Home » Affordable Electric Scooter: ಒಮ್ಮೆ ಚಾರ್ಜ್ ಮಾಡಿ, ಅಷ್ಟೇ, 100 ಕಿಮೀ ಓಡುತ್ತೆ! ಇದರ ಬೆಲೆ ಕೇಳಿದರೆ ಖಂಡಿತ ಖುಷಿ ಪಡ್ತೀರ

Affordable Electric Scooter: ಒಮ್ಮೆ ಚಾರ್ಜ್ ಮಾಡಿ, ಅಷ್ಟೇ, 100 ಕಿಮೀ ಓಡುತ್ತೆ! ಇದರ ಬೆಲೆ ಕೇಳಿದರೆ ಖಂಡಿತ ಖುಷಿ ಪಡ್ತೀರ

0 comments

ವಾಹನ ನಮಗೆ ಅಗತ್ಯ ಸಂಪರ್ಕ ಸಾಧನವಾಗಿದೆ. ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಈ ಮೊದಲೇ ಎಂಟ್ರಿ ಕೊಟ್ಟಿವೆ. ಹಾಗೇ ಇದೀಗ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದ್ದು, ಇದರ ಮಾರಾಟ ಕೂಡ ಅಧಿಕ ಸಂಖ್ಯೆಯಲ್ಲಿ ಆಗುತ್ತಿದೆ. ಇನ್ನು ನೀವೇನಾದರೂ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸಿದ್ದರೆ, ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ ನೊಂದಿಗೆ ಒಮ್ಮೆ ಚಾರ್ಜ್ ಮಾಡಿದರೆ ಸಾಕು 100 ಕಿಮೀ ಓಡುವ EV ಇದಾಗಿದ್ದು. ಇದರ ಬೆಲೆ ಕೇಳಿದರೆ ಖಂಡಿತ ಖುಷಿ ಪಡ್ತೀರಾ!!!

ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪ್ರಸಿದ್ಧ ಕಂಪನಿಗಳಾದ ಬಜಾಜ್ ಆಟೋ, ಹೀರೋ ಮೋಟೋಕಾರ್ಪ್, ಟಿವಿಎಸ್ ಮೋಟಾರ್ಸ್ ಗ್ರಾಹಕರಿಗೆ ನೀಡುತ್ತಿವೆ. ಇದರೊಂದಿಗೆ ಓಲಾ ಎಲೆಕ್ಟ್ರಿಕ್ ಮತ್ತು ಈಥರ್‌ನಂತಹ ಹೊಸ ಸ್ಟಾರ್ಟ್‌ಅಪ್‌ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಎಂಟ್ರಿ ಆಗುತ್ತಿವೆ.

ಐಐಟಿ ದೆಹಲಿ ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಬಾಜ್ ಬೈಕ್ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಬಾಜ್ ಬೈಕ್ ಮಳೆ ಹಾಗೂ ಧೂಳಿನಿಂದ ರಕ್ಷಿಸಲು IP65 ರೇಟಿಂಗ್ ಅನ್ನು ಹೊಂದಿದೆ. ಇನ್ನೂ ಇದರ ಬೆಲೆ ಕೇವಲ ರೂ. 35 ಸಾವಿರ ಆಗಿದೆ. ಹಾಗೇ ಇದರಲ್ಲಿ ಬ್ಯಾಟರಿ ವಿನಿಮಯ ಸೌಲಭ್ಯ ಇದ್ದು, ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಕೇವಲ 90 ಸೆಕೆಂಡುಗಳಲ್ಲಿ ಬದಲಾಯಿಸಬಹುದು ಎಂದು ಕಂಪನಿ ತಿಳಿಸಿದೆ. ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ಬ್ಯಾಟರಿಯನ್ನು ಬದಲಾಯಿಸುವ ಮೂಲಕ ನೀವು ತಡೆರಹಿತವಾಗಿ ಪ್ರಯಾಣಿಸಬಹುದಾಗಿದೆ.

ಇನ್ನೂ ಬಾಜ್ ಬೈಕ್ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯತೆ ಬಗ್ಗೆ ಇಲ್ಲಿದೆ ಮಾಹಿತಿ. ಇದರ ಉದ್ದ 1624 ಎಂಎಂ, ಅಗಲ 680 ಎಂಎಂ ಹಾಗೂ ಎತ್ತರ 1052 ಎಂಎಂ ಆಗಿದೆ. ಹಾಗೇ ಈ ವಾಹನಕ್ಕೆ ಯಾವುದೇ ನೋಂದಣಿಯ ಅಗತ್ಯವಿಲ್ಲ. ಅಲ್ಲದೆ ಡ್ರೈವಿಂಗ್ ಲೈಸೆನ್ಸ್​ ಕೂಡ ಅಗತ್ಯವಿಲ್ಲ. ಒಮ್ಮೆ ಚಾರ್ಜ್ ಮಾಡಿದರೆ ಸಾಕು 100 ಕಿಮೀ ಓಡುತ್ತದೆ. ಇನ್ನೂ ಇದರ ಗರಿಷ್ಠ ವೇಗ ಗಂಟೆಗೆ 25 ಕಿಲೋಮೀಟರ್ ಆಗಿದೆ. ಹಾಗೇ ಇದು ಡ್ಯುಯಲ್ ಫೋರ್ಕ್ ಹೈಡ್ರಾಲಿಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳಿವೆ.

ಇಷ್ಟು ಮಾತ್ರವಲ್ಲದೆ ಈ ಎಲೆಕ್ಟ್ರಿಕ್ ಸ್ಕೂಟರ್ ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ. ಅದೇನೆಂದರೆ, ಜನಜಂಗುಳಿಯ ನಡುವೆ ನಿಮ್ಮ ಸ್ಕೂಟರ್ ಅನ್ನು ನೀವು ಸುಲಭವಾಗಿ ಪತ್ತೆ ಮಾಡಬಹುದು. ಹೇಗೆ ಸಾಧ್ಯ ಎಂದರೆ ಈ ಸ್ಕೂಟರ್ ಫೈಂಡ್ ಮೈ ಸ್ಕೂಟರ್ ಬಟನ್ ವೈಶಿಷ್ಟ್ಯವನ್ನು ಹೊಂದಿದೆ. ಹಾಗಾಗಿ ಇದರ ಸಹಾಯದಿಂದ ನಿಮ್ಮ ವಾಹನವನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

You may also like

Leave a Comment