Home » Kitchen Hacks : ಫ್ರಿಜ್​ನಲ್ಲಿ ಹಾಲಿಡಲು ಒಂದು ವಿಧಾನವಿದೆ ! ಎಲ್ಲಿ ಗೊತ್ತಾ?

Kitchen Hacks : ಫ್ರಿಜ್​ನಲ್ಲಿ ಹಾಲಿಡಲು ಒಂದು ವಿಧಾನವಿದೆ ! ಎಲ್ಲಿ ಗೊತ್ತಾ?

0 comments

ಕೆಲವೊಂದು ಆಹಾರವನ್ನು ನಾವು ಸೂಕ್ಷ್ಮವಾಗಿ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಉಪಯೋಗಕ್ಕೆ ಬಾರದೆ ಕೊಳೆತು ಹೋಗುತ್ತದೆ. ಮುಖ್ಯವಾಗಿ ಕೆಲವೊಂದು ಆಹಾರವನ್ನು ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ ಮುಂತಾದವನ್ನು ನಾವು ಫ್ರಿಜ್​ನಲ್ಲಿ ಇಟ್ಟು ಜಾಗೃತಿ ವಹಿಸುತ್ತೇವೆ. ನಾವು ಫ್ರಿಜ್​ನಲ್ಲಿರುವ ಎಲ್ಲಾ ಜಾಗವನ್ನು ತುಂಬಿದ ನಂತರ, ಉಳಿದ ಸ್ಥಳ ಎಂದರೆ ಅದರ ಬಾಗಿಲುಗಳು ಎನ್ನಬಹುದು. ಹಾಗಾಗಿ, ಸಾಮಾನ್ಯವಾಗಿ ಈ ತಂಪು ಪಾನೀಯಗಳು, ಹಾಲಿನ ಬಾಟಲಿಗಳು, ಮೊಸರು ಕಪ್​ಗಳು, ಮಜ್ಜಿಗೆ ಪ್ಯಾಕೆಟ್​ಗಳು ಇತ್ಯಾದಿಗಳನ್ನು ನಾವು ಅಲ್ಲಿ ಸಂಗ್ರಹಿಸುತ್ತೇವೆ.

ಸದ್ಯ ಹಾಲು ಬೇಗನೆ ಕೆಟ್ಟು ಹೋಗುವ ಪದಾರ್ಥ ಆಗಿದೆ. ಆದರೆ ತಜ್ಞರ ಪ್ರಕಾರ ಹಾಲನ್ನು ಪ್ರಿಜ್ ಬಾಗಿಲ ಬಳಿ ಇಡಬಾರದು ಎನ್ನುತ್ತಾರೆ. .

ಸದ್ಯ ಸಾಮಾಜಿಕ ಮಾಧ್ಯಮ ಬಳಕೆದಾರರು ಟಿಕ್​ಟಾಕ್​ನಲ್ಲಿ ಸದ್ಯ ಟ್ರೆಂಡಿಂಗ್ ಇರುವ ವಿಡಿಯೋ ಬಗ್ಗೆ ಚರ್ಚೆ ಮಾಡುತ್ತಿದ್ದು, ಇತ್ತೀಚೆಗಷ್ಟೇ ಫ್ರಿಜ್​ನಲ್ಲಿ ಹಾಲಿಡುವ ವಿಚಾರವಾಗಿ ಜನರು ಸ್ವಲ್ಪ ಗೊಂದಲಕ್ಕೀಡಾಗಿದ್ದು, ಅದರ ಬಗ್ಗೆ ಮಾಹಿತಿ ನೀಡಲಾಗಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಫ್ರಿಜ್ ಬಾಗಿಲುಗಳಲ್ಲಿ ಸಂಗ್ರಹಿಸಬಾರದು ಎಂದು ವಿಡಿಯೋದಲ್ಲಿ ಹೇಳಿದ್ದು, ಇದನ್ನು ನೋಡಿದ ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ. ಫ್ರಿಡ್ಜ್ ಡೋರ್ ನಲ್ಲಿ ಹಾಲು ಇಡದೇ ಇರುವುದು ಹಲವು ಪ್ರಯೋಜನಗಳನ್ನು ನೀಡುತ್ತದೆ.

