Home » ಸಿಕ್ಕಿಂನಲ್ಲಿ 16 ಸೇನಾ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಿದ ರಾಜನಾಥ್ ಸಿಂಗ್

ಸಿಕ್ಕಿಂನಲ್ಲಿ 16 ಸೇನಾ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಿದ ರಾಜನಾಥ್ ಸಿಂಗ್

0 comments

ನವದೆಹಲಿ : ಉತ್ತರ ಸಿಕ್ಕಿಂನಲ್ಲಿ 16 ಸೇನಾ ಸಿಬ್ಬಂದಿ ಮೃತಪಟ್ಟಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್‌ ಮಾಡುವ ಮೂಲಕ  ಸಂತಾಪ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, “ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಭಾರತೀಯ ಸೇನಾ ಸಿಬ್ಬಂದಿಯ ಪ್ರಾಣಹಾನಿಯಿಂದ ತೀವ್ರ ನೋವಾಗಿದೆ. ಅವರ ಸೇವೆ ಮತ್ತು ಬದ್ಧತೆಗಾಗಿ ರಾಷ್ಟ್ರವು ಆಳವಾಗಿ ಕೃತಜ್ಞವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದರು.

You may also like

Leave a Comment