಕರಿಂಗ್ ಡೆಪಾಸಿಟ್ ಸಮಂಜಸ ಗಳಿಕೆಯ ನಿರೀಕ್ಷೆಯೊಂದಿಗೆ ನಿರ್ದಿಷ್ಟ ಅವಧಿಗೆ ಮಾಡುವ ಹೂಡಿಕೆಯಾಗಿದೆ. ಈ ವಿಧಾನದಲ್ಲಿ ಮೆಚ್ಯೂರಿಟಿ ಅವಧಿಯ ವರೆಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತಿದ್ದು, ನಂತರ ಬಡ್ಡಿ ಸಮೇತ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಆರ್ ಡಿಯು ನಿಯಮಿತವಾಗಿ ಜನರನ್ನು ಉಳಿತಾಯ ಮಾಡುವಂತೆ ಪ್ರೇರೇಪಿಸುತ್ತದೆ.

ಕನಿಷ್ಠ ಆರು ತಿಂಗಳುಗಳಿಂದ ಗರಿಷ್ಠ 10 ವರ್ಷಗಳ ವರೆಗೆ ಠೇವಣಿ ಇಡಬಹುದಾಗಿದೆ. ಸ್ಥಿರ ಠೇವಣಿ (ಎಫ್‌ ಡಿ) ಮಾದರಿಯಲ್ಲೇ ಆರ್‌ಡಿಗೂ ಬಡ್ಡಿ ದರ ನಿಗದಿಪಡಿಸಲಾಗುತ್ತದೆ. ಅವಧಿಪೂರ್ವ ಹಿಂಪಡೆಯುವಿಕೆಯನ್ನು ನಿರ್ಬಂಧಿಸಲಾಗಿದೆ. ಕೆಲವೊಂದು ಷರತ್ತುಗಳೊಂದಿಗೆ ಅವಧಿಪೂರ್ವ ಹಿಂಪಡೆಯುವ ಅವಕಾಶಗಳು ಇರುತ್ತವೆ. ಆದರೆ ಮೆಕ್ಯೂರಿಟಿ ವೇಳೆ ದೊರೆಯುವ ಎಲ್ಲ ಪ್ರಯೋಜನಗಳು ಇದರಿಂದ ದೊರೆಯಲಾರವು.

ಕನಿಷ್ಠ ಮೊತ್ತವು ಈ ಮಾದರಿಯ ಹೂಡಿಕೆ ಅಥವಾ ಠೇವಣಿ ಯೋಜನೆಯಲ್ಲಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸ ಇರುತ್ತದೆ. ಸಾಮಾನ್ಯವಾಗಿ ಕನಿಷ್ಠ ಆರು ತಿಂಗಳುಗಳಿಂದ ಗರಿಷ್ಠ 10 ವರ್ಷಗಳ ವರೆಗೆ ಠೇವಣಿ ಇಡಬಹುದಾಗಿದೆ.

ಯಾರು ಬೇಕಾದರೂ ಆರ್‌ಡಿ ಖಾತೆ ತೆರೆಯಬಹುದಾದ ಅವಕಾಶವಿದ್ದೂ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಗುರುತಿನ ದೃಢೀಕರಣ ಒದಗಿಸಿದರೆ ಠೇವಣಿ ಖಾತೆ ತೆರೆಯಬಹುದು. ಆರ್‌ಡಿ ಖಾತೆಯನ್ನು ಯಾವ ಬ್ಯಾಂಕ್‌ನಲ್ಲಿ ತೆರೆಯಲು ಬಯಸಿದ್ದೀರೋ ಆ ಬ್ಯಾಂಕ್‌ ನ ಅರ್ಜಿ, ಪಾಸ್‌ಪೋರ್ಟ್ ಸೈಜ್‌ನ ಫೋಟೊ, ಗುರುತಿನ ದಾಖಲೆಗಳು ಮತ್ತು ವಿಳಾಸ ದೃಢೀಕರಣ ದಾಖಲೆಗಳು ಬ್ಯಾಂಕ್ ಬಯಸಿದಲ್ಲಿ ಕೆವೈಸಿ ದಾಖಲೆಗಳನ್ನೂ ನೀಡಬೇಕಾಗುತ್ತದೆ.

ಸುಲಭವಾಗಿ ಆನ್ಲೈನ್ ನಲ್ಲೇ ಆರ್ ಡಿ ಖಾತೆ ತೆರೆಯಬಹುದು. ಮೊದಲು ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ, ಆರ್‌ಡಿ ಖಾತೆ ತೆರೆಯುವುದಕ್ಕೆ ಸಂಬಂಧಿಸಿದ ಆಯ್ಕೆಯನ್ನು ಕ್ಲಿಕ್ ಮಾಡಿ. ಅವಧಿ ಮತ್ತು ಕಂತಿನ ಮೊತ್ತದ ವಿವರಗಳನ್ನು ಭರ್ತಿ ಮಾಡಿದ ಬಳಿಕ ನಿಮ್ಮ ಉಳಿತಾಯ ಖಾತೆಯನ್ನು ಆರ್‌ಡಿ ಖಾತೆ ಜತೆ ಲಿಂಕ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿ.

ಆಫ್‌ಲೈನ್‌ನಲ್ಲೂ ಆರ್‌ಡಿ ಖಾತೆಯನ್ನು ತೆರೆಯಬಹುದಾಗಿದೆ. ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಆರ್‌ಡಿ ಖಾತೆ ತೆರೆಯುವುದಕ್ಕೆ ಸಂಬಂಧಿಸಿದ ಅರ್ಜಿಯನ್ನು ಭರ್ತಿ ಮಾಡಿ. ಚೆಕ್ ನೀಡುವ ಮೂಲಕ ಕಂತಿನ ಹಣದ ಪಾವತಿಯನ್ನು ದೃಢೀಕರಿಸಿ. ಅಗತ್ಯವಿದ್ದಲ್ಲಿ ಕೆವೈಸಿ ವಿವರ, ದಾಖಲೆಗಳನ್ನು ಸಲ್ಲಿಸಿ.

ಆರ್‌ಡಿಯ ಅವಧಿಪೂರ್ವ ಹಿಂಪಡೆಯುವಿಕೆಗೆ ಬ್ಯಾಂಕ್‌ಗಳು
ಬಡ್ಡಿಯ ಶೇಕಡಾ 1ರ ವರೆಗೆ ಶುಲ್ಕ ವಿಧಿಸುತ್ತವೆ. ಬಡ್ಡಿ ದರ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ವ್ಯತ್ಯಾಸ ಇರಬಹುದು. ಆರ್‌ಡಿಗೆ ಕನಿಷ್ಠ ಲಾಕ್ ಇನ್ ಅವಧಿಯು ಮೂರು ತಿಂಗಳು. ಈ ಅವಧಿಗೂ ಮೊದಲೇ ಹಿಂಪಡೆಯುವುದಾದರೆ ಬಡ್ಡಿ ಸಿಗುವುದಿಲ್ಲ. ಬಡ್ಡಿ ದರವನ್ನು ಬ್ಯಾಂಕ್‌ಗಳು ಶೇಕಡಾ 1ರಿಂದ 2 ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ. ಠೇವಣಿ ಇಟ್ಟ ಮೊತ್ತ ಮಾತ್ರ ವಾಪಸ್ ದೊರೆಯುತ್ತದೆ.

You may also like

Leave a Comment