Home » pTron Earbuds: ಕೇವಲ 899 ರೂಪಾಯಿಯ ಇಯರ್‌ಬಡ್ಸ್‌ 60 ಗಂಟೆ ಬಳಸಬಹುದು | ಅದ್ಭುತ ಫೀಚರ್‌ ಜೊತೆಗೆ ಇದರ ವೈಶಿಷ್ಟ್ಯದ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

pTron Earbuds: ಕೇವಲ 899 ರೂಪಾಯಿಯ ಇಯರ್‌ಬಡ್ಸ್‌ 60 ಗಂಟೆ ಬಳಸಬಹುದು | ಅದ್ಭುತ ಫೀಚರ್‌ ಜೊತೆಗೆ ಇದರ ವೈಶಿಷ್ಟ್ಯದ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

0 comments

ಇದು ಆಧುನಿಕ ಜಗತ್ತು. ಇಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಪ್ಡೇಟ್‌ ಆಗುತ್ತಲೇ ಇರುತ್ತದೆ. ಹೊಸ ಹೊಸ ಆವಿಷ್ಕಾರಗಳು ಸೃಷ್ಟಿ ಆಗುತ್ತಲೇ ಇದೆ.
ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಹೆಡ್​ಫೋನ್ ಕಂಪನಿ ಇಯರ್‌ಬಡ್‌ಗಳನ್ನು ಪರಿಚಯಿಸಲಾಗಿದೆ.
ಸದ್ಯ ಕಂಪನಿಯು ಉತ್ಪಾದಿಸಿದ ಚಿಕ್ಕದಾದ ಮತ್ತು ಹಗುರವಾದ ಇಯರ್‌ಬಡ್‌ಗಳು ಎಂದು ಹೇಳಬಹುದು.

ಹೊಸ ಇಯರ್‌ಬಡ್‌ಗಳನ್ನು ಖರೀದಿಸಲು ಇದೊಂದು ಒಳ್ಳೆಯ ಅವಕಾಶ ಆಗಿದೆ. ಅತ್ಯಾಕರ್ಷಕ ಬೆಲೆಯಲ್ಲಿ ಹೆಡ್​ಫೋನ್ ನಿಮಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಟೆಕ್ನಾಲಜಿ ಮಾರುಕಟ್ಟೆಗೆ ಹೊಸ ಇಯರ್ ಬಡ್ಸ್ ಬಿಡುಗಡೆಯಾಗಿದ್ದು. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸದಾಗಿ ಬಿಡುಗಡೆಯಾದ ಇಯರ್​ಬಡ್ಸ್​ pTron ಕಂಪನಿಯದ್ದಾಗಿದೆ.

ಈ ಇಯರ್​ಬಡ್ಸ್ ವಿಶೇಷತೆಗಳು :

