ವಿದೇಶ ಪ್ರಯಾಣ ಮಾಡಲು ನಿಮಗೂ ಆಸೆ ಇದ್ದಲ್ಲಿ ಸುಲಭವಾಗಿ ಮತ್ತು ಉಚಿತವಾಗಿ ಪ್ರಯಾಣ ಬೆಳೆಸಬಹುದು. ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಮತ್ತು ಉತ್ತಮ ಸೇವೆಯೊಂದಿಗೆ ಹೊಸ ಅವಕಾಶ ನೀಡುತ್ತಿದೆ. ಇದೀಗ ವೊಡಫೋನ್ ಐಡಿಯಾದಿಂದ ಹೊಸ ಆಫರ್ಸ್ಬಿಡುಗಡೆ ಯಾಗಿದೆ. ಈ ಮೂಲಕ ಉಚಿತ ಲಂಡನ್ ಪ್ರವಾಸ ಮಾಡಬಹುದಾಗಿದೆ.
ಟೆಲಿಕಾಂ ಕಂಪನಿಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ ಈ ಕೊಡುಗೆಯನ್ನು ಬಿಡುಗಡೆ ಮಾಡಿದೆ. ಈ ಕೊಡುಗೆ ಡಿಸೆಂಬರ್ 15 ರವರೆಗೆ ಮಾತ್ರ ಲಭ್ಯವಿದೆ. ಈ ಕೊಡುಗೆ ಯನ್ನು ಪಡೆಯಲು ವೊಡಾಫೋನ್ ಐಡಿಯಾ ಲುಡೋ ಪಂದ್ಯಾವಳಿಯನ್ನು ನಡೆಸುತ್ತಿದೆ. ಅದರ ಹೆಸರು ಎಕ್ಸ್ ಪ್ರೆಸ್ ಲುಡೋ ಟೂರ್ನಮೆಂಟ್ ಎಂದಾಗಿದೆ.
ಸ್ಮಾರ್ಟ್‌ಫೋನ್‌ನಲ್ಲಿರುವ ವೊಡಫೋನ್ ಐಡಿಯಾ ಅಪ್ಲಿಕೇಶನ್‌ನಲ್ಲಿವಿಐ ಗೇಮ್ಸ್ ಪ್ಲಾಟ್‌ಫಾರ್ಮ್ ಮೂಲಕ ನೀವು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ರ್ಯಾಂಕಿಂಗ್ನ ಆಧಾರದ ಮೇಲೆ, ಪಂದ್ಯಾವಳಿಯಲ್ಲಿ ಭಾಗವಹಿಸಿದ ಅದೃಷ್ಟವಂತರು ಉಚಿತವಾಗಿ ಲಂಡನ್‌ಗೆ ಹೋಗುವ ಪ್ರವಾಸದ ಅವಕಾಶವನ್ನು ಪಡೆಯುತ್ತಾರೆ. ಇದಲ್ಲದೆ ಈ ಆಟದಲ್ಲಿ ಭಾಗವಹಿಸಿದವರಿಗೆ ದೈನಂದಿನ ಅಮೆಜಾನ್ ವೋಚರ್‌ಗಳನ್ನು ಸಹ ಪಡೆಯಬಹುದಾಗಿದೆ.
ವೊಡಫೋನ್ ಐಡಿಯಾದ ಪ್ರಕಾರ, ಅನೇಕ ಬಾರಿ ಆಟಗಳನ್ನು ಆಡಬಹುದಾಗಿದೆ. ಈ ಲೂಡೊ ಪಂದ್ಯಾವಳಿ ಮೂಲಕ ಟಿಕೆಟ್ ಗೆಲ್ಲಬಹುದಾಗಿದೆ. ಈ ಟಿಕೆಟ್ನಲ್ಲಿ ಲಂಡನ್ ಪ್ರವಾಸವನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದಾಗಹಿದೆ. ಈ ಲಂಡನ್ ಪ್ರವಾಸವು ಎರಡು ದಿನಗಳವರೆಗೆ ಇರುತ್ತದೆ. ಅದಲ್ಲದೆ ಕಂಪನಿಯು ವಿಮಾನ ಟಿಕೆಟ್‌ಗಳು ಮತ್ತು ವಸತಿ ಸೌಕರ್ಯವನ್ನು ನೋಡಿಕೊಳ್ಳುತ್ತದೆ.
