ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್ ಒನ್ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.
ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮೂರು ಸಂಸ್ಥೆಗಳು ಪ್ರೀಪೇಡ್ ರೀಚಾರ್ಜ್ ಬೆಲೆಗಳನ್ನು ಹೆಚ್ಚಿಸಿದ ಬಳಿಕ ಜನರು ಪ್ರತಿ ಮಾಸಿಕ ರೀಚಾರ್ಜ್‌ಗಳನ್ನೂ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
28 ದಿನಗಳ ವ್ಯಾಲಿಡಿಟಿ ಅಥವಾ 30 ದಿನಗಳ ವ್ಯಾಲಿಡಿಟಿ ಪ್ರೀಪೇಡ್ ಯೋಜನೆಗಳಿಗೆ ರೀಚಾರ್ಜ್ ಮಾಡಿದರೆ ಮತ್ತೆ ಮರು ತಿಂಗಳಿನ ರೀಚಾರ್ಜ್ ಮಾಡಿಸಬೇಕಾದ ದಿನಗಳು ಬೇಗನೆ ಬಂದು ಬಿಡುತ್ತವೆ. ಹೀಗಾಗಿ, ಬಹುತೇಕ ಜನರು ಹೆಚ್ಚು ವ್ಯಾಲಿಡಿಟಿ ಹೊಂದಿರುವ ಪ್ರೀಪೇಡ್ ಯೋಜನೆಗಳನ್ನು ಹುಡುಕುತ್ತಿದ್ದಾರೆ.
ನೀವು ಕೂಡ ಇಂತಹದೊಂದು ಜನಪ್ರಿಯ ಪ್ರೀಪೇಡ್ ಯೋಜನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರೆ ಈ ಮಾಹಿತಿ ನಿಮಗಾಗಿ, ಜಿಯೋ ಹಾಗೂ ಏರ್‌ಟೆಲ್ ಒದಗಿಸುತ್ತಿರುವ 84 ದಿನಗಳ ವ್ಯಾಲಿಡಿಟಿ ಯೋಜನೆಗಳು ನಿಮ್ಮ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಜನಪ್ರಿಯ ಪ್ರೀಪೇಡ್ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಏರ್‌ಟೆಲ್ vs ಜಿಯೋ: 84 ದಿನಗಳ ವ್ಯಾಲಿಡಿಟಿಯ ಬೆಸ್ಟ್ ಪ್ರಿಪೇಯ್ಡ್ ಪ್ಲ್ಯಾನ್ ಯಾವುದು ?
ಜಿಯೋವಿನ 719 ರೂ. ಬೆಲೆಯ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರು 84 ದಿನಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ 2GB ದೈನಂದಿನ ಇಲ್ಲವೇ 168GB ಡೇಟಾವನ್ನು ಪಡೆಯಬಹುದು. ಇದಲ್ಲದೆ ಅನಿಯಮಿತ ಕರೆಗಳು ಹಾಗೂ ಪ್ರತಿದಿನ 100 SMS ಪ್ರಯೋಜನಗಳು ಕೂಡ ಲಭ್ಯವಾಗಲಿದೆ. ಇವುಗಳ ಜೊತೆಗೆ JioTV ಸೇರಿದಂತೆ JioCinema, JioSecurity ಮತ್ತು JioCloud ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶ ಕೂಡ ಲಭ್ಯವಾಗಲಿದೆ.
ಪ್ರತಿದಿನದ 2GB ಡೇಟಾ ಕೋಟಾ ಮುಗಿದ ಬಳಿಕ, ಡೇಟಾ ಸ್ಪೀಡ್ ವೇಗವು 64 Kbpsಗೆ ಇಳಿಯುತ್ತದೆ. ಪ್ರಸ್ತುತ ಕಡಿಮೆ ಬೆಲೆಯಲ್ಲಿ ಅತಿಹೆಚ್ಚು ಡೇಟಾ ಲಾಭವನ್ನು ನೀಡುತ್ತಿರುವ ತ್ರೈಮಾಸಿಕ ಪ್ರೀಪೇಡ್ ಯೋಜನೆ ಇದಾಗಿದ್ದು, ಗ್ರಾಹಕರು 84 ದಿನಗಳ ಕಾಲ ರೀಚಾರ್ಜ್ ಮಾಡದೇ ಟೆಲಿಕಾಂ ಸೇವೆಗಳನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.
