Home » ನ್ಯಾಷನಲ್ ಕ್ರಶ್ ಗೆ SORRY ಹೇಳಿದ ವಾರ್ನರ್! ಎಂತಾಯ್ತು?

ನ್ಯಾಷನಲ್ ಕ್ರಶ್ ಗೆ SORRY ಹೇಳಿದ ವಾರ್ನರ್! ಎಂತಾಯ್ತು?

by ಹೊಸಕನ್ನಡ
0 comments

ಕ್ರಿಕೆಟ್ ಮೂಲಕ ಅಬ್ಬರಿಸಿ ತನ್ನ ಆಟದ ವೈಖರಿಯಯಲ್ಲೇ ಅಭಿಮಾನಿಗಳನ್ನು ಪಡೆದಿರುವ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಭಾರತದಲ್ಲೂ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ತಮ್ಮ ಐಪಿಎಲ್​ (IPL) ಆಟದ ಪ್ರದರ್ಶನ ಮಾತ್ರವಲ್ಲದೇ, ಭಾರತೀಯ ಹಾಡುಗಳಿಗೆ ವಾರ್ನರ್ ರವರು ಡ್ಯಾನ್ಸ್​ ಮಾಡುವ ಸೊಬಗಿಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ. ಹಾಗಾಗಿ, ಕ್ರಿಕೆಟ್ ಜೊತೆಗೆ ಡ್ಯಾನ್ಸ್ ಸ್ಟೈಲ್ ಮೂಲಕವೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಿರುವುದು ವಿಶೇಷ.

ಭಾರತೀಯ ಸಿನಿಮಾದ ಹಾಡುಗಳಿಗೆ ಡ್ಯಾನ್ಸ್​ ಮಾಡಿ ಟ್ರೆಂಡಿಂಗ್ ಆಗುತ್ತಿರುವ ವಾರ್ನರ್ ರವರು ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಅವರ ಇನ್​​ಸ್ಟಾಗ್ರಾಂನಲ್ಲಿ (Instagram) 5 ಮಿಲಿಯನ್​ ಹಿಂಬಾಲಕರನ್ನು ಪಡೆದಿದ್ದು, ಇದೀಗ ಅವರು ಮತ್ತೊಂದು ಭಾರತೀಯ ಸಿನಿಮಾದ ಹಾಡಿಗೆ ವಿಡಿಯೋ ಮಾಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳಂತೂ ವಾರ್ನರ್​ ಅವರ ವಿಡಿಯೋಗೆ ಹೊಟ್ಟೆ ಹುಣ್ಣಾಗುವಂತೆ ಬಿದ್ದು ಬಿದ್ದು ನಗುತ್ತಿದ್ದಾರೆ.

ಡೇವಿಡ್ ವಾರ್ನರ್ ಹೆಚ್ಚಾಗಿ ಸೌತ್​ ಸಿನಿಮಾದ ಕ್ರೇಜ್​ ಹೊಂದಿದ್ದು, ಬುಟ್ಟಬೊಮ್ಮ ಹಾಡಿನಲ್ಲಿ ಪತ್ನಿಯೊಂದಿಗೆ ವಾರ್ನರ್ ಹೆಜ್ಜೆ ಹಾಕಿದ್ದರು. ಇದರ ಜೊತೆಗೆ ಬಾಹುಬಲಿಯಲ್ಲಿ ಪ್ರಭಾಸ್ ಡೈಲಾಗ್ ಗಳಿಗೆ ಸೌತ್ ಸ್ಟಾರ್ ಸಿನಿಮಾಗಳಲ್ಲಿ ಪೇಸ್ ಆಫ್ ಆ್ಯಪ್ ಬಳಸಿ ಕೆಲ ದೃಶ್ಯಗಳಲ್ಲಿ ಆಯಾಯ ಮುಖವನ್ನು ಅಂಟಿಸಿ ಅಭಿಮಾನಿಗಳನ್ನು ಖುಷಿ ಪಡಿಸುತ್ತಲೆ ಇರುತ್ತಾರೆ.

