ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್ ಆಗುತ್ತಲೇ ಇರುತ್ತದೆ. ಹೊಸ ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ.ಆದರೆ ಇವೆಲ್ಲವನ್ನೂ ಪರಿಚಯಿಸುವ
ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಜಾಹೀರಾತುಗಳು ಹೆಚ್ಚುತ್ತಲೇ ಇದೆ. ಅದರಲ್ಲೂ ಗೂಗಲ್ ಏನಾದರು ಹೊಸತನದ ಜಾಹೀರಾತನ್ನು ನೀಡಿ ಜನರು ಅದನ್ನು ಕ್ಲಿಕ್ ಮಾಡುವಂತೆ ಮಾಡುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯ ಜಾಹೀರಾತುಗಳನ್ನು ಓಪನ್ ಮಾಡುವ ಮೊದಲು ಎಚ್ಚರವಹಿಸಬೇಕು.
ಯಾಕೆಂದರೆ ದೊಡ್ಡ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಗೂಗಲ್ ಕೂಡ ಒಂದು. ಗೂಗಲ್ ಒಂದು ಮಾಹಿತಿ ತಂತ್ರಜ್ಞಾನ ಅಂತಾನೂ ಹೇಳಬಹುದು. ಯಾವುದೇ ವಿಷಯವನ್ನು ಹುಡುಕಬೇಕಾದರೂ, ತಿಳಿಯಬೇಕಾದರು ಗೂಗಲ್ ಅನ್ನೇ ಹೆಚ್ಚು ಅನುಸರಿಸುತ್ತಾರೆ. ಇದಲ್ಲದೆ ಗೂಗಲ್ ಸ್ಪಷ್ಟ ಮಾಹಿತಿಯನ್ನು ತನ್ನ ಬಳಕೆದಾರರಿಗೆ ಒದಗಿಸುವುದರಿಂದ ಜನರನ್ನು ಬಹಳಷ್ಟು ಆಕರ್ಷಿಸಿದೆ. ಇದೀಗ ಗೂಗಲ್ನಲ್ಲೂ ಜಾಹೀರಾತನ್ನು ಹೆಚ್ಚು ಮಾಡುತ್ತಿದೆ. ಗ್ರಾಹಕರು ಕೂಡ ಕೆಲವೊಂದು ಬಾರಿ ಈ ಆನ್ಲೈನ್ನಲ್ಲಿ ಬರುವಂತಹ ಜಾಹೀರಾತನ್ನು ನೋಡಿ ಆಕರ್ಷಿತರಾಗುತ್ತಾರೆ. ಆದರೆ ಕೆಲವೊಂದು ಬಾರಿ ಆ ಜಾಹೀರಾತುಗಳು ನಕಲಿ ಮಾಹಿತಿಯನ್ನು ನೀಡಿರುತ್ತದೆ. ಮತ್ತೊಂದು ಮುಖ್ಯ ವಿಷಯ ಎಂದರೆ ಈ ರೀತಿಯ ಜಾಹೀರಾತುಗಳನ್ನು ಹ್ಯಾಕರ್‌ಗಳು ತಯಾರು ಮಾಡಿರುತ್ತಾರೆ.
ಗೂಗಲ್ ಎನಾಲಿಟಿಕ್ಸ್ ಮೂಲಕ ಜಾಹೀರಾತು:
ಇಂಟರ್ನೆಟ್ ಬಳಕೆದಾರರು ಯಾವುದೇ ವೆಬ್‌ಸೈಟ್ ತೆರೆದಾಗ ಖಂಡಿತವಾಗಿಯೂ ಗೂಗಲ್ ಜಾಹೀರಾತುಗಳನ್ನು ನೋಡುತ್ತಾರೆ. ಬಳಕೆದಾರರ ವೆಬ್ ಚಟುವಟಿಕೆಗಳ ಆಧಾರದ ಮೇಲೆ ಈ ಗೂಗಲ್ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಬಳಕೆದಾರರು ಯಾವುದೇ ಉತ್ಪನ್ನದ ಬಗ್ಗೆ ಹುಡುಕುವಾಗ ಗೂಗಲ್ ಎನಾಲಿಟಿಕ್ಸ್ ಮೂಲಕ ಆ ವಸ್ತುವಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಕಾಣಿಸುವಂತೆ ಮಾಡುತ್ತದೆ. ಬಳಕೆದಾರರು ಆ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿದಾಗ, ಆ ಐಟಂ ಅನ್ನು ಮಾರಾಟ ಮಾಡುವ ಶಾಪಿಂಗ್ ವೆಬ್‌ಸೈಟ್ ಅಥವಾ ಉತ್ಪನ್ನ ಪುಟ ತೆರೆಯುತ್ತದೆ.
ಪ್ರಸ್ತುತ ಭದ್ರತಾ ಬೆದರಿಕೆ ಪೋಸ್ಟ್‌ನಲ್ಲಿ ಮೈಕ್ರೋಸಾಫ್ಟ್ ಈ ಸಮಸ್ಯೆಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಅದೃಷ್ಟವಶಾತ್, ಈ ಭದ್ರತಾ ಎಚ್ಚರಿಕೆಯು Microsoft ನಿಂದ ಬಂದಿದೆ. ಕಂಪನಿಯು ಈಗಾಗಲೇ ಸಮಸ್ಯೆಯನ್ನು ಗಮನಿಸಿದೆ. ವಿಂಡೋಸ್ ಸಾಧನಗಳಲ್ಲಿ ಇಂತಹ ಮಾಲ್‌ವೇರ್ ಮತ್ತು ransomware ವಿರುದ್ಧ ಹೋರಾಡಲು ಮೈಕ್ರೋಸಾಫ್ಟ್ ತನ್ನ ಡಿಫೆಂಡರ್ ಭದ್ರತಾ ಪರಿಹಾರವನ್ನು ಅಪ್ಡೇಟ್ ಮಾಡಿದೆ.
ಮೈಕ್ರೋಸಾಫ್ಟ್ ವತಿಯಿಂದ ಭದ್ರತಾ ಎಚ್ಚರಿಕೆ:
ಈ ಮೇಲಿನ ವಿಷಯಗಳನ್ನು ಗಮನಿಸಿ ಮೈಕ್ರೋಸಾಫ್ಟ್ ಹೊಸ ಭದ್ರತಾ ಎಚ್ಚರಿಕೆಯನ್ನು ಬಿಡುಗಡೆ ಮಾಡಿದೆ. ನಕಲಿ ವೆಬ್‌ಸೈಟ್‌ಗಳ ಮೂಲಕ ಹ್ಯಾಕರ್‌ಗಳು ಗೂಗಲ್ ಜಾಹೀರಾತುಗಳ ನೆಪದಲ್ಲಿ ಮಾಲ್ ವೇರ್ ಮತ್ತು ರಾನ್ಸಮ್ ವೇರ್ ಮೂಲಕ ದಾಳಿ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
Ransomware ಹೆಸರಿನ ರಾಯಲ್ (DEV-0569) ಮಾಲ್‌ವೇರ್ ಅನ್ನು ಮೈಕ್ರೋಸಾಫ್ಟ್ ಸಿಸ್ಟಮ್‌ಗೆ ಡೌನ್‌ಲೋಡ್ ಮಾಡಿದರೆ, ಆಂಟಿ-ವೈರಸ್ ಅಪ್ಲಿಕೇಶನ್‌ಗಳಂತಹ ಭದ್ರತಾ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದು ಮೈಕ್ರೋಸಾಫ್ಟ್ ಹೇಳುತ್ತದೆ, ಇದು ಮತ್ತಷ್ಟು ದಾಳಿಗಳಿಗೆ ಕಾರಣವಾಗಬಹುದು. ಮಾಲ್ವೇರ್ ಅನ್ನು ಪತ್ತೆಹಚ್ಚಿ ತೆಗೆದುಹಾಕುವವರೆಗೆ ಬೆದರಿಕೆ ಇರುತ್ತದೆ ಎಂದು ವಿವರಿಸಿದೆ.
ಇಂತಹ ಬೆದರಿಕೆಗಳ ಬಳಕೆದಾರರನ್ನು ಎಚ್ಚರಿಸಲು ಕಂಪನಿಯು ತನ್ನ ಮೈಕ್ರೋಸಾಫ್ಟ್ 365 ಸೂಟ್ ಅನ್ನು ಬಳಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಅವುಗಳನ್ನು ಸಿಸ್ಟಮ್‌ನಿಂದ ತೆಗೆದುಹಾಕಬಹುದು. ಮೈಕ್ರೋಸಾಫ್ಟ್ ತನ್ನ ಎಡ್ಜ್ ಬ್ರೌಸರ್ ಮೂಲಕ ಭದ್ರತಾ ಬೆಂಬಲವನ್ನು ನೀಡುತ್ತದೆ. ಇಂತಹ ದಾಳಿಗಳ ವಿರುದ್ಧ ಹೋರಾಡಲು ‘ನೆಟ್‌ವರ್ಕ್ ಪ್ರೊಟೆಕ್ಷನ್’ ಆಯ್ಕೆಯನ್ನು ಸಕ್ರಿಯಗೊಳಿಸಲು ಬಳಕೆದಾರರಿಗೆ ಸಲಹೆ ನೀಡಲಾಗುತ್ತಿದೆ.
ಹ್ಯಾಕರ್ಸ್ ಗಳು ಸಿಸ್ಟಮ್ನ ಎಲ್ಲಾ ಹಕ್ಕುಗಳನ್ನು ಪಡೆಯಬಹುದು, ಇದು ಸಿಸ್ಟಮ್ ಮತ್ತು ಕಂಪ್ಯೂಟರ್ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡೇಟಾವನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ವಿಂಡೋಸ್ ಸಾಧನಗಳಲ್ಲಿ ಇಂತಹ ಮಾಲ್‌ವೇರ್ ಮತ್ತು ransomware ವಿರುದ್ಧ ಹೋರಾಡಲು ಮೈಕ್ರೋಸಾಫ್ಟ್ ತನ್ನ ಡಿಫೆಂಡರ್ ಭದ್ರತಾ ಪರಿಹಾರವನ್ನು ಅಪ್ಡೇಟ್ ಮಾಡಿದೆ ಎಂದು ಈ ಮೂಲಕ ಎಚ್ಚರda ಮಾಹಿತಿ ನೀಡಲಾಗಿದೆ.
