Home » Bank Interest Rates Hike : RBI ರೆಪೋ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿದರ ಹೆಚ್ಚಿಸಿದ ಈ ಸರ್ಕಾರಿ ಬ್ಯಾಂಕುಗಳು

Bank Interest Rates Hike : RBI ರೆಪೋ ದರ ಹೆಚ್ಚಳ ಬೆನ್ನಲ್ಲೇ ಬಡ್ಡಿದರ ಹೆಚ್ಚಿಸಿದ ಈ ಸರ್ಕಾರಿ ಬ್ಯಾಂಕುಗಳು

0 comments

ಕಳೆದ ಬಾರಿ RBI ರೆಪೋ ದರವನ್ನು ಶೇಕಡಾ 6.25 ಗೆ ಏರಿಕೆ ಮಾಡುವ ಬಗ್ಗೆ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಸರ್ಕಾರಿ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸಿವೆ.

ಇನ್ನೂ, ಬ್ಯಾಂಕ್ ಆಫ್ ಬರೋಡಾದ ವೆಬ್‌ಸೈಟ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಚಿಲ್ಲರೆ ಸಾಲಗಳಿಗೆ ಅದರ ಕನಿಷ್ಠ ಬಡ್ಡಿ ದರವನ್ನು (ಬರೋಡಾ ರೆಪೊ ಲಿಂಕ್ಡ್ ಲೆಂಡಿಂಗ್ ದರ) ಶೇ.8.85 ರಷ್ಟು ಹೆಚ್ಚಿಸಲಾಗಿದೆಯಂತೆ. ಈ ಹೆಚ್ಚಳ ಶೇ.6.25 ಮತ್ತು ರೆಪೋ ದರದ ಶೇ. 2.60 ರಷ್ಟು ಮಾರ್ಕ್ ಅಪ್ ಅನ್ನು ಹೊಂದಿದೆ. ಇನ್ನೂ, ಈ ಪರಿಷ್ಕೃತ ದರಗಳು ಡಿಸೆಂಬರ್ 8 ರಿಂದ ಜಾರಿಗೆ ಬಂದಿವೆ.

ಹಾಗೇ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕೂಡ ಡ್ರೋನ್ ಬಡ್ಡಿಯನ್ನು ಹೆಚ್ಚಿಸಿದ್ದು, MCLR ಅನ್ನು 15-35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಜೊತೆಗೆ ಬ್ಯಾಂಕ್ ರೆಪೋ ಲಿಂಕ್ಡ್ ಲೆಂಡಿಂಗ್ ದರವನ್ನು (ಆರ್‌ಎಲ್‌ಎಲ್‌ಆರ್) 9.10 ಕ್ಕೆ ಇಳಿಸಿದ್ದು, ಈ ಪರಿಷ್ಕೃತ ದರ ಡಿಸೆಂಬರ್ 10 ರಿಂದ ಜಾರಿಗೆ ಬರಲಿದೆಯಂತೆ.

ಆರ್‌ಬಿಐ ರೆಪೊ ದರ ಹೆಚ್ಚಳದ ಘೋಷಣೆಯನ್ನು ಮಾಡಿದ ನಂತರವೇ ಸರ್ಕಾರಿ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸಲು ಯೋಜನೆ ರೂಪಿಸಿದ್ದು. ಇದರಲ್ಲಿ ಕೆಲವು ಬ್ಯಾಂಕುಗಳು ಬಡ್ಡಿದರ ಹೆಚ್ಚಿಸಿದೆ ಕೂಡ. ಆದರೆ ಈ ಹೆಚ್ಚಳ ಸಾಮಾನ್ಯ ಜನರಿಗೆ ದೊಡ್ಡ ಹೊರೆಯಾಗಲಿದೆ, ಜನರ ಮೇಲೆ ಸಾಲದ ಬಡ್ಡಿಯ ಹೊರೆ ಹೆಚ್ಚಾಗಿದೆ.

ಇನ್ನೂ ಗೃಹ ಸಾಲದ ಬಡ್ಡಿ ದರವನ್ನು ಯಾವುದೆಲ್ಲಾ ಬ್ಯಾಂಕ್‌ಗಳು ಹೆಚ್ಚಿಸಿವೆ ಎಂಬುದರ ಪಟ್ಟಿ ಇಲ್ಲಿದೆ. ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ರೆಪೊ ದರ ಹೆಚ್ಚಳದ ನಂತರ ಬ್ಯಾಂಕ್, ರೆಪೊ ಆಧಾರಿತ ಸಾಲದ ದರವನ್ನು ಅಂದರೆ RBLR ಅನ್ನು 9.10 ಕ್ಕೆ ಹೆಚ್ಚಿಸಿದೆ. ಅಲ್ಲದೆ, ಬ್ಯಾಂಕ್ ಬೇರೆ ಹಲವು ಬಡ್ಡಿದರಗಳನ್ನು ಕೂಡ ಹೆಚ್ಚಿಸಿದೆ. ಇದರಲ್ಲಿ, 1 ವರ್ಷದ MCLR ಅನ್ನು 8.15% ಕ್ಕೆ ಇಳಿಸಿದ್ದು, 6 ತಿಂಗಳ MCLR ಅನ್ನು 7.90% ಗೆ ಇಳಿಸಲಾಗಿದೆ. ಇನ್ನೂ ಈ ಹೊಸ ಬದಲಾವಣೆ ಡಿಸೆಂಬರ್ 7 ರಿಂದ ಜಾರಿಗೆ ಬಂದಿವೆ.

You may also like

Leave a Comment