Home » ಹಸು, ಕೋಳಿ, ಆಡು ಸಾಕಣೆ ಕೇಂದ್ರ ಸ್ಥಾಪನೆಗೆ ಶೇಕಡಾ 50ರಷ್ಟು ಸಹಾಯಧನ

ಹಸು, ಕೋಳಿ, ಆಡು ಸಾಕಣೆ ಕೇಂದ್ರ ಸ್ಥಾಪನೆಗೆ ಶೇಕಡಾ 50ರಷ್ಟು ಸಹಾಯಧನ

by ಹೊಸಕನ್ನಡ
0 comments

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರು ದೆಹಲಿಯಲ್ಲಿ ಮಾಧ್ಯಮ ಸಂವಾದದಲ್ಲಿ “ಅಮೃತ್ ಕಾಲದಲ್ಲಿ ಅಮೃತ್ ಪೀಳಿಗೆಯನ್ನು ಸಶಕ್ತಗೊಳಿಸುವುದು ಮತ್ತು ಭಾರತದ ಯುವಕರನ್ನು ಸಬಲೀಕರಣಗೊಳಿಸುವ” ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವೇಳೆ, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಹಸು/ಎಮ್ಮೆ/ಕೋಣ/ಎತ್ತು/ಹಂದಿ/ಕೋಳಿ/ಆಡು ಸಾಕಣೆ ಕೇಂದ್ರಗಳು ಮತ್ತು ಬೆಳೆಗಳನ್ನು ಸೈಲೇಜ್(ರಸಮೇವು) ಮಾಡುವ ಘಟಕಗಳಲ್ಲಿ ಕ್ರಮವಾಗಿ 4 ಕೋಟಿ ರೂಪಾಯಿ, 1 ಕೋಟಿ ರೂಪಾಯಿ, 60 ಲಕ್ಷ ರೂಪಾಯಿ, 50 ಲಕ್ಷ ರೂಪಾಯಿ ಮೇಲೆ ಶೇಕಡಾ 50ರಷ್ಟು ಸಹಾಯಧನ ನೀಡುವ ಯೋಜನೆ ಇದೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಮಾಹಿತಿ ನೀಡಿದ್ದಾರೆ.

ಪ್ರಾಣಿಗಳ ಚಿಕಿತ್ಸೆಗಾಗಿ 4,332 ಕ್ಕೂ ಹೆಚ್ಚು ಸಂಚಾರಿ ಪಶುವೈದ್ಯಕೀಯ ಘಟಕಗಳನ್ನು ತೆರೆಯಲು ವ್ಯವಸ್ಥೆ  ಮಾಡಲಾಗುತ್ತಿರುವ ಕುರಿತು ಎಂದು ಡಾ. ಸಂಜೀವ್ ಬಲ್ಯಾನ್ ಮಾಹಿತಿ ನೀಡಿದ್ದಾರೆ. ಇದಲ್ಲದೆ, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ದೇಶಿ ಗೋ ತಳಿಗಳ ಸಾಕಣೆಗೆ ಉತ್ತೇಜನ ನೀಡಲಾಗುತ್ತಿದೆ ಎಂದಿದ್ದಾರೆ.

ಒಟ್ಟು 90,598 ಉದ್ಯೋಗಗಳಲ್ಲಿ 16 ಸಾವಿರ ಯುವಕರು “ಮೈತ್ರಿ” ಯೋಜನೆಯಡಿಯಲ್ಲಿ ಉದ್ಯೋಗ ಪಡೆದಿರುವ ಕುರಿತು ಮಾಹಿತಿ ನೀಡಿದ್ದಾರೆ. ದೇಶದ ಯುವಕರು ಸಚಿವಾಲಯದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆನ್‌ಲೈನ್ ಸೌಲಭ್ಯವನ್ನು ಕೂಡ ಒದಗಿಸಲಾಗಿದೆ ಎಂದು ಈ ವೇಳೆ ಮಾಹಿತಿ ನೀಡಿದ್ದಾರೆ.

ಪಶುಸಂಗೋಪನಾ ಇಲಾಖೆಯಿಂದ ನೇರವಾಗಿ ಮತ್ತು ಪರೋಕ್ಷವಾಗಿ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಉದ್ಯೋಗ ನೀಡಲಾಗುವ ಕುರಿತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಮಾಹಿತಿ ಹಂಚಿಕೊಂಡಿದ್ದಾರೆ. ಹಸು / ಎಮ್ಮೆ/ಎತ್ತು/ಕೋಣ / ಹಂದಿ / ಕೋಳಿ / ಮೇಕೆ ಸಾಕಣೆ ಕೇಂದ್ರಗಳು ಮತ್ತು ಸೈಲೇಜ್ ತಯಾರಿಕೆ ಘಟಕಗಳಿಗೆ ಅನುಕ್ರಮವಾಗಿ 4 ಕೋಟಿ, 1 ಕೋಟಿ, 60 ಲಕ್ಷ, 50 ಲಕ್ಷ ರೂಪಾಯಿ ಸಹಾಯಧನ ನೀಡುವ ಯೋಜನೆ ಇರುವ ಕುರಿತು ಮಾಹಿತಿ ನೀಡಿದ್ದಾರೆ.

ಒಟ್ಟು ಮೊತ್ತದಲ್ಲಿ, ಶೇಕಡಾ 50ರಷ್ಟು ಸಬ್ಸಿಡಿಯನ್ನು ಭಾರತ ಸರ್ಕಾರವು ನೀಡಲಿದ್ದು,  ಇದರ ಹೊರತಾಗಿ, ಸಾಲದ ಮೊತ್ತದ ಮೇಲೆ ಶೇಕಡಾ 3ರಷ್ಟು ಬಡ್ಡಿ ರಿಯಾಯಿತಿಯನ್ನು -ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (AHIDF) ಯೋಜನೆಯಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

You may also like

Leave a Comment