  • ಈ ಇಯರ್​ಬಡ್ಸ್​ನಲ್ಲಿ ಚಾರ್ಜಿಂಗ್ ಕೇಸ್ 400 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
  • ಈ ಹೊಸ ಇಯರ್ ಬಡ್ಸ್ ಬೆಲೆ ಕೇವಲ ರೂ. 899 ರಿಂದ ಪ್ರಾರಂಭವಾಗುತ್ತದೆ. ಜೊತೆಗೆ ಇದರಲ್ಲಿ ಬ್ಯಾಂಕ್ ರಿಯಾಯಿತಿಗಳು ಕೂಡ ಲಭ್ಯವಿದೆ. ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್​ನಲ್ಲಿ ಈ ಇಯರ್​​ಬಡ್ಸ್​ ಅನ್ನು ಖರೀದಿಸಬಹುದಾಗಿದೆ.
  • Pitron BassPods P481 IPX4 ರೇಟಿಂಗ್ ನಲ್ಲಿ ಕಾರ್ಯನಿರ್ವಹಿಸಲಿದೆ.
  • ಈ ಇಯರ್​ಬಡ್ಸ್ ವಾಟರ್​ಪ್ರೂಫ್ ಫೀಚರ್​​ ಅನ್ನು ಒಳಗೊಂಡಿದೆ.
  • ಪ್ರತಿ ಇಯರ್ ಬಡ್ 3.4 ಗ್ರಾಂ ತೂಗುತ್ತದೆ. ಚಾರ್ಜಿಂಗ್ ಕೇಸ್‌ನ ತೂಕ 29.4 ಗ್ರಾಂ ಆಗಿದೆ.
  • ಈ ಇಯರ್ ಬಡ್ಸ್ ಕರೆಗಳಿಗೆ ತೆಗೆಯಲು, ತಿರಸ್ಕರಿಸಲು, ಮ್ಯೂಸಿಕ್ ಆನ್ ಮಾಡಲು ಟಚ್​ ಬಟನ್​ ಅನ್ನು ಹೊಂದಿದೆ.
  • ಜೊತೆಗೆ 10 ಎಂಎಂ ಡೈನಾಮಿಕ್ ಡ್ರೈವರ್‌ಗಳನ್ನುಸಹ ಹೊಂದಿದೆ.
  • ಈ pTron ಇಯರ್ ಬಡ್‌ಗಳು ನಾಯ್ಸ್​ ಕ್ಯಾನ್ಸಲೇಶನ್ ವೈಶಿಷ್ಟ್ಯವನ್ನು ಸಹ ಹೊಂದಿವೆ.
  • ಇದು ಹೆಚ್ಚಿನ ರೆಸಲ್ಯೂಶನ್ ಆಡಿಯೋ ಸಾಮರ್ಥ್ಯವನ್ನು ಒಳಗೊಂಡಂತಹ ಇಯರ್​ಬಡ್ಸ್ ಆಗಿದೆ. ಇದಲ್ಲದೆ,
  • ಪಿಟ್ರಾನ್ ಇಯರ್‌ಬಡ್‌ಗಳು HD ಡ್ಯುಯಲ್ ಮೈಕ್ ಸೆಟಪ್ ಅನ್ನು ಸಹ ಹೊಂದಿವೆ.
  • ಈ ಇಯರ್ ಬಡ್‌ಗಳನ್ನು ಫುಲ್​ ಚಾರ್ಜ್​ ಮಾಡಬೇಕಾದರೆ 1.5 ಗಂಟೆಗಳು ಬೇಕಾಗುತ್ತದೆ.
  • ಇದರಲ್ಲಿ USB ಟೈಪ್​ C ಪೋರ್ಟ್ ಕೂಡ ಇದೆ.
  • ಬ್ಲೂಟೂತ್ ಆವೃತ್ತಿ 5.3, 10 ಮೀಟರ್ ಒಳಗಿನ ಫೀಚರ್ಸ್​ ಅನ್ನು ಹೊಂದಿದೆ.
  • ಈ ಇಯರ್​​ಬಡ್ಸ್ ಪಿಟ್ರಾನ್ ಕಂಪನಿಯಿಂದ ಬಿಡುಗಡೆಯಾದಂತಹ ಹೊಸ ಸಾಧನವಾಗಿದ್ದು ಇದನ್ನು ಒಮ್ಮೆ ಚಾರ್ಜ್​ ಮಾಡಿದರೆ 60 ಗಂಟೆಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ.

ಸದ್ಯ ನೀವು ಈ ಇಯರ್​​ಬಡ್ ನ್ನು ಒಂದು ಸಲ ಚಾರ್ಜ್ ಫುಲ್ ಮಾಡಿದರೆ ಎರಡು ದಿವಸ ಚಾರ್ಜ್ ಚಿಂತೆ ಇಲ್ಲ. ಕಡಿಮೆ ಬೆಲೆ ಜೊತೆಗೆ ಬ್ಯಾಂಕ್ ಆಫರ್ ಇದೆ. ಇಯರ್ ಬಡ್ ಖರೀದಿಸಲು ಇದೊಂದು ಉತ್ತಮ ಆಯ್ಕೆ ಆಗಿದೆ.

You may also like

Leave a Comment