Home » IRCTCಯ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ ಈ ಎಲ್ಲಾ ಪ್ರಯೋಜನ ಪಡೆಯಿರಿ!

IRCTCಯ ಖಾತೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ ಈ ಎಲ್ಲಾ ಪ್ರಯೋಜನ ಪಡೆಯಿರಿ!

0 comments

ಬಹಳ ದೂರದ ಊರಿಗೆ ಪ್ರಯಾಣಿಸುವಾಗ, ಮುಖ್ಯವಾಗಿ ಆರಾಮದಾಯಕ ಮತ್ತು ಅಗ್ಗದ ಪ್ರಯಾಣಕ್ಕಾಗಿ ಜನರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಸಾರಿಗೆ ವ್ಯವಸ್ಥೆ ಎಂದರೆ ಅದು ರೈಲು. ಕೋಟ್ಯಾಂತರ ಪ್ರಯಾಣಿಕರು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರೈಲಿನ ಟಿಕೆಟ್‌ ಖರೀದಿಯನ್ನು ಆನ್ಲೈನ್‌ನಲ್ಲಿಯೆ ಮಾಡುತ್ತಾರೆ. ಇದರಿಂದ ‘ಕ್ಯೂ’ ನಿಲ್ಲುವುದೊಂದು ತಪ್ಪುತ್ತದೆ. ಮುಖ್ಯವಾದ ವಿಷಯವೇನೆಂದರೆ IRCTCಯ ಖಾತೆಗೆ ನಿಮ್ಮ ಆಧಾರ್‌ ಸಂಖ್ಯೆಯನ್ನು ಲಿಂಕ್ ಮಾಡುವುದರಿಂದ ನೀವು ಹಲವು ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಇದರಿಂದಾಗುವ ಲಾಭವೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಪ್ರತಿ ತಿಂಗಳು 12 ಟಿಕೆಟ್ ಗಳ ಅವಕಾಶ!
ನೀವೆನಾದರೂ ಆಧಾರ್‌ ಕಾರ್ಡ್‌ನ ಸಂಖ್ಯೆಯನ್ನು IRCTCಯ ಖಾತೆಗೆ ಲಿಂಕ್ ಮಾಡಿದರೆ ಪ್ರತಿ ತಿಂಗಳು 12 ಟಿಕೆಟ್‌ಗಳನ್ನು ಬುಕ್‌ ಮಾಡುವ ಅವಕಾಶವಿದೆ. ಒಂದು ವೇಳೆ ನೀವು IRCTC ಖಾತೆಯೊಂದಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡದಿದ್ದರೆ ಪ್ರತಿ ತಿಂಗಳು 6 ಟಿಕೆಟ್‌ಗಳನ್ನು ಮಾತ್ರ ಬುಕ್‌ ಮಾಡಬಹುದು.

ನಿಮ್ಮ ಅದೃಷ್ಟ ಚೆನ್ನಾಗಿದ್ದರೆ, ಉಚಿತ ಟಿಕೆಟ್‌ ಕೂಡ ಪಡೆಯಬಹುದು!
ಹೌದು, IRCTC ಜೊತೆ ಆಧಾರ್ ಲಿಂಕ್ ಮಾಡಿರುವ ಖಾತೆಗಳನ್ನು ಲಕ್ಕಿ ಡ್ರಾ ಯೋಜನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಕೇವಲ ಟಿಕೆಟ್ ಮಾತ್ರವಲ್ಲದೆ, ಲಕ್ಕಿ ಡ್ರಾನಲ್ಲಿ ಗೆದ್ದವರಿಗೆ 10,000 ರೂಪಾಯಿಗಳನ್ನು ನಗದು ರೂಪದಲ್ಲಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಹಾಗಾದರೆ IRCTC ಖಾತೆಯನ್ನು ಆಧಾರ್‌ ಕಾರ್ಡ್‌ಗೆ ಲಿಂಕ್‌ ಮಾಡುವುದು ಹೇಗೆ?
IRCTC ಸರ್ಕಾರದ ಅಧಿಕೃತ ವೆಬ್‌ಸೈಟ್ ಆಗಿದ್ದೂ, ಬಹಳ ಸುಲಭವಾಗಿ ನಾವು ಲಿಂಕ್ ಮಾಡಬಹುದು. ಮೊದಲು IRCTC ವೆಬ್‌ಸೈಟಿಗೆ ಹೋಗಿ ಲಾಗಿನ್‌ ಆಗಿ. ಅಲ್ಲಿ ನನ್ನ ಖಾತೆ ಎಂಬ ಆಯ್ಕೆಯನ್ನು ಹುಡುಕಿ. ನಂತರ ಲಿಂಕ್‌ ಯುವರ್ ಆಧಾರ್ ಎಂಬುದರ ಮೇಲೆ ಕ್ಲಿಕ್‌ ಮಾಡಿ, ಆಧಾರ್ ಕಾರ್ಡಿನ ಸಂಖ್ಯೆಗಳ ಮಾಹಿತಿಯನ್ನು ಅಲ್ಲಿ ನೀಡಿ.

ತದನಂತರ ಚೆಕ್‌ ಬಾಕ್ಸ್‌ ನಲ್ಲಿ ಸೆಂಡ್‌ ಓಟಿಪಿ ಎಂಬ ಆಯ್ಕೆಯನ್ನು ಒತ್ತಿದಾಗ, ನೀವು ಈಗಾಗಲೇ ನೀಡಿರುವ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪ್‌ ಸಂಖ್ಯೆ ಬರುತ್ತದೆ. ಓಟಿಪಿ ನೀಡಿ ನಿಮ್ಮ ಕೆವೈಸಿ ಪೂರ್ಣಗೊಳಿಸಿ. ಈ ಪ್ರಕ್ರಿಯೆಯ ನಂತರ ನಿಮ್ಮ ಆಧಾರ್ ಕಾರ್ಡ್ ಅನ್ನು IRCTC ಖಾತೆಯೊಂದಿಗೆ ಲಿಂಕ್‌ ಮಾಡಲಾಗುತ್ತದೆ. IRCTC ವೆಬ್‌ಸೈಟಿಗೆ ಪುನಃ ಲಾಗಿನ್‌ ಆಗಿ, ಸುಲಭವಾಗಿ ಟಿಕೆಟ್‌ ಬುಕ್‌ ಮಾಡಬಹುದು.

You may also like

Leave a Comment