Home » ಇನ್ನು ಮುಂದೆ ಕೇರಂ, ಚೆಸ್‌ ಆಟಗಳಿಗೆ ಪೊಲೀಸ್‌ ಒಪ್ಪಿಗೆ ಅಗತ್ಯವಿಲ್ಲ

ಇನ್ನು ಮುಂದೆ ಕೇರಂ, ಚೆಸ್‌ ಆಟಗಳಿಗೆ ಪೊಲೀಸ್‌ ಒಪ್ಪಿಗೆ ಅಗತ್ಯವಿಲ್ಲ

0 comments

ಇತ್ತೀಚಿಗೆ ಕ್ಲಬ್‌ಗಳಲ್ಲಿ ಕೇರಂ, ಚೆಸ್, ರಮ್ಮಿ, ಸ್ನೂಕರ್ ಮತ್ತಿತರ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಅದಲ್ಲದೆ ಈ ಕುರಿತು ಜನರಿಗೆ ಹೆಚ್ಚಿನ ಆಸಕ್ತಿ ಸಹ ಜನರಿಗೆ ಇರುವ ಕಾರಣ
ಸದಸ್ಯರಿಗೆ ಮಾತ್ರ ಪ್ರವೇಶವಿರುವ ಕ್ಲಬ್‌ಗಳಲ್ಲಿ ಕೇರಂ, ಚೆಸ್, ರಮ್ಮಿ, ಸ್ನೂಕರ್ ಮತ್ತಿತರ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪರವಾನಗಿ ಪಡೆಯಲು ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ನೀಡಿದೆ.ಇದರಿಂದಾಗಿ ಕ್ಲಬ್‌ಗಳ ಮೇಲೆ ದಿನವೂ ನಡೆಯುತ್ತಿರುವ ಪೊಲೀಸರ ಕಿರುಕುಳ ತಗ್ಗಲಿದೆ ಎಂದು ಭರವಸೆ ಮೂಡಿದಂತೆ ಆಗಿದೆ.

ಸದ್ಯ ಪೊಲೀಸ್ ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಅಧಿಕಾರ ಬಳಸಬೇಕು ಎಂದು ಪ್ರತಿಯೊಂದು ಸಂಘ, ಸೊಸೈಟಿ ಅಥವಾ ಕ್ಲಬ್ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿವೆ ಎಂದು ಪೊಲೀಸರು ಊಹಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ತಿಳಿಸಲಾಗಿದೆ.

ಕ್ಲಬ್ ಆವರಣದಲ್ಲಿಯಾವುದೇ ಅಕ್ರಮ ಚಟುವಟಿಕೆಗಳು ನಡೆಸಬಾರದು. ಈ ವಿಚಾರದಲ್ಲಿ ಅಗತ್ಯ ಬಿದ್ದರೆ ಪರಿಶೀಲನೆ ನಡೆಸಿ ಕ್ಲಬ್ ಚಟುವಟಿಕೆಗಳ ಸ್ವರೂಪ ತಿಳಿಯಲು ಪೊಲೀಸ್ ಪ್ರಾಧಿಕಾರಗಳು ಮುಕ್ತವಾಗಿವೆ ಎಂದಿರುವ ನ್ಯಾಯಾಲಯ, ಅರ್ಜಿದಾರ ಕಬ್ಲ್‌ನ ಕಾನೂನಾತ್ಮಕ ಚಟುವಟಿಕೆಗಳಿಗೆ ಅಡ್ಡಿಪಡಿಸಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿದೆ.

ಚೆಸ್ ಹಾಗೂ ಕೇರಂ ಸೇರಿ ಮನೋರಂಜನಾ ಚಟುವಟಿಕೆ ನಡೆಸಲು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯಬೇಕೆಂದು ಒತ್ತಾಯಿಸಿದ ಪೊಲೀಸರ ಕ್ರಮ ಪ್ರಶ್ನಿಸಿ ಮೈಸೂರಿನ ಲಕ್ಷ್ಮೀದೇವಿ ರಿಕ್ರಿಯೇಷನ್ ಕ್ಲಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ.

ಕ್ಲಬ್ ತನ್ನ ಸದಸ್ಯರಿಗೆ ಮನರಂಜನಾ ಚಟುವಟಿಕೆ ಒದಗಿಸುವ ಸಂಘವಾಗಿದೆ. ಉಚಿತವಾಗಿ ಹಾಗೂ ಯಾವುದೇ ಮೊತ್ತ ಪಾವತಿಸಿ ಪ್ರವೇಶ ಕೋರಲು ಸಾರ್ವಜನಿಕ ಸದಸ್ಯರು ಅರ್ಹರಿಲ್ಲ. ಸದಸ್ಯರಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ, ಯಾವುದೇ ಕ್ಲಬ್ ಅಥವಾ ಸಂಘವು ಮನೋರಂಜನಾ ಚಟುವಟಿಕೆ ಆಯೋಜಿಸಲು ಯಾವುದೇ ಅನುಮತಿ ಅಥವಾ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದೆ.

ಅದಲ್ಲದೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಅನುಮತಿ ಪಡೆಯುವಂತೆ ಪೊಲೀಸರು ಒತ್ತಾಯ ಮಾಡುತ್ತಿರುವುದು ಏಕಪಕ್ಷೀಯ ಮತ್ತು ನ್ಯಾಯಸಮ್ಮತವಲ್ಲದ ಕ್ರಮವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

You may also like

Leave a Comment