ಹೊಸದಿಲ್ಲಿ: ಮೆಹ್ರಾಲಿ ಕೊಲೆ ಪ್ರಕರಣದಲ್ಲಿ ಗಂಟೆಗೊಂದು ಫ್ರೆಶ್ ಆದ ಮಾಹಿತಿ ಮತ್ತು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಮನುಷ್ಯತ್ವವನ್ನೇ ಪ್ರಶ್ನಿಸುವ, ಕ್ರೌರ್ಯದ ಪರಾಕಾಷ್ಠೆ ತೋರಿದ ಹೊಸ ಬೆಳವಣಿಗೆಯೊಂದು ಇದೀಗ ತಾನೇ ಹೊರಬಿದ್ದಿದ್ದು, ಕೊಲೆ ಆರೋಪಿ ಅಫ್ತಾಬ್ ಪೂನವಾಲಾ ಕೃತ್ಯ ನೋಡಿ ಪೊಲೀಸರಲ್ಲೇ ನಡುಕ ಮೂಡಿದೆ.
ಆತ ತನ್ನ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಶ್ರದ್ಧಾ ವಾಕರ್‌ನ ‘ತಲೆ ಕತ್ತರಿಸಿ ಇಟ್ಟ’ ತಲೆಯೊಂದಿಗೆ ಮಾತನಾಡುತ್ತಿದ್ದ. ಆಫ್ತಾಬ್ ಅವರು ‘ಕತ್ತರಿಸಿದ’ ಇಟ್ಟ ಆತನ ಗೆಳತಿ ಶ್ರದ್ದಾಳ ತಲೆಯೊಂದಿಗೆ ಮಾತನಾಡುತ್ತಿದ್ದನಂತೆ. ಹಾಗೆ ಮಾತನಾಡುವಾಗ ಆಗ ಕೆಲವೊಮ್ಮೆ ಆತ ಕೋಪಗೊಳ್ಳುತ್ತಿದ್ದ. ಆಗ ಆತ ಆ ಸತ್ತು ಹೋದ ತಲೆಗೆ ‘ಕಪಾಳಮೋಕ್ಷ’ ಕೂಡ ಮಾಡುತ್ತಿದ್ದ. ಆತ ಮಾಡಿದ ಕೊಲೆ, ನಂತರ ಆತ ಅದನ್ನು ಕತ್ತರಿಸಿದ ಪರಿ, ಮತ್ತು ನಂತರ ಶವದ ಜತೆ ಆತ ನಡೆದುಕೊಂಡ ರೀತಿಯನ್ನು ನೋಡಿ ಹೀನಾತಿಹೀನ ಕ್ರೈಮ್ ಅನ್ನು ನೋಡಿದ ಪೊಲೀಸರೇ ದಂಗಾಗಿದ್ದಾರೆ.
ಮೇ 18 ರಂದು ತನ್ನ ಲಿವ್ ಇನ್ ಪಾಲುದಾರ ಹಿಂದೂ ಹುಡುಗಿ ಶ್ರದ್ಧಾ ವಾಕರ್ ಅನ್ನು ಕೊಲೆ ಮಾಡಿದ್ದನು ಮತ್ತು ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದನು. ಅವರು ಸತ್ತವಳ ದೇಹದ ತುಂಡುಗಳನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಎಸೆಯುವವರೆಗೆ ಇಡಲೆಂದು 300 ಲೀಟರ್ ಫ್ರಿಡ್ಜ್ ಖರೀದಿಸಿದ್ದನು. ಆತ ಅವಳ ‘ಕತ್ತರಿಸಿದ’ ತಲೆ ಮತ್ತು ಅವಳ ಮುಂಡವನ್ನು ಫ್ರಿಜ್‌ನಲ್ಲಿ ಇರಿಸಿದ್ದು, ಮೊದಲಿಗೆ ದೇಹದ ಎಲ್ಲಾ ತುಂಡುಗಳನ್ನು ಕಾಡಿಗೆ ಒಯ್ದು ಬಟವಾಡೆ ಮಾಡಿ ಬಂದಿದ್ದ !! ಅಲ್ಲಿಯ ತನಕ ಆಕೆಯ ತಲೆಯನ್ನು ಹಾಗೆಯೇ ಇರಿಸಿದ್ದ. ನಂತರ ಕೊನೆಯಲ್ಲಿ ಆಕೆಯ ರುಂಡವನ್ನು ವಿಲೇವಾರಿ ಮಾಡಿದ್ದ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ ಕೊಲೆಗೆ ಒಂದು ವಾರಕ್ಕೂ ಮುನ್ನ ತನ್ನ ಗೆಳತಿಯನ್ನು ಕೊಲ್ಲಲು ಮನಸ್ಸು ಮಾಡಿದ್ದನಾತ. ಅದಕ್ಕಾಗಿ ಪ್ಲಾನ್ ಮಾಡಿದ್ದ. “ಕೊಲೆಯಾಗುವ ಒಂದು ವಾರಕ್ಕೂ ಮುನ್ನ (ಮೇ 18) ಶ್ರದ್ಧಾಳನ್ನು ಕೊಲ್ಲಲು ಮನಸ್ಸು ಮಾಡಿದ್ದೆ. ಅಂದು ಕೂಡ ಶ್ರದ್ಧಾ ಮತ್ತು ನನ್ನ ನಡುವೆ ಜಗಳವಾಗಿತ್ತು, ಆಕೆ ಇದ್ದಕ್ಕಿದ್ದಂತೆ ಭಾವುಕರಾಗಿ ಅಳಲು ತೋಡಿಕೊಂಡಾಗ ನಾನು ಅವಳನ್ನು ಕೊಲ್ಲಲು ನಿರ್ಧರಿಸಿದೆ. ಹಾಗಾಗಿ ನಾನು ಕೊಲೆ ನಿರ್ದಾರ ತೆಗೆದುಕೊಂಡೆ” ಎಂದು ದೆಹಲಿ ಪೊಲೀಸ್ ಮೂಲವೊಂದು ಅಫ್ತಾಬ್ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿರುವುದಾಗಿ ಹೇಳಿದೆ.
