Home » viral news : ಅಚ್ಚರಿಯ ಜೊತೆ ಗಾಬರಿ | ಬರೋಬ್ಬರಿ 61 ಮ್ಯಾಗ್ನೆಟಿಕ್‌ ಮಣಿಗಳನ್ನು ತಿಂದ ಬಾಲಕಿ | ಮಗಳ ಎಕ್ಸ್‌ರೇ ನೋಡಿ ಮೂರ್ಛೆ ಹೋದ ಪೋಷಕರು

viral news : ಅಚ್ಚರಿಯ ಜೊತೆ ಗಾಬರಿ | ಬರೋಬ್ಬರಿ 61 ಮ್ಯಾಗ್ನೆಟಿಕ್‌ ಮಣಿಗಳನ್ನು ತಿಂದ ಬಾಲಕಿ | ಮಗಳ ಎಕ್ಸ್‌ರೇ ನೋಡಿ ಮೂರ್ಛೆ ಹೋದ ಪೋಷಕರು

0 comments

ವೈದ್ಯಲೋಕವೇ ಒಮ್ಮೊಮ್ಮೆ ಬೆಕ್ಕಸ ಬೆರಗಾಗುವ ಅದೆಷ್ಟೋ ಘಟನೆಗಳು ನಡೆದಿವೆ. ಕೆಲವೊಮ್ಮೆ ಹೀಗೂ ಉಂಟಾ..!! ಅನ್ನೋ ಪ್ರಶ್ನೆಗಳು ಕಾಡುತ್ತವೆ. ಇದೀಗ ಅಂತಹದೇ ಒಂದು ಘಟನೆ ನಡೆದಿದ್ದೂ, ಇದನ್ನು ಕೇಳಿದರೆ ನೀವು ಶಾಕ್ ಆಗೋದು ಖಂಡಿತ.ಹೌದು, ನಾಲ್ಕು ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಕಂಡುಬಂದದ್ದೂ ಒಂದಲ್ಲಾ ಎರಡಲ್ಲಾ ಬರೋಬ್ಬರಿ 61 ಮ್ಯಾಗ್ನೆಟಿಕ್ ಮಣಿಗಳು!!

ನಾಲ್ಕು ವರ್ಷದ ಬಾಲಕಿಯೋರ್ವಳು ಅರಿವಿಲ್ಲದೆ ಮ್ಯಾಗ್ನೆಟಿಕ್ ಮಣಿಗಳನ್ನು ನುಂಗಿದ್ದಾಳೆ. ಈ ವಿಷಯ ಪೋಷಕರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ನಂತರ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಡಲು ಆರಂಭಿಸಿತ್ತು. ಕೂಡಲೇ ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಿದ್ದರು. ಪರೀಕ್ಷಿಸಿ ಎಕ್ಸರೇ ರಿಪೋರ್ಟ್ ನೋಡಿದಾಗ ಬಾಲಕಿ ಹೊಟ್ಟೆಯಲ್ಲಿ ಮ್ಯಾಗ್ನೆಟಿಕ್ ಮಣಿಗಳಿರುವ ಆಘಾತಕಾರಿ ವಿಚಾರ ಬೆಳೆಕಿಗೆ ಬಂದಿದೆ.

ಬಾಲಕಿಯ ಹೊಟ್ಟೆಯಲ್ಲಿ ಸಣ್ಣ ಗೋಲಿಗಳಿದ್ದು, ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು. ಇದಾದ ಬಳಿಕ ವೈದ್ಯರು ಸತತ ಮೂರು ಗಂಟೆಗಳ ಕಾಲ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಿ ಬರೋಬ್ಬರಿ ಆಕೆಯ ಹೊಟ್ಟೆಯಿಂದ 61 ಮ್ಯಾಗ್ನೆಟಿಕ್ ಮಣಿಗಳನ್ನು ಹೊರತೆಗೆದಿದ್ದಾರೆ. ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ. ವಾಸ್ತವವಾಗಿ, ಈ ಘಟನೆ ಚೀನಾದಲ್ಲಿ ನಡೆದಿದೆ.

You may also like

Leave a Comment