Home » Tata EV Car: ಮಾರುಕಟ್ಟೆಗೆ ಬಂತು ಟಾಟಾದ ಮತ್ತೊಂದು ಎಲೆಕ್ಟ್ರಿಕ್​ ಕಾರು!

Tata EV Car: ಮಾರುಕಟ್ಟೆಗೆ ಬಂತು ಟಾಟಾದ ಮತ್ತೊಂದು ಎಲೆಕ್ಟ್ರಿಕ್​ ಕಾರು!

0 comments

ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ಕಂಪನಿಯು ಗ್ರಾಹಕರಿಗೆ ಆಕರ್ಷಿತವಾಗುವ ವಾಹನಗಳನ್ನೇ ಬಿಡುಗಡೆ ಮಾಡುತ್ತಿದೆ. ಎಲೆಕ್ಟ್ರಿಕ್ ವಾಹನದ ನಿರ್ವಹಣೆ ಸುಲಭ ಆಗಿರುವುದರಿಂದ ಜನರನ್ನು ಹೆಚ್ಚು ಆಕರ್ಷಿಸಿದೆ. ಹಾಗೇ ಇತ್ತೀಚೆಗೆ ಟಾಟಾ ಮೋಟಾರ್ಸ್ ನ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಕಂಪನಿಯು ಈಗಾಗಲೇ ನಾಲ್ಕು SUV ಗಳನ್ನು ಬಿಡುಗಡೆ ಮಾಡಿದ್ದು, ಟಾಟಾ ಟಿಯಾಗೊ ಇವಿ, ಟಾಟಾ ಟಿಗೊರ್ ಇವಿ, ಟಾಟಾ ನೆಕ್ಸಾನ್ ಇವಿ ಪ್ರೈಮ್, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಪರಿಚಯಿದ್ದು, ಅತಿ ಶೀಘ್ರದಲ್ಲೇ ಮತ್ತೊಂದು SUV ಯನ್ನು ಪರಿಚಯಿಸಲಿದೆ.

ಟಾಟಾ ಬಿಡುಗಡೆ ಮಾಡಲು ಹೊರಟಿರುವ ಕಾರು, ಪಂಚ್ EV ಆಗಿದ್ದು, ಈ ಕಾರು ದೇಶದ ಮೊದಲ ಎಲೆಕ್ಟ್ರಿಕ್ ಮೈಕ್ರೋ-ಎಸ್‌ಯುವಿ ಆಗಲಿದೆ. ಹಾಗೇ ಕಂಪನಿ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಟಾಟಾ ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ಟಾಪ್ ಎಕ್ಸಿಕ್ಯೂಟಿವ್ ವಿವೇಕ್ ಶ್ರೀವತ್ಸ ತಿಳಿಸಿದ್ದಾರೆ. ಇನ್ನೂ, ಬೆಲೆಯಲ್ಲಿ ಇದು ಟಾಟಾ ಟಿಯಾಗೊ EV ಮತ್ತು ಟಿಗೊರ್ EV ಯ ಹಾಗೆಯೆ ಇರುತ್ತದೆ ಎನ್ನಲಾಗಿದೆ.

ಇನ್ನೂ, ಮಾರುಕಟ್ಟೆ ಮೂಲಗಳ ಪ್ರಕಾರ, ಟಾಟಾ ಪಂಚ್ ಇವಿ 2023 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಟಾಟಾ ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಟಾಟಾ ಪಂಚ್ ಇವಿ ಬರಲಿದ್ದು, ಇದರಲ್ಲಿ ಎಲೆಕ್ಟ್ರಿಕ್ ಪವರ್ ಟ್ರೈನ್ ಇರಬಹುದು. ಹಾಗೇ ಇವಿ ವಿಭಾಗದಲ್ಲಿ ಟಾಟಾ ಪಂಚ್, ಟಿಯಾಗೊ, ಟಿಗೊರ್ ಮತ್ತು ನೆಕ್ಸಾನ್ ಟ್ವಿನ್‌ಗಳಲ್ಲಿ ಕಂಡುಬರುವ ಹೈ-ವೋಲ್ಟೇಜ್ ಜಿಪ್‌ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಟಾಟಾ ಪಂಚ್ ಇವಿಯಲ್ಲಿ ಕೂಡ ಇರುವ ಸಾಧ್ಯತೆ ಹೆಚ್ಚಿದೆ.

ಈ ಹೊಸ ಮಾದರಿಯ ಬೆಲೆ ಸುಮಾರು 10 ರಿಂದ 13 ಲಕ್ಷ ರೂಪಾಯಿ ಇರಬಹುದು ಎಂದು ಹೇಳಲಾಗಿದೆ. ಇನ್ನೂ, ದೇಶದಲ್ಲಿ ಬಿಡುಗಡೆಯಾಗಲಿರುವ ಈ ಟಾಟಾ ಪಂಚ್ EV , Citroen eC3 EV ಮೈಕ್ರೋ-SUV ಗಳೊಂದಿಗೆ ಸ್ಪರ್ಧಿಸಲಿದೆ.

You may also like

Leave a Comment