Home » ಶಿಕ್ಷಣ ಇಲಾಖೆಯಿಂದ ಬಿಸಿಯೂಟದ ಸಮಯದ ಬದಲಾವಣೆ ನಂತರ ಮತ್ತೊಂದು ಮಹತ್ವದ ಸೂಚನೆ

ಶಿಕ್ಷಣ ಇಲಾಖೆಯಿಂದ ಬಿಸಿಯೂಟದ ಸಮಯದ ಬದಲಾವಣೆ ನಂತರ ಮತ್ತೊಂದು ಮಹತ್ವದ ಸೂಚನೆ

by Mallika
0 comments

ಶಿಕ್ಷಣ ಇಲಾಖೆಯು ಎರಡು ದಿನಗಳ ಹಿಂದೆಯಷ್ಟೇ ಬಿಸಿಊಟದ ಸಮಯದಲ್ಲಿ ಬದಲಾವಣೆಯನ್ನು ತಂದತ್ತು. ಈಗ ಇದರರ ಬೆನ್ನಲ್ಲೇ ಶಿಕ್ಷಣ ಇಲಾಖೆ ಇನ್ನೊಂದು ಮಹತ್ವದ ಸೂಚನೆ ನೀಡಿದೆ. ಅದ್ಯಾವುದೆಂದರೆ, ಇನ್ನು ಮುಂದಿನ ದಿನದಲ್ಲಿ ಅಡುಗೆ ಕೇಂದ್ರಗಳಲ್ಲಿ ಉತ್ತಮವಾದ, ಸ್ವಚ್ಛವಾದ (Clean), ಸುವ್ಯವಸ್ಥಿತವಾದ ಹಾಗೂ ರುಚಿಕರವಾದ ಅಡುಗೆ ಸಿದ್ಧಗೊಳ್ಳಲು ಬೇಕಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಇಲಾಖೆ ನೀಡಿದ ಇನ್ನಷ್ಟು ಮಾಹಿತಿ ಇಲ್ಲಿದೆ.

ಉತ್ತಮ ಬಿಸಿಯೂಟ ಹಾಗೂ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ ಶಾಲೆಗಳನ್ನು ಪ್ರೇರಕ ಶಾಲೆಗಳೆಂದು ಗುರುತಿಸಲಾಗುವುದು. ಅಷ್ಟೆ ಅಲ್ಲ ಶಾಲೆಗಳ ಉತ್ತಮ ಆಚರಣೆಗಳನ್ನು ಸಚಿತ್ರ ಲೇಖನದೊಂದಿಗೆ ಶಿಕ್ಷಣ ವಾರ್ತೆ ಮಾಸಿಕ ಪತ್ರಿಕೆಯಲ್ಲಿ ಪಿ,ಎಂ ಪೋಷಣ್ (ಮಧ್ಯಾಹ್ನದ ಬಿಸಿಊಟದ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆ ಪ್ರಗತಿ ನೋಟ ಶೀರ್ಷಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ಈ ಬಿರುದು ಗಳಿಸಬೇಕಾದರೆ ಶಾಲೆಗಳು ಈ ಕೆಳಕಂಡ ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಕೈಗೊಂಡ ಅಧ್ಯಯನದ ಪ್ರಮುಖ ಶಿಫಾರಸ್ಸುಗಳು ಹೀಗಿವೆ

