Home » ಬೆಳ್ತಂಗಡಿ : ಬೈಕ್ ಸ್ಕಿಡ್ – ಯುವಕ ದಾರುಣ ಸಾವು!

ಬೆಳ್ತಂಗಡಿ : ಬೈಕ್ ಸ್ಕಿಡ್ – ಯುವಕ ದಾರುಣ ಸಾವು!

0 comments

ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಅಣಿಯೂರಿನ ಪ್ರದೀಪ ಗೌಡ ಎಂಬಾತ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇನ್ನೂ ಈ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ನಡೆದಿದೆ.

ಬೆಳ್ತಂಗಡಿ: ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರೀ ದೇವಸ್ಥಾನದ ಪಕ್ಕದ ತಿರುವು ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರ, ಪ್ರದೀಪ ಗೌಡ (22) ಎಂಬಾತ ಮೃತಪಟ್ಟಿದ್ದಾರೆ. ಈ ಘಟನೆ ಬುಧವಾರ ತಡರಾತ್ರಿ ನಡೆದಿದ್ದು, ಮೃತ ಪ್ರದೀಪ ಎಂಬವರು ಅಣಿಯೂರಿನವರು ಎಂದು ಗುರುತಿಸಲಾಗಿದೆ.

ಇವರು ಅಣಿಯೂರಿನ ನೋಣಯ್ಯ‌ ಗೌಡ ಎಂಬವರ ಪುತ್ರರಾಗಿದ್ದಾರೆ. ಅಂದು ಪ್ರದೀಪ ಗೌಡ ಅವರ ಸಂಬಂಧಿಗಳ ಮನೆಯಲ್ಲಿ ಶುಭ ಕಾರ್ಯವಿತ್ತು ಆ ಕಾರಣ ವಸ್ತುವೊಂದನ್ನು ನೀಡಲು ಅಲ್ಲಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಆ ವೇಳೆ ಪ್ರದೀಪ ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಎಡ ಭಾಗದಲ್ಲಿದ್ದ ಮನೆಯ ಗೇಟಿನ‌ಬಳಿ ಇದ್ದ ಕಲ್ಲಿನ‌ಕಂಬಕ್ಕೆ ಡಿಕ್ಕಿಹೊಡೆದಿದೆ.

ಆ ಕೂಡಲೇ ಸ್ಥಳೀಯರು ಅವರನ್ನು ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರಿಗೆ ಕರೆದೊಯ್ಯುವ ಯತ್ನ ನಡೆಸಿದರಾದರೂ ದಾರಿ ಮಧ್ಯೆ ಪ್ರದೀಪ ಅವರು ಸಾವನ್ನಪ್ಪಿದ್ದಾರೆ. ಇನ್ನೂ ಅಪಘಾತವಾದ ರಸ್ತೆಯು ಅಪಾಯಕಾರಿ ವಲಯವಾಗಿದ್ದು ಹಿಂದೆ ಕೂಡಾ ಅಲ್ಲಿ ಸಾಕಷ್ಟು ಅಪಘಾತ ಮತ್ತು ಪ್ರಾಣ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.

You may also like

Leave a Comment