ಅಪರಾಧಕ್ಕೆ ಸಂಬಂಧಿಸಿದ ವೆಬ್ ಸರಣಿಗಳು ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸಲು ಅಫ್ತಾಬ್ ತನ್ನ ಒಲವನ್ನು ಒಪ್ಪಿಕೊಂಡಿದ್ದಾನೆ. ಮತ್ತು ಈ ಕಾರ್ಯಕ್ರಮಗಳಿಂದಲೇ ಅವನು ಕತ್ತರಿಸಿದ ದೇಹದ ಭಾಗಗಳನ್ನು ಸಂರಕ್ಷಿಸುವ ಮತ್ತು ನಂತರ ಅವುಗಳನ್ನು ವಿಲೇವಾರಿ ಮಾಡುವ ಆಲೋಚನೆಗಳನ್ನು ಎರವಲು ಪಡೆದಿದ್ದನು ಎಂದು ಪೊಲೀಸರು ಹೇಳಿದ್ದಾರೆ.
“ನಾನು ಅಪರಾಧದ ವೆಬ್ ಸರಣಿಗಳು ಮತ್ತು ಧಾರಾವಾಹಿಗಳನ್ನು ವೀಕ್ಷಿಸಲು ಇಷ್ಟಪಡುತ್ತೇನೆ ಮತ್ತು ಈ ಕಾರ್ಯಕ್ರಮಗಳನ್ನು ನೋಡುವಾಗ ನಾನು ದೇಹದ ಭಾಗಗಳನ್ನು ಸಂರಕ್ಷಿಸುವ ಬಗ್ಗೆ ತಿಳಿದುಕೊಂಡೆ. ಮತ್ತು ಅವರ ಕುಟುಂಬ ಮತ್ತು ಸ್ನೇಹಿತರ ದೃಷ್ಟಿಯಲ್ಲಿ ಶ್ರದ್ಧಾಳನ್ನು ಜೀವಂತ ಇದ್ದಾಳೆ ಎಂದು ಬಿಂಬಿಸುವ ಆಲೋಚನೆಗಳನ್ನು ರೂಪಿಸಿಕೊಂಡೆ. ಯಾವುದೇ ಅನುಮಾನ ಬರದೇ ಇರಲಿ ಅಂತ ಕೊಲೆಯಾದ ನಂತರ ಶ್ರದ್ಧಾಳ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ನಾನು ಪೋಸ್ಟ್ ಮಾಡುತ್ತಲೇ ಇದ್ದೆ. ಹಾಗಾಗಿ ಆಕೆ ಬದುಕಿದ್ದಾಳೆ ಎಂದು ನಾನು ಹಲವು ತಿಂಗಳುಗಳ ಕಾಲ ನಂಬಿಸಿದೆ. ಎಲ್ಲಾ ಪ್ಲಾನ್ ಮತ್ತು ಕೊಲೆ ಮತ್ತು ಶವದ ತುಂಡು ತುಂಡು ಮತ್ತದರ ವಿಲೇವಾರಿಯನ್ನು ಖುದ್ದು ನಾನೇ ಎಲ್ಲವನ್ನೂ ಮಾಡಿದ್ದೇನೆ” ಎಂದು ಆರೋಪಿ ದೆಹಲಿ ಪೊಲೀಸರಿಗೆ ತಿಳಿಸಿದ್ದಾನೆ.
ಇದೀಗ ಶ್ರದ್ಧಾ ಹತ್ಯೆ ಪ್ರಕರಣಡಾ ಬಗ್ಗೆ ದೇಶವ್ಯಾಪಿ ಹೋರಾಟ ತೀವ್ರವಾಗುತ್ತಿದೆ. ‘ಅವನನ್ನು ಗಲ್ಲಿಗೇರಿಸಿ’ ಎಂದು ಆಕ್ರೋಶಭರಿತ ಕೂಗು ಕೇಳಿಬರುತ್ತಿದೆ.
