Home » ಮಂಗಳೂರು ಬಾಂಬ್ ಸ್ಫೋಟ, ಕರಾವಳಿಗರನ್ನು ಬೆದರಿಸುವ ಕೃತ್ಯ | ಉನ್ನತ ತನಿಖೆಗೆ ಆಗ್ರಹಿಸಿದ ಶರಣ್ ಪಂಪ್ ವೆಲ್

ಮಂಗಳೂರು ಬಾಂಬ್ ಸ್ಫೋಟ, ಕರಾವಳಿಗರನ್ನು ಬೆದರಿಸುವ ಕೃತ್ಯ | ಉನ್ನತ ತನಿಖೆಗೆ ಆಗ್ರಹಿಸಿದ ಶರಣ್ ಪಂಪ್ ವೆಲ್

0 comments

ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣವು ಕರಾವಳಿಯ ಜನತೆಯನ್ನು ಬೆದರಿಸುವ ಕೃತ್ಯವಾಗಿದ್ದು, ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ.

ಕರಾವಳಿಯ ಜನತೆಯನ್ನು ಬೆದರಿಸುವ ಕೃತ್ಯವಾಗಿದ್ದು ನಮಗೆ ಸವಾಲೆಸದಂತಾಗಿದೆ. ಉಗ್ರ ಕೃತ್ಯದ ವಿರುದ್ಧ ಕರಾವಳಿಯ ಜನತೆ ಎಚ್ಚೆತ್ತುಕೊಂಡು ಭಯೋತ್ಪಾದಕರ ಸವಾಲುಗಳನ್ನು ಎದುರಿಸಲು ತಯಾರಾಗಬೇಕಾಗಿದೆ. ಈ ಉಗ್ರ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ಖಂಡಿಸುತ್ತದೆ. ಮತ್ತು ಈ ಕೃತ್ಯದಲ್ಲಿ ಸ್ಥಳೀಯರ ಕೈವಾಡವಿರದೆ ಈ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಾಂಬ್ ಟ್ರಯಲ್ ಬ್ಲಾಸ್ಟ್ ನಡೆದಿದ್ದು ಆದ್ದರಿಂದ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ಈ ಕೃತ್ಯದ ಹಿಂದೆ ಕೈಜೋಡಿಸಿದವರನ್ನು ಶೀಘ್ರವಾಗಿ ಬಂಧಿಸಿ ಸಮಗ್ರ ತನಿಖೆ ನಡೆಸಲು ಅಗ್ರಹಿಸುತ್ತೇನೆ ಎಂದು ಶರಣ್ ಪಂಪ್ ವೆಲ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

You may also like

Leave a Comment