Home » SHOCKING NEWS | ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಲು ಹೊರಟ ಡಾಕ್ಟರ್ ಮತ್ತು ಸಿಬ್ಬಂದಿ, ತಾಯಿ-ಮಗು ಧಾರುಣ ಸಾವು

SHOCKING NEWS | ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಲು ಹೊರಟ ಡಾಕ್ಟರ್ ಮತ್ತು ಸಿಬ್ಬಂದಿ, ತಾಯಿ-ಮಗು ಧಾರುಣ ಸಾವು

0 comments

ಆಸ್ಪತ್ರೆಯಲ್ಲಿ ವೈದ್ಯರ ಅನುಪಸ್ಥಿತಿಯಲ್ಲಿ ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಲು ಹೊರಟಿದ್ದು, ಹೆರಿಗೆಯ ವೇಳೆ ಗರ್ಭಿಣಿ ಮಹಿಳೆ ಹಾಗೂ ಆಕೆಯ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಥ್ರೀ ಈಡಿಯಟ್ ಸಿನಿಮಾ ಮಾದರಿಯಲ್ಲಿ ವಿಡಿಯೋ ಮೂಲಕ ಹೆರಿಗೆ ಮಾಡಿಸಲು ಹೊರಟಿದ್ದು ಒಟ್ಟಾರೆ ದುರಂತಕ್ಕೆ ಕಾರಣ ಆಗಿದೆ.

ವೈದ್ಯರ ಅನುಪಸ್ಥಿತಿಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿದ್ದಾರೆ. ಪಂಜಾಬ್ ನ ಮಾನಸಾ ಎಂಬಲ್ಲಿಯ ಜಾಚಾ ಬಚಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಅವಗಡ ಸಂಭವಿಸಿದೆ. ಇದರಿಂದ ತಾಯಿ-ಮಗು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಅವತ್ತು ರಾತ್ರಿ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಡಾಕ್ಟರ್ ಅದು ತಾವು ಖುದ್ದಾಗಿ ಬರುವ ಬದಲು, ವಿಡಿಯೋ ಕಾಲ್ ಮೂಲಕ ತಮ್ಮ ಸಿಬ್ಬಂದಿಗೆ ಹೆರಿಗೆ ಮಾಡಿಸಲು ಸೂಚಿಸಿದ್ದರು. ಡಾಕ್ಟರದ ಸಲಹೆಯಂತೆ ವಿಡಿಯೋ ಕಾಲ್ ಮೂಲಕ ಡಾಕ್ಟರ್ ಹೇಳಿದ್ದನ್ನು ಸಿಬ್ಬಂದಿ ಪಾಲಿಸಲು ಹೊರಟರು. ಅರ್ಧ ಭಾಗ ಹೆರಿಗೆ ಮುಗಿದಿತ್ತು. ಆದರೆ ಹೆರಿಗೆ ಮಧ್ಯೆ ಅದೇನೋ ಎಡವಟ್ಟಾಗಿದೆ, ತಾಯಿ ಮತ್ತು ಹುಟ್ಟಿದ ಹೆಣ್ಣು ಮಗು ಇಬ್ಬರು ಕೂಡಾ ವಿಧಿವಶರಾಗಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳುವವರೆಗೆ ಮೃತರ ಶವ ಸಂಸ್ಕಾರ ಮಾಡಲು ನಿರಾಕರಿಸಿದ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಆಸ್ಪತ್ರೆ ಆಡಳಿತವು ಸಾವಿಗೆ ಸಂತಾಪ ಸೂಚಿಸಿದ್ದು, ಸೂಕ್ತ ಕ್ರಮಕ್ಕೆ ಭರವಸೆ ನೀಡಿದೆ. ಆಸ್ಪತ್ರೆಯಲ್ಲಿನ ಆಂತರಿಕ ಸಮಿತಿಯು ಈ ಬಗ್ಗೆ ತನಿಖೆ ನಡೆಸುತ್ತದೆ. ಆದರೆ, ಕುಟುಂಬವು ಇದುವರೆಗೆ ಯಾವುದೇ ಪೊಲೀಸರ ಮಧ್ಯಸ್ಥಿಕೆಯನ್ನು ಕೋರಿಲ್ಲ.

ಪಂಜಾಬ್‌ನ ಹಲವಾರು ಸರ್ಕಾರಿ ಆಸ್ಪತ್ರೆಗಳು ಸುರಕ್ಷಿತವಾಗಿ ಹೆರಿಗೆ ಮಾಡುವಲ್ಲಿ ಅಸಮರ್ಥತೆಯಿಂದಾಗಿ ಮಕ್ಕಳು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿದೆ.

You may also like

Leave a Comment