ಫ್ರಿಜ್​ನಲ್ಲಿ ಹಾಲು ಸಂಗ್ರಹಿಸಲು ಫ್ರೀಜರ್ ಅಡಿಯಲ್ಲಿ ವಿಶೇಷ ಸ್ಥಳವಿದೆ, ಆದರೆ ನಮ್ಮ ಹೆಚ್ಚಿನ ಮನೆಗಳಲ್ಲಿ ಅದನ್ನು ಅಲ್ಲಿ ಇಡುವುದಿಲ್ಲ. ಫ್ರಿಜ್ ತುಂಬಿರುವಾಗ, ನಾವು ಹಾಲು ಮತ್ತು ಇತರ ಪಾನೀಯಗಳನ್ನು ಕೈಗೆಟುಕುವಂತೆ ಬಾಗಿಲ ಬಳಿ ಇಡುತ್ತೇವೆ.

ಫ್ರಿಜ್​ನಲ್ಲಿ ಎಲ್ಲಾ ಜಾಗ ತುಂಬಿದ ನಂತರ, ಉಳಿದ ವಸ್ತುಗಳನ್ನು ಬಾಗಿಲುಗಳ ಬಳಿ ಇಡುತ್ತೇವೆ. ಹಾಗಾಗಿ, ನಾವು ತಂಪು ಪಾನೀಯಗಳು, ಹಾಲಿನ ಬಾಟಲಿಗಳು, ಮೊಸರು ಕಪ್​ಗಳು, ಮಜ್ಜಿಗೆ ಪ್ಯಾಕೆಟ್​ಗಳು ಇತ್ಯಾದಿಗಳನ್ನು ಸಂಗ್ರಹಿಸುತ್ತೇವೆ.

ಈ ಬಾಗಿಲ ಬಳಿ ಹಾಲು ಏಕೆ ಇಡಬಾರದು ಎಂದರೆ ಹಾಲು ಯಾವಾಗಲೂ ಒಂದೇ ತಾಪಮಾನದಲ್ಲಿರಬೇಕು. ಇಲ್ಲದಿದ್ದರೆ ಹಾಳಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಪ್ರತಿ ಬಾರಿ ಫ್ರಿಜ್ ಬಾಗಿಲು ತೆರೆದು ಮುಚ್ಚಿದಾಗ ಹಾಲಿನ ಸುತ್ತಲಿನ ತಂಪು ಗಾಳಿ ಹೊರಹೋಗುತ್ತದೆ. ಹೌದು ನಾವು ಫ್ರಿಜ್ ಅನ್ನು 10, 15 ಸೆಕೆಂಡುಗಳ ಕಾಲ ತೆರೆಯುತ್ತೇವೆ. ಅಷ್ಟರಲ್ಲಿ ಏನು ಬದಲಾವಣೆ ಆಗುತ್ತದೆ ಎಂಬ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ.

ಆದರೆ ಫ್ರಿಜ್ ಡೋರ್‌ನಲ್ಲಿ ನಿಗದಿಪಡಿಸಿದ ಪ್ರದೇಶದಲ್ಲಿ ಹಾಲನ್ನು ಸಂಗ್ರಹಿಸುವುದು ಸಮಸ್ಯೆಯಲ್ಲ, ಆದರೆ 0 ಮತ್ತು 5c ನಡುವಿನ ಸರಿಯಾದ ತಾಪಮಾನ ಇರಬೇಕು. ಇಲ್ಲದಿದ್ದರೆ ಹಾಲು ಹಾಳಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ ಆಗಿದೆ.

ಈ ಮೇಲಿನಂತೆ ತಜ್ಞರ ಅಭಿಪ್ರಾಯ ಪ್ರಕಾರ ಹಾಲನ್ನು ಈ ರೀತಿಯಾಗಿ ಶೇಕರಿಸಿ ಇಡುವುದು ಉತ್ತಮ.

You may also like

Leave a Comment