Home » Bank Holidays 2023: ಹೊಸ ವರ್ಷ ಬ್ಯಾಂಕ್ ರಜಾ ದಿನಗಳೆಷ್ಟು ಗೊತ್ತಾ ? RBI ಬಿಡುಗಡೆಗೊಳಿಸಿದ ರಜಾ ದಿನ ಪಟ್ಟಿಯ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

Bank Holidays 2023: ಹೊಸ ವರ್ಷ ಬ್ಯಾಂಕ್ ರಜಾ ದಿನಗಳೆಷ್ಟು ಗೊತ್ತಾ ? RBI ಬಿಡುಗಡೆಗೊಳಿಸಿದ ರಜಾ ದಿನ ಪಟ್ಟಿಯ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ

0 comments

RBI ಅಧಿಕೃತ ವೆಬ್‌ಸೈಟ್‌ನಲ್ಲಿ 2023 ರ ರಜಾದಿನಗಳನ್ನು ನವೀಕರಿಸಿದೆ. ಮುಂದಿನ ವರ್ಷ, ಕರ್ನಾಟಕದಲ್ಲಿ ಯಾವ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ ಎಂಬ ಮಾಹಿತಿ ತಿಳಿದಿರುವುದು ಅವಶ್ಯಕವಾಗಿದೆ.


ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಮುಗಿದು , ಹೊಸ ವರ್ಷ (New Year) ದ ಹೊಸ್ತಿಲಲ್ಲಿ ನಾವಿಂದು ಇದ್ದೇವೆ. ಹಳೆಯ ದುಃಖ ದುಮ್ಮಾನಗಳನ್ನು ಪಕ್ಕಕ್ಕಿರಿಸಿ, ಹೊಸ ಉತ್ಸಾಹದೊಂದಿಗೆ ಹೊಸ ಹೆಜ್ಜೆ ಇಡುತ್ತಾ ಹೊಸ ವರ್ಷಕ್ಕೆ ದಾಪುಗಲಿಡಬೇಕಾಗಿದೆ. 2023ರಲ್ಲಿ ಬ್ಯಾಂಕ್​ಗಳ ರಜಾ (2023 Bank Holidays) ದಿನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್(RBI) RBI ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತಿ ವರ್ಷ ಮುಂಚಿತವಾಗಿ ರಜಾದಿನಗಳ ವಿವರಗಳನ್ನು ನವೀಕರಿಸುತ್ತದೆ. 2023 ರಲ್ಲಿ, ಆರ್‌ಬಿಐ ಯಾವ ದಿನಗಳು ಬ್ಯಾಂಕ್‌ಗಳಿಗೆ ರಜೆ ಎಂಬ ಮಾಹಿತಿ ಲಭ್ಯವಾಗಿದೆ.

RBI ಅಧಿಕೃತ ವೆಬ್‌ಸೈಟ್‌ನಲ್ಲಿ 2023 ರ ರಜಾದಿನಗಳನ್ನು ನವೀಕರಿಸಿದೆ. ಮುಂದಿನ ವರ್ಷ, ಕರ್ನಾಟಕದಲ್ಲಿ ಯಾವ ದಿನಗಳಲ್ಲಿ ಬ್ಯಾಂಕ್ ರಜೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ:
2023 ರ ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿದೆ:

15-ಜನವರಿ- ಸಂಕ್ರಾಂತಿ-(ಭಾನುವಾರ)

26-ಜನವರಿ-ಗಣರಾಜ್ಯೋತ್ಸವ-( ಗುರುವಾರ)

18-ಫೆಬ್ರವರಿ-ಮಹಾ ಶಿವರಾತ್ರಿ- (ಶನಿವಾರ)

22-ಮಾರ್ಚ್​- ಚಂದ್ರಮಾನ ಯುಗಾದಿ-( ಬುಧವಾರ)

01-ಏಪ್ರಿಲ್​-ಬ್ಯಾಂಕ್‌ಗಳ ವಾರ್ಷಿಕ ಖಾತೆಗಳ ಮುಕ್ತಾಯ ದಿನ(ಶನಿವಾರ) 03-ಏಪ್ರಿಲ್​-ಮಹಾವೀರ ಜಯಂತಿ-(ಸೋಮವಾರ)

07-ಏಪ್ರಿಲ್​- ಗುಡ್​ ಫ್ರೈಡೇ-(ಶುಕ್ರವಾರ) 14-ಏಪ್ರಿಲ್​-ಡಾ.ಬಿ.ಆರ್​ ಅಂಬೇಡ್ಕರ್​ ಜಯಂತಿ-(ಶುಕ್ರವಾರ)