ಈ ಗೇಮ್ನಲ್ಲಿ ವಿನ್ ಆಗಿ ಟಿಕೆಟ್ ಪಡೆದುಕೊಂಡ ಅದೃಷ್ಟವಂತರ ಪಟ್ಟಿಯನ್ನು ವೊಡಫೋನ್ ಐಡಿಯಾದ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಪ್ರಕಟಿಸುತ್ತದೆ. ಗೇಮರುಗಳು ವಿಐ ಅಪ್ಲಿಕೇಶನ್ ಮೂಲಕ ತಾಂಬೋಲಾ ಎಂಬ ಆಟವನ್ನು ಸಹ ಆಡಬಹುದು.
ತಾಂಬೋಲ ಆಟವು ಪ್ರತಿ 30 ನಿಮಿಷಗಳಿಗೊಮ್ಮೆ ಪ್ರಾರಂಭವಾಗುತ್ತದೆ. ಇದು ರಾತ್ರಿ 8 ರಿಂದ ಮಧ್ಯರಾತ್ರಿಯವರೆಗೆ ನಡೆಯುತ್ತದೆ. ವೊಡಫೋನ್ ಐಡಿಯಾ ಬಳಕೆದಾರರು ಯಾವುದೇ ಹಣವನ್ನು ಪಾವತಿಸದೆ ತಾಂಬೋಲ ಆಟವನ್ನು ಆಡಬಹುದು. ಈ ಗೇಮ್ ಮೂಲಕ ವೋಚರ್‌ಗಳನ್ನು ಸಹ ಗೆಲ್ಲಬಹುದು. ಆದ್ದರಿಂದ ನೀವು ವೊಡಾಫೋನ್ ಐಡಿಯಾ ಗ್ರಾಹಕರಾಗಿದ್ದರೆ ಮಾತ್ರ ಈ ಅವಕಾಶವನ್ನು ಪಡೆಯಬಹುದು. ಇನ್ನು ಲಂಡನ್ ಟ್ರಿಪ್ ಪ್ರತೀ ಆಟದಲ್ಲಿ ಇಬ್ಬರಿಗೆ ಪಡೆಯುವ ಅವಕಾಶ ಸಿಗಲಿದೆ.
ಅದಲ್ಲದೆ ವೊಡಾಫೋನ್ ಐಡಿಯಾ ಮಾರುಕಟ್ಟೆಯಲ್ಲಿ ಹೊಸ ಪೋಸ್ಟ್‌ಪೇಯ್ಡ್ ಯೋಜನೆಯನ್ನು ಕೂಡ ಬಿಡುಗಡೆ ಮಾಡಿದೆ. ವೊಡಫೋನ್ ಐಡಿಯಾ 2,999 ರೂಪಾಯಿಯ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ 850 GB ಡೇಟಾವನ್ನು ಪಡೆಯಬಹುದಾಗಿದೆ. ಅನ್ಲಿಮಿಟೆಡ್ ಕಾಲ್ ಕೂಡ ಮಾಡುವ ಅವಕಾಶವಿದೆ.
ಇದಲ್ಲದೆ ಈ ಯೋಜನೆಯಲ್ಲಿ ದಿನಕ್ಕೆ 100 SMS ಕಳುಹಿಸಬಹುದು. ಈ ಯೋಜನೆಯ ವ್ಯಾಲಿಡಿಟಿ 365 ದಿನಗಳು. ಅಲ್ಲದೆ ಗ್ರಾಹಕರು ರಾತ್ರಿ ಕೂಡ ಡೇಟಾ ಪ್ರಯೋಜನವನ್ನು ಪಡೆಯಬಹುದು. ಮಧ್ಯಾಹ್ನ 12ರಿಂದ ಬೆಳಗ್ಗೆ 6ರವರೆಗೆ ಉಚಿತ ಡೇಟಾ ಪಡೆಯಬಹುದು. ಈ ಸೌಲಭ್ಯವು ಹಲವಾರು ವೊಡಫೋನ್ ಐಡಿಯಾದ ಇತರ ರೀಚಾರ್ಜ್ ಯೋಜನೆಗಳಲ್ಲಿ ಲಭ್ಯವಿದೆ.
ವೊಡಫೋನ್ ಐಡಿಯಾ ಗ್ರಾಹಕರಿಗೆ ಇದೊಂದು ಸರ್ಪ್ರೈಸ್ ಸಹ ಹೌದು. ನಿಮ್ಮ ವಿದೇಶ ಪ್ರಯಾಣದ ಕನಸನ್ನು ಈ ಮೇಲಿನ ಆಟವನ್ನು ಆಡಿ ನನಸು ಮಾಡಿಕೊಳ್ಳಬಹುದು.
