4
ಬೆಳ್ತಂಗಡಿ: ಶಬರಿಮಲೆಗೆಂದು ಹೊರಟ ಮಿನಿ ಬಸ್‌ವೊಂದು ಬ್ರೇಕ್‌ಫೇಲ್ ಆಗಿ ಅರಣ್ಯಕ್ಕೆ ನುಗ್ಗಿದ ಘಟನೆಯೊಂದು ಇಂದು ಬೆಳಗ್ಗೆ ನಡೆದಿದೆ. ಹೌದು, ಬಳ್ಳಾರಿಯಿಂದ ಶಬರಿಮಲೆಗೆ ಹೊರಟ ಮಿನಿ ಬಸ್ ಮುಂಡಾಜೆಯ ಉಳ್ಳಾಲ್ತಿ ಕಟ್ಟೆ ಎಂಬಲ್ಲಿ ಬ್ರೇಕ್ ಫೇಲ್ ಆಗಿ ಬಸ್ ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದೆ. ಇದರ ಪರಿಣಾಮ ಹಲವರಿಗೆ ಗಂಭೀರ ಗಾಯವಾದ ಘಟನೆ ಡಿ. 23ರ ಬೆಳ್ಳಿಗ್ಗೆ ಸಂಭವಿಸಿದೆ.
ವಾಹನ ನುಗ್ಗಿದ ಸ್ಥಳದಲ್ಲಿ ಕಂದಕ ಹಾಗೂ ವಿದ್ಯುತ್ ಕಂಬವಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ. ಕೂಡ್ಲಗಿ ತಾಲೂಕಿನ ಚಿಕ್ಕಜೋಗೆ ಹಳ್ಳಿಯ ಶಶಿ, ಜಲಧರ, ರಘು, ಬಸವರಾಜ್, ಲೋಕ ಎಂಬವರು ಗಾಯಗೊಂಡಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ತೆರಳಲಿದ್ದು, ಒಟ್ಟು 6 ಆಂಬ್ಯುಲೆನ್ಸ್ ನಲ್ಲಿ ಪ್ರಯಾಣಿಕರನ್ನು ತಾಲೂಕಿನ ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದೆ.
