ಇತ್ತೀಚಿಗೆ ಆರೋಗ್ಯದಲ್ಲಿ ಏರು ಪೇರು ಆಗುತ್ತಿರುವುದು ನಾವು ಕಾಣಬಹುದು. ಅದರಲ್ಲೂ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮ ಆಗಿರುತ್ತದೆ ಎನ್ನುವುದು ನಮಗೆ ತಿಳಿದಿರುವ ವಿಚಾರ. ಆದ್ದರಿಂದ ಪೋಷಕರೇ ನೀವಿನ್ನು ಎಚ್ಚರ ಆಗಿರಬೇಕು. ಈಗಾಗಲೇ ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ಬಹಳ ದುಷ್ಟಪರಿಣಾಮ ಬೀರುತ್ತಿದೆ. ಪ್ರಸ್ತುತ ಚಳಿಗಾಲದ ಡಿಸೆಂಬರ್ ತಿಂಗಳಲ್ಲಿ ಹೀಗೆ ಮಳೆ, ಜೊತೆಗೆ ಶೀತಗಾಳಿ ಆಗುತ್ತಿರುವುದು ಜನರನ್ನು ಹೈರಾಣಗೊಳಿಸಿದೆ.
ಮುಖ್ಯವಾಗಿ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದಿರಿ. ಹೌದು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ ನಿರ್ಲಕ್ಷ್ಯ ಬೇಡವೇ ಬೇಡ. ಏಕೆಂದರೆ ರಾಜಧಾನಿಯಲ್ಲಿ ಶುರುವಾಗಿದೆ ಆತಂಕಕಾರಿ ಬ್ಲೂ ಫೀವರ್ ಭೀತಿ.
ಸದ್ಯ ಸೈಕ್ಲೋನ್ ಎಫೆಕ್ಟ್ ನಿಂದ ಮಾಮೂಲಿ ಶೀತ ಜ್ವರ ಭಾದೆ ಕಾಣಿಸಿಕೊಂಡಿದೆ ಎಂದು ಜನ ಯಾಮಾರುತ್ತಿದ್ದಾರೆ. ಶೀತ ಗಾಳಿಗೆ, ಬಿಡದ ಮಳೆಯಿಂದ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಇರಬಹುದು ಎಂದು ಅಂದುಕೊಳ್ಳದಿರಿ. ಆದರೆ ವೈರಲ್ ಇನ್ಫೆಕ್ಷನ್ ಮಧ್ಯೆ ಮತ್ತೊಂದು ಹೊಸ ರೋಗ ಕಾಲಿಟ್ಟಿದೆ. ಇದರಿಂದ ಪೋಷಕರು ಕಂಗಾಲಾಗಿದ್ದಾರೆ.
ರಾಜಧಾನಿಯಲ್ಲಿ ಮಕ್ಕಳಲ್ಲಿ ಕಾಣಿಸ್ತಿದೆ ಬ್ಲೂ ಫೀವರ್. ರಾಕಿ ಮೌಂಟೇನ್ ಸ್ಪಾಟೆಡ್ ಫೀವರ್ ಎಂದು ಕರೆಸಿಕೊಳ್ಳುವ ಈ ಬ್ಲೂ ಫೀವರ್ ಅಮೆರಿಕಾ, ಕೆನಾಡದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಪ್ರಾಣಿಗಳ ಉಣ್ಣೆಯಿಂದ ಇದು ಹರಡುವ ಸಾಧ್ಯತೆಯಿರುತ್ತದೆ. ನಾಯಿಗಳ ಟಿಕ್ ಫೀವರ್ನಿಂದ ಸೋಂಕು ಹರಡುವ ಸಾಧ್ಯತೆಯಿದೆ.
ಬ್ಲೂ ಫೀವರ್ ಗುಣಲಕ್ಷಣಗಳು:
- ತಲೆ ನೋವು
- ಜ್ವರ
- ಸುಸ್ತು
- ಶೀತ
- ಕಣ್ಣು ಕೆಂಪು
- ಮೈ ಕೈ ನೋವು
- ಮಂಡಿ ನೋವು ಈ ರೀತಿಯಾಗಿ ಬ್ಲೂ ಫೀವರ್ ಗುಣಲಕ್ಷಣಗಳು ಕಂಡು ಬರುತ್ತವೆ.
ಈ ಮೇಲಿನ ಗುಣಲಕ್ಷಣಗಳು ಗಂಭೀರ ಸ್ವರೂಪ ಪಡೆದಾಗ ಮೈ, ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರಾದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕರಾದ ಡಾ. ಸಂಜಯ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕರಾದ ಡಾ ನಾಗರಾಜ್ ಅವರುಗಳು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ಆದ್ದರಿಂದ ಈ ಮೇಲಿನ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಂಡಾಗ ಜಾಗೃತಿ ಆಗುವುದು ಉತ್ತಮ ಎಂದು ವೈದ್ಯರುಗಳು ಸಲಹೆ ನೀಡಿದ್ದಾರೆ.
