Home » ಸುಳ್ಯ : ಲಾರಿ -ಬಸ್ ಡಿಕ್ಕಿ, ಗಾಯಾಳು ಲಾರಿ ಚಾಲಕ ಮೃತ್ಯು

ಸುಳ್ಯ : ಲಾರಿ -ಬಸ್ ಡಿಕ್ಕಿ, ಗಾಯಾಳು ಲಾರಿ ಚಾಲಕ ಮೃತ್ಯು

by Praveen Chennavara
0 comments

ಸುಳ್ಯ : ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಾರಿ ಚಾಲಕ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನ.15ರ ಸಂಜೆ ಮಾಣಿ ಮೈಸೂರು ರಾ.ಹೆದ್ದಾರಿಯ ಕಲ್ಲುಗುಂಡಿಯಲ್ಲಿ ಈ ಅಪಘಾತ ನಡೆದಿದ್ದು, ಹಲವಾರು ಮಂದಿ ಗಾಯಗೊಂಡಿದ್ದರು.

ಬಸ್ ಗೆ ಲಾರಿ ಡಿಕ್ಕಿಯಾದ ವೇಳೆ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಲಾರಿ ಚಾಲಕನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಚಾಲಕ ತನ್ನ ಊರಾದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳುತ್ತಿದ್ದ ವೇಳೆ ಕುಶಾಲನಗರ ತಲುಪುವ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ.

You may also like

Leave a Comment