ಟಿಕ್​ಟಾಕ್​ನಲ್ಲಿ ಸಕ್ರಿಯರಾಗಿದ್ದ ವಾರ್ನರ್, ಭಾರತದಲ್ಲಿ ಟಿಕ್​ಟಾಕ್ ಬ್ಯಾನ್ ಆದ ನಂತರ ಇದೀಗ ಹೊಸ ಆ್ಯಪ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನೂ ವಾರ್ನರ್ ಅವರು ತಮ್ಮ ಮುಖವನ್ನು ರಿಪ್ಲೇಸ್ ಮಾಡಿ ಹೃತಿಕ್ ರೋಷನ್​​ ವಿಡಿಯೋ ಕೂಡ ಮಾಡಿದ್ದು, ಇನ್ಸ್ತಾ ಗ್ರಾಮ್ ನಲ್ಲಿ ಈ ವಿಡಿಯೋ 2.3 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿತ್ತು. ಅಲ್ಲದೇ ತಲೈವಾ ರಜನಿ ವಿಡಿಯೋ ಪೋಸ್ಟ್​​ ಸಹ ಸಖತ್ ವೈರಲ್ ಆಗಿತ್ತು.

https://www.instagram.com/reel/Ck8AnaDPavL/?utm_source=ig_web_copy_link

ಇಷ್ಟೇ ಅಲ್ಲದೇ,ಗಣೇಶ ಹಬ್ಬದ ವೇಳೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಗಣಪತಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಭಾರತೀಯರಿಗೆ ಗಣೇಶ ಚತುರ್ಥಿಯ ಶುಭಾಷಯಗಳನ್ನು ತಿಳಿಸಿದ್ದ ವಾರ್ನರ್ , ಈ ಪೋಟೋಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಈ ಫೋಟೋ ಸಹ ಸಖತ್ ವೈರಲ್ ಆಗಿತ್ತು.

ಸದಾ ಒಂದಲ್ಲ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುವ ವಾರ್ನರ್ ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಅವರ ಭೀಷ್ಮ ಚಿತ್ರದ ಹಾಡಿಗೆ ರೀಲ್ಸ್ ಮಾಡಿದ್ದು, ಇದೀಗ ಈ ವೀಡಿಯೊ ಎಲ್ಲೆಡೆ ಸಂಚಲನ ಮೂಡಿಸಿದೆ. ಮತ್ತೊಂದು ವಿಶೇಷ ಏನಪ್ಪಾ ಅಂದರೆ, ಹೀರೋಗಳ ಮುಖದ ಮೇಲೆ ತಮ್ಮ ಮುಖವನ್ನು ಎಡಿಟ್ ಮಾಡುತ್ತಿದ್ದ ವಾರ್ನರ್ ಈ ಬಾರಿ ರಶ್ಮಿಕಾ ಮಂದಣ್ಣ ಅವರ ಮುಖವನ್ನಾಗಿ ಬದಲಾಯಿಸಿಕೊಂಡಿರುವುದು ವಿಭಿನ್ನವಾಗಿದ್ದು, ನಿತಿನ್ ಅಭಿನಯದ ಭೀಷ್ಮ ಚಿತ್ರದ ‘ವಾಟ್​ ಎ ಬ್ಯೂಟಿ’ ಹಾಡಿನ ಸಾಹಿತ್ಯವನ್ನು ಎಡಿಟ್ ಮಾಡಿದ್ದಾರೆ.

ರಶ್ಮಿಕಾ ಮುಖಭಾವಕ್ಕೆ ತಮ್ಮ ಮುಖವನ್ನು ಎಡಿಟ್ ಮಾಡಿದ್ದು, ನೋಡುಗರು ಈ ವೀಡಿಯೋ ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ.ಅಲ್ಲದೆ, ಈ ವಿಡಿಯೋ ಮಾಡಿದ್ದಕ್ಕಾಗಿ ರಶ್ಮಿಕಾ ಮಂದಣ್ಣ ಅವರನ್ನು ಕ್ಷಮಿಸಿ (ತಮಾಷೆಗಾಗಿ) ಎಂದು ಬರೆದುಕೊಂಡಿರುವ ವಾರ್ನರ್, ಈ ವಿಡಿಯೋಗೆ ನೆಟಿಜನ್‌ಗಳು ಕೂಡ ವಿವಿಧ ಕ್ರೇಜಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಅಲ್ಲದೆ, ಟೀಂ ಇಂಡಿಯಾದ ಮಾಜಿ ಸ್ಟಾರ್ ಆಲ್ ರೌಂಡರ್ ಯುವರಾಜ್ ಕೂಡ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಏನೇ ಆಗಲಿ.. ಭಾರತೀಯರನ್ನು ಜೊತೆಗೆ ತಮ್ಮ ಅಭಿಮಾನಿಗಳನ್ನು ಸದಾ ಖುಷಿಯಾಗಿಡಲು ವಾರ್ನರ್ ರವರು ಒಂದಲ್ಲ ಒಂದು ವಿಡಿಯೋ ಮಾಡಿ ರಂಜಿಸುವುದು ವಿಶೇಷ.

You may also like

Leave a Comment