Home » ಪತ್ನಿಯ ಜೊತೆ ಅಣ್ಣನ ಅನೈತಿಕ ಸಂಬಂಧ ಶಂಕೆ | ತಮ್ಮ ಮಾಡಿದ ಅಣ್ಣನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಜನ

ಪತ್ನಿಯ ಜೊತೆ ಅಣ್ಣನ ಅನೈತಿಕ ಸಂಬಂಧ ಶಂಕೆ | ತಮ್ಮ ಮಾಡಿದ ಅಣ್ಣನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಜನ

0 comments

ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧವನ್ನು ತನ್ನ ಅಣ್ಣ ಹೊಂದಿದ್ದಾನೆ ಎಂಬ ಶಂಕೆಯಿಂದ ತಮ್ಮನೋರ್ವ ಅಣ್ಣನನ್ನು ಮಾರಕಾಸ್ತ್ರಗಳಿಂದ ಕೊಂದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಈ ಬರ್ಬರ ಕೃತ್ಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.

ತಮ್ಮ ಅಜ್ಮದ್ ಶೇಖ್‌ ಅಣ್ಣ ಅಕ್ಬರ್ ಶೇಖ್​ನನ್ನು ಕೊಲೆ ಮಾಡಿದ್ದಾನೆ. ಅಕ್ಬರ್ ಬೈಕ್ ಮೇಲೆ ಕಬ್ಬೂರದಿಂದ ಚಿಕ್ಕೋಡಿಗೆ ತೆರಳುವಾಗ ಉಮರಾಣಿ ಗ್ರಾಮದ ಹೊರ ವಲಯದ ಹೆದ್ದಾರಿ ಮೇಲೆ ಅಜ್ಮದ್ ತನ್ನ ಕಾರಿನಲ್ಲಿ ಹಿಂಬಾಲಿಸಿ ಕಾರಿನಿಂದ ಬೈಕ್‌ಗೆ ಗುದ್ದಿ ಕೆಳಗೆ ಬೀಳಿಸಿ ನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment