Home » Debit Card Withdrawal Limit: ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ

Debit Card Withdrawal Limit: ಡೆಬಿಟ್ ಕಾರ್ಡ್ ಬಳಕೆದಾರರಿಗೆ ಸಿಹಿ ಸುದ್ದಿ

0 comments

ನಿಮ್ಮಲ್ಲಿ ಡೆಬಿಟ್ ಕಾರ್ಡ್ ಇದೆಯಾ ? ಹಾಗಾದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ದಿರಬಹುದು ಅಲ್ವೇ? ಇಲ್ಲಿದೆ ನೋಡಿ ನಿಮಗೆ ಒಳ್ಳೆಯ ಸುದ್ದಿ. ಬ್ಯಾಂಕ್ ಡೆಬಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಮಾಸ್ಟರ್‌ಕಾರ್ಡ್ ಪ್ಲಾಟಿನಂ ರೂಪಾಂತರಗಳು, ರುಪೇ ಕಾರ್ಡ್, ವೀಸಾ ಗೋಲ್ಡನ್ ಡೆಬಿಟ್ ಕಾರ್ಡ್, ರುಪೇ ಸೆಲೆಕ್ಟ್ ಮತ್ತು ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್‌ಗಳ ಮಿತಿಯನ್ನು ಹೆಚ್ಚಿಸಲು ಯೋಜಿಸುತ್ತಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಇತ್ತೀಚೆಗೆ ಡೆಬಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸಲು ಯೋಜಿಸಿದೆ. ಇದು ಉನ್ನತ- ಮಟ್ಟದ ಡೆಬಿಟ್ ಕಾರ್ಡ್ ರೂಪಾಂತರಗಳಿಗೆ ಅನ್ವಯಿಸುತ್ತದೆ.

ಮಾಸ್ಟರ್‌ಕಾರ್ಡ್ ಪ್ಲಾಟಿನಂ ರೂಪಾಂತರಗಳು, ರುಪೇ ಮತ್ತು ವೀಸಾ ಗೋಲ್ಡ್ ಡೆಬಿಟ್ ಕಾರ್ಡ್‌ಗಳಿಗೆ ಎಟಿಎಂ ನಗದು ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ, ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ. ಈಗ ಇರುವ ಮಿತಿ ರೂ. 50 ಸಾವಿರ ಇದೆ.

ಅದೇ ಪಿಒಎಸ್ ಯಂತ್ರ ಅಥವಾ ಇ-ಕಾಮರ್ಸ್ ವಹಿವಾಟಿನ ಮಿತಿಯನ್ನು ನೋಡಿದರೆ, ಮಾಸ್ಟರ್ ಕಾರ್ಡ್ ಪ್ಲಾಟಿನಂ ರೂಪಾಂತರಗಳು, ರುಪೇ ಮತ್ತು ವೀಸಾ ಗೋಲ್ಡ್ ಡೆಬಿಟ್ ಕಾರ್ಡ್‌ಗಳು ರೂ. 3 ಲಕ್ಷ ಹೆಚ್ಚಿಸಲಾಗುವುದು. ಪ್ರಸ್ತುತ ಈ ಮಿತಿ ರೂ. 1,25,000 ಇದೆ.

ರುಪೇ ಸೆಲೆಕ್ಟ್ ಮತ್ತು ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ, ಈ ಕಾರ್ಡ್‌ಗಳ ಪಿಒಎಸ್ ಮತ್ತು ಇ-ಕಾಮರ್ಸ್ ವಹಿವಾಟಿನ ಮಿತಿ ಪ್ರಸ್ತುತ ರೂ. 1.25 ಲಕ್ಷ. ಇದು ರೂ. 5 ಲಕ್ಷಕ್ಕೆ ಹೆಚ್ಚಿಸಲು ಬ್ಯಾಂಕ್ ಪ್ರಸ್ತಾಪಿಸಿದೆ. ಇವೆಲ್ಲವೂ ಗರಿಷ್ಠ ದೈನಂದಿನ ವಹಿವಾಟು ಮಿತಿಗಳಾಗಿವೆ

ಆದಾಗ್ಯೂ, ಪ್ಲಾಟಿನಂ ಕಾರ್ಡ್‌ಗಳು ಪ್ರಸ್ತುತ ದೈನಂದಿನ ನಗದು ಹಿಂಪಡೆಯುವ ಮಿತಿಯನ್ನು ರೂ. 50 ಸಾವಿರ. ಒಂದು ಬಾರಿ ನಗದು ಹಿಂಪಡೆಯುವ ಮಿತಿ ರೂ. 20 ಸಾವಿರ ಮುಂದುವರಿದಿದೆ. ಇ-ಕಾಮರ್ಸ್ ಮತ್ತು ಪಿಒಎಸ್ ಯಂತ್ರಗಳ ಮಿತಿ 1.25 ಲಕ್ಷ ರೂ.

ಇಷ್ಟು ಮಾತ್ರವಲ್ಲದೇ, ಬ್ಯಾಂಕ್ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್‌ಗಳಲ್ಲಿ ತಮ್ಮದೇ ಆದ ಮಿತಿಯನ್ನು ಹೊಂದಾಣಿಕೆ ಮಾಡಬಹುದು. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್, PNB ATM, IVR ಮೂಲಕ ಕಸ್ಟಮೈಸ್ ಮಾಡಿದ ಮಿತಿಯನ್ನು ಹೊಂದಲು ಅವಕಾಶವಿದೆ. ಬ್ಯಾಂಕ್ ನೀಡುವ ಗರಿಷ್ಠ ಮಿತಿಗೆ ಒಳಪಟ್ಟು ಗ್ರಾಹಕರು ತಮ್ಮ ಆಯ್ಕೆಯ ಮಿತಿಯನ್ನು ಹೊಂದಿಸಬಹುದು.

You may also like

Leave a Comment