Home » WhatsApp : ಒಂದೇ ವಾಟ್ಸಪ್ ಇನ್ಮುಂದೆ ನಾಲ್ಕು ಫೋನಿನಲ್ಲಿ | ಶೀಘ್ರವೇ ಸಿಹಿ ಸುದ್ದಿ

WhatsApp : ಒಂದೇ ವಾಟ್ಸಪ್ ಇನ್ಮುಂದೆ ನಾಲ್ಕು ಫೋನಿನಲ್ಲಿ | ಶೀಘ್ರವೇ ಸಿಹಿ ಸುದ್ದಿ

0 comments

ಇದೀಗ ವಾಟ್ಸಪ್ ಹೊಸತಾದ ಅಪ್‌ಡೇಟ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ. ಈ ಹಿಂದೆ ವಾಟ್ಸಪ್ ನಲ್ಲಿ ಹಲವು ಬದಲಾವಣೆಗಳು ಆಗಿದ್ದು, ಈ ಬಾರಿ ಆಂಡ್ರಾಯ್ಡ್ ಬೀಟಾ ವಾಟ್ಸ್‌ಆ್ಯಪ್ ಬಳಕೆದಾರರಿಗೆ ‘ಲಿಂಕ್ ವಿತ್ ಯುವರ್ ಫೋನ್’ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.

ಈ ಹೊಸ ಅಪ್‌ಡೇಟ್‌ನ ವೈಶಿಷ್ಟ್ಯತೆ ಏನಂದ್ರೆ, ವಾಟ್ಸ್‌ಆ್ಯಪ್‌ನ ಒಂದು ಖಾತೆಯನ್ನು ನಾಲ್ಕು ಸ್ಮಾರ್ಟ್‌ ಫೋನ್‌ನಲ್ಲಿ ಜೋಡಿಸಿ ಬಳಸುವ ಆಯ್ಕೆಯಾಗಿದ್ದು, ಇದೀಗ ಪರಿಶೀಲಿಸಲಾಗುತ್ತಿದೆ.

ಈಗಾಗಲೇ ಬಳಕೆದಾರರು ಪ್ರೈಮರಿ ಫೋನ್‌ನಲ್ಲಿ ವಾಟ್ಸಾಪ್ ಆನ್ ಇಲ್ಲದಿದ್ದರೂ ಕೂಡ ಮತ್ತೊಂದು ಡಿವೈಸ್‌ನಲ್ಲಿ ವಾಟ್ಸ್‌ಆ್ಯಪ್ ವೆಬ್ ಆವೃತ್ತಿಯನ್ನು ಬಳಸಬಹುದಾಗಿದೆ. ಇದರಿಂದಾಗಿ ಮತ್ತೆ ನಾಲ್ಕು ಡಿವೈಸ್‌ಗಳನ್ನು ಲಿಂಕ್ ಮಾಡುವ ಅವಕಾಶ ಹೊಸ ಅಪ್‌ಡೇಟ್‌ನಲ್ಲಿ ಲಭ್ಯವಾಗಲಿದೆ.

ಇದೀಗ ಈ ಹೊಸ ಫೀಚರ್ ಪರಿಶೀಲನೆಯಲ್ಲಿದ್ದು, ಮುಂದೆ ಒಂದು ಪೋನ್‌ನಲ್ಲಿಯೇ ಹಲವು ವಾಟ್ಸ್ಆ್ಯಪ್ ಖಾತೆಗಳನ್ನು ಲಿಂಕ್ ಮಾಡಿಕೊಂಡು ಬಳಸುವ ಅವಕಾಶ ಸಿಗಲಿದೆ.

You may also like

Leave a Comment