22-ಏಪ್ರಿಲ್​- ರಂಜಾನ್​-(ಶನಿವಾರ)

23-ಏಪ್ರಿಲ್​-ಬಸವ ಜಯಂತಿ-(ಭಾನುವಾರ)

1-ಮೇ-ಕಾರ್ಮಿಕರ ದಿನ-(ಸೋಮವಾರ) 29-ಜೂನ್​-ಬಕ್ರೀದ್​-(ಗುರುವಾರ)

29-ಜುಲೈ-ಮೊಹರಂನ ಕೊನೆಯ ದಿನ-(ಶನಿವಾರ)

15-ಆಗಸ್ಟ್​- ಸ್ವಾತಂತ್ರ್ಯ ದಿನಾಚರಣೆ-(ಮಂಗಳವಾರ)

18-ಸೆಪ್ಟೆಂಬರ್​-ಗಣೇಶ ಚತುರ್ಥಿ-(ಸೋಮವಾರ)

28-ಸೆಪ್ಟೆಂಬರ್​-ಈದ್ ಮಿಲಾದ್​- (ಗುರುವಾರ)

2-ಅಕ್ಟೋಬರ್​- ಗಾಂಧಿ ಜಯಂತಿ-(ಸೋಮವಾರ)

14-ಅಕ್ಟೋಬರ್​- ಮಹಾಲಯ ಅಮವಾಸ್ಯೆ-(ಶನಿವಾರ)

23-ಅಕ್ಟೋಬರ್​-ಮಹಾ ನವಮಿ, ಆಯುಧಪೂಜೆ-(ಸೋಮವಾರ)

24-ಅಕ್ಟೋಬರ್​- ವಿಜಯದಶಮಿ-(ಮಂಗಳವಾರ)

28-ಅಕ್ಟೋಬರ್​- ಮಹರ್ಷಿ ವಾಲ್ಮೀಕಿ ಜಯಂತಿ-(ಶನಿವಾರ)

1-ನವೆಂಬರ್-ಕನ್ನಡ ರಾಜ್ಯೋತ್ಸವ-(ಬುಧವಾರ)

12-ನವೆಂಬರ್​- ನರಕ ಚತುರ್ದಶಿ-(ಭಾನುವಾರ)

14-ನವೆಂಬರ್- ಬಲಿ ಪಾಡ್ಯಮಿ ದೀಪಾವಳಿ-(ಮಂಗಳವಾರ)

30-ನವೆಂಬರ್​- ಕನಕದಾಸರ ಜಯಂತಿ-(ಗುರುವಾರ)

25-ಡಿಸೆಂಬರ್​ ಕ್ರಿಸ್ಮಸ್​-(ಸೋಮವಾರ)

ಬ್ಯಾಂಕ್‌ಗಳಿಗೆ 26 ರಜೆಗಳು ದೊರೆಯಲಿವೆ. ಈ ರಜಾದಿನಗಳನ್ನು ಹೊರತುಪಡಿಸಿ ಸಾಮಾನ್ಯ ರಜಾದಿನಗಳಿವೆ. ಪ್ರತಿ ತಿಂಗಳ ಪ್ರತಿ ಭಾನುವಾರ, ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳು ತೆರೆಯುವುದಿಲ್ಲ. ಈ ಸಾರ್ವಜನಿಕ ರಜಾದಿನಗಳ ಜೊತೆಗೆ ಬ್ಯಾಂಕ್‌ಗಳು ಮುಚ್ಚಿದಾಗ ಗ್ರಾಹಕರು ಆನ್‌ಲೈನ್ ಬ್ಯಾಂಕಿಂಗ್, ನೆಟ್‌ಬ್ಯಾಂಕಿಂಗ್, UPI, NEFT ನಂತಹ ಸೇವೆಗಳನ್ನು ಬಳಸಬಹುದಾಗಿದೆ. ಬ್ಯಾಂಕ್ ರಜೆಗಳ ಮಾಹಿತಿ ತಿಳಿದಿದ್ದರೆ ಅಗತ್ಯ ವಹಿವಾಟು ನಡೆಸಲು ಬ್ಯಾಂಕ್ ಗೆ ಅಲೆದಾಡಿ ಸಮಯ ವ್ಯರ್ಥವಾಗದು.

You may also like

Leave a Comment