ಮಗು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಕೇಳಿರುತ್ತೇವೆ. ಹಾಗೆಯೇ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪೂರೈಸಿದರೆ ಮುಂದೆ ಭವ್ಯ ಭಾರತದ ಅಭಿವೃದ್ಧಿಗೆ ಕಾರಣರಾಗಬಲ್ಲರು. ಸದ್ಯ ಪ್ರಸಾರ ಭಾರತಿ ಬಾನ್ದನಿ ಕಾರ್ಯಕ್ರಮದ ಬಗ್ಗೆ ನಮಗೆಲ್ಲರಿಗೂ ತಿಳಿದಿರಬಹುದು ಆದರೆ ಈ ಹಿಂದೆ ಚಾಲ್ತಿಯಲ್ಲಿದ್ದ ಈ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ಅಷ್ಟು ಪ್ರಚಲಿತದಲ್ಲಿರಲಿಲ್ಲ. ಸದ್ಯ 1 ರಿಂದ 9ನೇ ತರಗತಿಯ ಎಲ್ಲಾ ಮಕ್ಕಳಿಗೂ ಇನ್ನು ಮುಂದೆ ಪ್ರಸಾರ ಭಾರತಿ ಬಾನ್ದನಿ ಕಾರ್ಯಕ್ರಮ ಇರಲಿದೆ.
ಪ್ರಸ್ತುತ ಶಾಲಾ ಮಕ್ಕಳಿಗೆಂದೇ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಭಾರತಿಯಲ್ಲಿ ಆರಂಭಿಸಲು ನಿರ್ಧಾರ ಮಾಡಾಲಾಗಿದೆ . ಅದಲ್ಲದೆ ಯಾವ ರೀತಿಯ ಕಾರ್ಯಕ್ರಮ ಪ್ರಸಾರವಾಗ ಬೇಕು ಎಂಬ ನೀಲಿ ನಕ್ಷೆಯೂ ಸಹ ಸಿದ್ಧವಾಗಿದೆ. ಇನ್ನು ಮುಂದಿನ ದಿನದಲ್ಲಿ ಇದು ಅನುಷ್ಟಾನ ಗೊಳ್ಳಲಿದೆ.
ಪ್ರಸಾರ ಭಾರತಿಯಲ್ಲಿ ಭಾನ್ ದನಿ ಎಂಬ ಹೆಸರಿನ ಕಾರ್ಯಕ್ರಮವು ಆರಂಭವಾಗಲಿದ್ದು ಇದು ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸಹಾಯವಾಗಲಿದೆ. ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿಯೂ ಈಗಾಗಲೇ ಬಿಡುಗಡೆಯಾಗಿದೆ.
2023ನೇ ಸಾಲಿನ ರೇಡಿಯೋ ಕಾರ್ಯಕ್ರಮದ ವೇಳಾಪಟ್ಟಿಯನ್ನು ಡಿಎಸ್ಇಆರ್ಟಿ ಬಿಡುಗಡೆ ಮಾಡಿದೆ. ಈ ವೇಳಾಪಟ್ಟಿ ಅನುಸಾರ ರೇಡಿಯೋ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ತಿಳಿಸಲಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಬಾನ್ ದನಿ ಕಾರ್ಯಕ್ರಮವು ಸೋಮವಾರದಿಂದ ಗುರುವಾರ ಪ್ರಸಾರವಾಗಲಿದೆ. ಮಧ್ಯಾಹ್ನ 2:35ರಿಂದ 3 ಗಂಟೆವರೆಗೆ ಮಕ್ಕಳಿಗೆ ಪಾಠ ನೀಡಲಾಗುತ್ತದೆ. ಪ್ರಸಾರ ಭಾರತಿ ಬಾನ್ದನಿ ಕಾರ್ಯಕ್ರಮವು 1 ರಿಂದ 9ನೇ ತರಗತಿಯ ಎಲ್ಲಾ ಮಕ್ಕಳಿಗೂ ಇರಲಿದೆ. ಶಾಲಾ ತರಗತಿಯಲ್ಲಿ ಪಾಠ ಕೇಳುವುದಕ್ಕಿಂತ ರೇಡಿಯೋ ಪಾಠ ಕೇಳಲು ವಿಶೇಷವೆನಿಸಿ ಮಕ್ಕಳಲ್ಲಿ ಆಸಕ್ತಿ ಮೂಡಬಹುದು ಎಂಬ ನಿಲುವು ಆಗಿದೆ.
ಈ ಮೇಲಿನಂತೆ ಪ್ರಸಾರ ಭಾರತಿಯಲ್ಲಿ ಭಾನ್ ದನಿ ಕಾರ್ಯಕ್ರಮವು ನಡೆಯಲಿದ್ದು ಇದರಿಂದಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚುವ ಭರವಸೆಯನ್ನು ಸರ್ಕಾರ ಹೊಂದಿದೆ.