839 ರೂ. ಬೆಲೆಯ ಏರ್‌ಟೆಲ್ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್‌ನ 839 ರೂ. ಬೆಲೆಯ ರೀಚಾರ್ಜ್ ಯೋಜನೆಯು ಸಹ 84 ದಿನಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ 2GB ದೈನಂದಿನ ಅಥವಾ ಒಟ್ಟು 168GB ಡೇಟಾ ಒದಗಿಸುತ್ತದೆ. ಇದಲ್ಲದೆ ಅನಿಯಮಿತ ಕರೆಗಳು ಹಾಗೂ ಪ್ರತಿದಿನ 100 SMS ಪ್ರಯೋಜನಗಳು ದೊರೆಯುತ್ತವೆ.
ಈ ಯೋಜನೆಯಲ್ಲಿ ಗ್ರಾಹಕರು ಮೂರು ತಿಂಗಳ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲದೆ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್, 100 ರೂ. ಫಾಸ್ಟ್ಟ್ಯಾಗ್ ಕ್ಯಾಶ್‌ಬ್ಯಾಕ್, ವಿಂಕ್ ಮ್ಯೂಸಿಕ್ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಈ ಯೋಜನೆಯು ಮೂರು ತಿಂಗಳ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿರುವುದರಿಂದ, ಓಟಿಟಿ ಪ್ರಿಯರಿಗೆ ಇದು ಜಿಯೋವಿನ 719 ರೂ. ಯೋಜನೆಗಿಂತಲೂ ಅತ್ಯುತ್ತಮ ಯೋಜನೆ ಎಂದು ಹೇಳಬಹುದಾಗಿದೆ.
719 ರೂ. ಬೆಲೆಯ ಏರ್‌ಟೆಲ್ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ ಬಳಕೆದಾರರಿಗೆ ಜಿಯೋ ಒದಗಿಸುವಂತೆ 719 ರೂ. ಬೆಲೆಯ ರೀಚಾರ್ಜ್ ಯೋಜನೆಯು ಕೂಡ ಲಭ್ಯವಿದೆ. ಆದರೆ, ಈ ಯೋಜನೆಯು ಕೇವಲ 1.5 GB ದೈನಂದಿನ ಡೇಟಾವನ್ನು ನೀಡಲಿದೆ. ಈ ಯೋಜನೆಯ ಸಂಪೂರ್ಣ ಅನುಕೂಲ ನೋಡುವುದಾದರೆ, ಪ್ರತಿದಿನ1.5 GB ದೈನಂದಿನ ಡೇಟಾ ಜೊತೆಗೆ ಅನಿಯಮಿತ ಕರೆಗಳು ಜೊತೆಗೆ ಪ್ರತಿದಿನ 100 SMS ಪ್ರಯೋಜನಗಳು ಲಭ್ಯವಾಗುತ್ತದೆ.
ಈ ಯೋಜನೆಯಲ್ಲಿ ಗ್ರಾಹಕರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್, 100 ರೂ. ಫಾಸ್ಟ್ಟ್ಯಾಗ್ ಕ್ಯಾಶ್‌ಬ್ಯಾಕ್, ವಿಂಕ್ ಮ್ಯೂಸಿಕ್ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಆದರೆ, ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ದೊರೆಯುವುದಿಲ್ಲ. ಹಾಗಾಗಿ, ಇದಕ್ಕಿಂತಲೂ ಜಿಯೋವಿನ 719 ರೂ. ಬೆಲೆಯ ಯೋಜನೆ ಉತ್ತಮ ಎನ್ನಬಹುದು.