  1. ಅಡುಗೆ ಕೇಂದ್ರಗಳಲ್ಲಿ ಗುಣಮಟ್ಟ (SOP) ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
  2. ಆಹಾರದ ಶುಚಿ ರುಚಿಯನ್ನು ಕಡ್ಡಾಯವಾಗಿದೆ. ಮಕ್ಕಳಿಗೆ ವಿತರಿಸುವ ಮುನ್ನ ಗುಣಮಟ್ಟದ ಪರೀಕ್ಷೆ ನಡೆಸಬೇಕು.
  3. ಅಡುಗೆ ಕೇಂದ್ರಗಳಲ್ಲಿ ಹಾಗೂ ಮಕ್ಕಳು ಕುಳಿತು ಉಣ್ಣುವ ಸ್ಥಳದಲ್ಲಿ ಮತ್ತು ಬಿಸಿ ಹಾಲು ಸ್ವೀಕರಿಸುವ ಸ್ಥಳವನ್ನು ಸ್ವಚ್ಛ ಮತ್ತು ನೈರ್ಮಲ್ಯದಿಂದ ಸುರಕ್ಷಿತರಾಗಿ ಇಡುವುದು.
  4. ಆಹಾರ ದಾಸ್ತಾನು ಉಗ್ರಾಣದಲ್ಲಿ ಹಾಗೂ ಆಹಾರಧಾನ್ಯಗಳ ಬಳಕೆಯಲ್ಲಿ FIFO – (First in First out). FEFC (First enter First out) – ವಿಧಾನವನ್ನು ಆಹಾರದ ಸುರಕ್ಷತೆ ಮತ್ತು ಗುಣಮಟ್ಟದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸುವುದು.
  5. ತರಕಾರಿ, ಸೊಪ್ಪು, ಹಣ್ಣುಗಳನ್ನು ಶುದ್ಧ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ ಬಳಸುವುದು.
  6. ಬೆಂಕಿಆರಿಸುವ ಅನಿಲವನ್ನು ಅಡುಗೆ ಕೋಣೆಯಲ್ಲಿ ಕೈಗೆ ಎಟುಕುವ ರೀತಿಯಲ್ಲಿ ಇಟ್ಟು ಸುಸ್ಥಿತಿಯಲ್ಲಿ ನಿರ್ವಹಿಸುವುದು ಹಾಗೂ ಅಗ್ನಿ ಅವಘಡಗಳ ತುರ್ತು ಸಂದರ್ಭಗಳಲ್ಲಿ ಸುರಕ್ಷತೆಗಾಗಿ ಬಳಸುವುದು, ಈ ಬಗ್ಗೆ ಅಡುಗೆಯವರಿಗೆ ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದು.
  7. ಅಡುಗೆ ಮಾಡುವ ಸಿಬ್ಬಂಧಿಗಳು ತಲೆಗವಸು ಧರಿಸುವುದು, ಎಫ್ರಾನ್ ಧರಿಸುವುದು

8 ಮಣ್ಣು ಅಥವಾ ದೂಳು ಇರುವ ಸ್ಥಳದಲ್ಲಿ ಆಹಾರ ಬಡಿಸದೇ ಇರುವುದು.

  1. ಶುದ್ಧ ಕುಡಿಯುವ ನೀರು ಒದಗಿಸುವುದು, ನೀರು ಸಂಗ್ರಹಿಸುವ ತೊಟ್ಟಿಗಳನ್ನು ಕ್ಲೀನ್ ಮಾಡುವುದು
  2. ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಎರಡು ಬೇರೆ ಬೇರೆ ಸಮಯದಲ್ಲಿ ಊಟ ವಿತರಿಸುವುದು
  3. ಕ್ಷೀರಭಾಗ್ಯ ಯೋಜನೆ ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳುವುದು
  4. ಮಕ್ಕಳ ಸಹಾಯವಾಣಿ ಹಾಗೂ ದೂರವಾಣಿ ಫಲಕಗಳನ್ನು ತೂಗುಹಾಕುವುದು

ಇದೇ ರೀತಿ ಹಲವು ನಿಯಮಗಳ ಕುರಿತು ಸೂಚನೆಯನ್ನು ಶಿಕ್ಷಣ ಇಲಾಖೆ ಸೂಚಿಸಿದೆ. ಹಾಗೆನೇ ಇವುಗಳ ಕಟ್ಟುನಿಟ್ಟಿನ ಪಾಲನೆ ಶಾಲೆಗಳಲ್ಲಿ ಆಗಬೇಕಿದೆ.

You may also like

Leave a Comment