Home » ವಿಷ್ಣು ಸಹಸ್ರನಾಮ ಓದುವವರು ಈ ನಿಯಮಗಳನ್ನು ಅನುಸರಿಸಲೇ ಬೇಕು.

ವಿಷ್ಣು ಸಹಸ್ರನಾಮ ಓದುವವರು ಈ ನಿಯಮಗಳನ್ನು ಅನುಸರಿಸಲೇ ಬೇಕು.

0 comments

ಅದೆಷ್ಟೋ ಜನ ಮಹಿಳೆಯರು ಮುಸ್ಸಂಜೆ ವೇಳೆ ದೇವರಿಗೆ ದೀಪ ಹಚ್ಚಿ, ನಮಸ್ಕರಿಸಿ ಭಜನೆ ಮಾಡುವವರು ಇರುತ್ತಾರೆ. ಇನ್ನು ಕೆಲವರು ಸೌಂದರ್ಯ ಲಹರಿ , ಹನುಮಾನ್ ಚಾಲೀಸ್, ಭಗವದ್ಗೀತೆ, ವಿಷ್ಣು ಸಹಸ್ರನಾಮ ಓದುವವರು ಇರುತ್ತಾರೆ.

ಇದೆಲ್ಲವೂ ನಂಬಿಕೆ, ಸಂಪ್ರದಾಯ ಎಂದೇ ಹೇಳಬಹುದು. ಅದರಿಂದ ಸಕಾರಾತ್ಮಕ ಬೆಳವಣಿಗೆ ಜೀವನದಲ್ಲಿ ಕಾಣುವ ಜನರು ಇರುತ್ತಾರೆ.

ವಿಷ್ಣುವಿನ ಆರಾಧನೆ ಮಾಡುವ ಭಕ್ತರ ಸಂಖ್ಯೆ ಹೆಚ್ಚಿದೆ. ಹಾಗಾದ್ರೆ ವಿಷ್ಣು ಸಹಸ್ರನಾಮ ಓದಬೇಕಾದವರು ಒಂದಷ್ಟು ನಿಯಮಗಳನ್ನು ಫಾಲೋ ಮಾಡಲೇಬೇಕು.

ಮಂತ್ರ ಜಪಿಸುವುದ್ರಿಂದ ಮನಸ್ಸು ಮತ್ತು ಮೆದುಳಿಗೆ ಶಕ್ತಿಯ ಸಂವಹನವಾಗುತ್ತದೆ. ವಿಭಿನ್ನ ಮಂತ್ರಗಳು ನಿಮ್ಮ ಜೀವನದಲ್ಲಿ ವಿಶೇಷ ಪರಿಣಾಮವನ್ನು ಬೀರುತ್ತವೆ ಎಂದು ನಂಬಲಾಗಿದೆ.

ಈ ಸ್ತೋತ್ರವನ್ನು ಪಠಿಸುವುದರಿಂದ ಮನೆಯಲ್ಲಿ ಸುಖ , ನೆಮ್ಮದಿ ಮತ್ತು ಶಾಂತಿ ನೆಲೆಸುವ ಜೊತೆಗೆ ಆರ್ಥಿಕ ವೃದ್ಧಿಯನ್ನು ಕಾಣಬಹುದಾಗಿದೆ. ವಿಷ್ಣು ಸಹಸ್ರನಾಮವನ್ನು ಪ್ರತಿ ದಿನ ಜಪಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಈ ಮಂತ್ರ ಪಠಿಸುವ ವೇಳೆ ಕೆಲ ಸಣ್ಣಪುಟ್ಟ ತಪ್ಪುಗಳನ್ನು ನಾವು ಮಾಡಿರ್ತೇವೆ. ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಾವು ಮಂತ್ರ ಪಠಿಸಿದ ಸಂಪೂರ್ಣ ಫಲ ನಮಗೆ ಪ್ರಾಪ್ತಿಯಾಗುವುದಿಲ್ಲ. ವಿಷ್ಣು ಸಹಸ್ರನಾಮವನ್ನು ಪಠಿಸುವಾಗ ಏನೇನು ಮಾಡಬಾರದು ಎಂಬುದನ್ನು ನಾವು ತಿಳಿದಿರಬೇಕು.

ಮೊದಲು ಯಾರಾದರೂ ನಿಮಗೆ ಒಂದು ಬಾರಿ ಆದ್ರೂ ವಿಷ್ಣು ಸಹಸ್ರನಾಮ ಓದುವುದನ್ನು ಹೇಳಿಕೊಟ್ಟಿರಬೇಕು. ನಾವಾಗಿಯೇ ಓದಬಾರದು. ಹೇಳಿಕೊಡುವವರಿಗು ಇದರ ವ್ಯಾಲ್ಯೂ ತಿಳಿದಿರಬೇಕು.

ಅಶುದ್ಧ ದೇಹ ಮತ್ತು ಮನಸ್ಸಿನಲ್ಲಿ ವಿಷ್ಣು ಸಹಸ್ರನಾಮವನ್ನು ಜಪಿಸಬಾರದು. ಇದು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಬೆಳಿಗ್ಗೆ ಎದ್ದು, ಸ್ನಾನ ಮಾಡಿ, ಶುದ್ಧ ಬಟ್ಟೆಯನ್ನು ಧರಿಸಿ, ದೇವರ ಮನೆಯಲ್ಲಿ ಕುಳಿತು ಈ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡಿದ್ರೆ ವಿಷ್ಣುವಿನ ಸಂಪೂರ್ಣ ಕೃಪೆ ನಿಮ್ಮ ಮೇಲಿರುತ್ತದೆ.

ಕೆಟ್ಟ ಆಲೋಚನೆಗಳನ್ನು ತಲೆಯಲ್ಲಿ ಅಥವಾ ಮನಸ್ಸಿನಲ್ಲಿ ಇಟ್ಟುಕೊಂಡು ಮಂತ್ರ ಹೇಳಬಾರದು. ಇದು ನಕಾರಾತ್ಮಕ ವನ್ನು ಸೃಷ್ಠಿ ಮಾಡುತ್ತದೆ.ಮನಸ್ಸಿನ ದುಗುಡಗಳು ಇದ್ದರೂ ಕೂಡ ಆದಷ್ಟು ಧ್ಯಾನ ಮಾಡಿ ಮತ್ತೆ ಮಂತ್ರವನ್ನು ಜಪಿಸಿ.

ವಿಷ್ಣು ಸಹಸ್ರನಾಮ ಪಠಿಸುವವರು ಆಹಾರದ ಬಗ್ಗೆಯೂ ಗಮನ ನೀಡಬೇಕು. ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸುವ ಮೊದಲು ಅಥವಾ ನಂತರ ಮಾಂಸ, ಮದ್ಯ ಮುಂತಾದ ತಾಮಸಿಕ ಆಹಾರವನ್ನು ಸೇವಿಸಬಾರದು. ಇದ್ರಿಂದ ಸಕಾರಾತ್ಮಕ ಫಲಿತಾಂಶ ಸಿಗುವುದಿಲ್ಲ.

You may also like

Leave a Comment