Home » ಮಂಡ್ಯದಲ್ಲಿ ಪಂಚರತ್ನ ಯಾತ್ರೆ : ಮಹಿಳೆಯರಿಗೆ ಸ್ಟೀಲ್ ಬಿಂದಿಗೆ ಗಿಫ್ಟ್‌, ಮುಗಿಬಿದ್ದ ಕಾರ್ಯಕರ್ತರು

ಮಂಡ್ಯದಲ್ಲಿ ಪಂಚರತ್ನ ಯಾತ್ರೆ : ಮಹಿಳೆಯರಿಗೆ ಸ್ಟೀಲ್ ಬಿಂದಿಗೆ ಗಿಫ್ಟ್‌, ಮುಗಿಬಿದ್ದ ಕಾರ್ಯಕರ್ತರು

0 comments

ಮಂಡ್ಯ :  ಕೆಆರ್ ಪೇಟೆಯಲ್ಲಿ ನಡೆದ ಪಂಚರತ್ನ ಯಾತ್ರೆ ಪಾಲ್ಗೊಂಡವರಿಗೆ ಸ್ಟೀಲ್‌ ಬಿಂದಿಗೆಯನ್ನು ಲಾರಿಯಲ್ಲಿ ತಂದು ಎಸೆಯುವ ಮೂಲಕ ಮಹಿಳೆಯರಿಗೆ  ಗಿಫ್ಟ್‌ ನೀಡಲಾಯಿತು ಈ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಈ ಕಾರ್ಯಕ್ರಮಕ್ಕೆ ಪೂರ್ಣ ಕುಂಭ ಸ್ವಾಗತದ ಮೂಲಕ   ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ  ಸ್ವಾಗತಿಸಲಾಗಿತ್ತು.  ಕೆಆರ್ ಪೇಟೆಯಲ್ಲಿ  ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜು ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಪ್ರಚಾರ ಮಾಡಿದ್ದಾರೆ.

ಪಂಚರತ್ನ ಯಾತ್ರೆ ಕಾರ್ಯಕ್ರಮದಲ್ಲಿ  ಪೂರ್ಣ ಕುಂಭ ಸ್ವಾಗತಕ್ಕಾಗಿ ಅಭ್ಯರ್ಥಿ ಮಂಜು ಅವರು 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಆದರೆ ಪೂರ್ಣಕುಂಭ ಸಿದ್ಧತೆಗೆ ಕೇವಲ 1 ಸಾವಿರ ಬಿಂದಿಗೆಗಳನ್ನು ಬಳಸಲಾಗಿತ್ತು. ಈ ವೇಳೆ ಉಳಿದ ಬಿಂದಿಗೆಗಳನ್ನು ಜೆಡಿಎಸ್ ಮುಖಂಡರು ಮಹಿಳೆಯರಿಗೆ ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ.ಕಾರ್ಯಕ್ರಮದಲ್ಲಿ ಭಾಗಿಯಾದವರನ್ನು ಗೌರವಯುತವಾಗಿ ನಡೆದುಕೊಳ್ಳದೇ ಎಸೆಯುವ ಮೂಲಕ ಮಹಿಳೆಯರಿಗೆ  ಗಿಫ್ಟ್‌ ನೀಡಿದ್ದಾರೆ ಎಂದು ಆಕ್ರೋಶಗಳು ಕೇಳಿ ಬಂದಿತ್ತು.

You may also like

Leave a Comment