Home » ವರುಣಾರ್ಭಟ | ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ!

ವರುಣಾರ್ಭಟ | ಮುಂಜಾಗ್ರತಾ ಕ್ರಮವಾಗಿ ಹಲವೆಡೆ ಶಾಲೆಗಳಿಗೆ ರಜೆ ಘೋಷಣೆ!

0 comments

ಇತ್ತೀಚಿನ ಅಕಾಲಿಕ ಮಳೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಜನರು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಸರ್ಕಾರದ ನಿಲುವು ಯಾಕೆಂದರೆ ಮಳೆ ನೀರು ಅವಾಂತರ ನಂತರ ದಿಕ್ಕಾಪಾಲಾಗಿ ಓಡುವುದಕ್ಕಿಂತ ಮೊದಲೇ ಜಾಗೃತಗೊಳ್ಳುವುದು ಉತ್ತಮ ಎಂಬುದಾಗಿದೆ.

ಪ್ರಸ್ತುತ ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದೆ. ಶುಕ್ರವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈನ ಹಲವು ಪ್ರದೇಶಗಳು ಜಲಾವೃತವಾಗುತ್ತಿದೆ . ಅದಲ್ಲದೆ ಮಧುರೈ, ಕಾಂಚೀಪುರಂ ಮತ್ತು ತ್ರಿವಲ್ಲೂರಿನಲ್ಲಿ ನಿರಂತರ ಮಳೆಯ ಕಾರಣ ಕಾಲೇಜುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಕಾರಣದಿಂದ ತಮಿಳುನಾಡಿನಾದ್ಯಂತ ಭಾರೀ ಮಳೆ ಮುಂದುವರೆದಿದೆ. ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನ ತಿರುವಳ್ಳೂರು, ರಾಣಿಪೇಟ್ ಮತ್ತು ಕಾಂಚೀಪುರಂ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.

ಈ ಕುರಿತಾಗಿ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಲವು ಮಳೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದಲ್ಲದೆ, ಶಿವಗಂಗಾ, ದಿಂಡಿಗಲ್, ಥೇಣಿ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ IMD ಪ್ರವಾಹ ಎಚ್ಚರಿಕೆ ನೀಡಿದೆ. ಥೇನಿಯ ವೈಗಂ ಅಣೆಕಟ್ಟು ಸೈಟ್‌ನ ಅಧಿಕಾರಿಯೊಬ್ಬರ ಪ್ರಕಾರ 4,230 ಕ್ಯೂಬಿಕ್ ಅಡಿ ಹೆಚ್ಚುವರಿ ನೀರನ್ನು ಒಂದು ಅಳತೆಯಾಗಿ ಹೊರಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹವಾಮಾನ ಇಲಾಖೆ ವರದಿ ಪ್ರಕಾರ ಬರುವ ದಿನಗಳಲ್ಲಿ ಚೆನ್ನೈ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಹಾಗೂ ನವೆಂಬರ್ 16ರ ವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿದೆ. ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮುನೆಚ್ಚರಿಕಾ ಕ್ರಮವಾಗಿ ಮೈಲಾಡುತುರೈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

You may also like

Leave a Comment