ಸಾಮಾನ್ಯರ ದಿನನಿತ್ಯದ ಪ್ರತೀ ಕಾರ್ಯಗಳಲ್ಲೂ ಆಧಾರ್ ಕಾರ್ಡ್ ಆವಶ್ಯಕವಾಗಿದೆ. ಒಬ್ಬ ವ್ಯಕ್ತಿಯ ಗುರುತಿನ ಹೊರತಾಗಿ ಬ್ಯಾಂಕಿಂಗ್ ಸೇವೆ, ಸರ್ಕಾರಿ ಸೇವೆ, ಹೀಗೆ ಅನೇಕ ಸೇವೆಗಳಲ್ಲಿ ಆಧಾರ್ ಕಾರ್ಡಿನ ಪಾತ್ರ ಮಹತ್ವವಾದದ್ದು.
ಇದೀಗ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಇತ್ತೀಚಿನ ಸಾರ್ವಜನಿಕ ಸಲಹೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕಳೆದ 10 ವರ್ಷಗಳಲ್ಲಿ ತಮ್ಮ ಆಧಾರ್ ಕಾರ್ಡ್ ನವೀಕರಿಸದ ಭಾರತೀಯ ನಿವಾಸಿಗಳು, ಸರ್ಕಾರಿ ಡೇಟಾಬೇಸ್’ನಲ್ಲಿ ಮಾಹಿತಿಯ ನಿಖರತೆಯನ್ನ ಮುಂದುವರಿಸಲು ದಾಖಲೆಗಳನ್ನ ನವೀಕರಿಸಬೇಕು ಎಂದು ಒತ್ತಾಯಿಸುತ್ತಿದೆ.
ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳು ಮತ್ತು ಪ್ರಯೋಜನಗಳನ್ನು ಪಡೆಯಲು ನಿಮ್ಮ ದಾಖಲೆಗಳನ್ನು ಯಾವಾಗಲೂ ನಿಮ್ಮ ಆಧಾರ್’ನಲ್ಲಿ ನವೀಕರಿಸಬೇಕು. ಇದಕ್ಕಾಗಿ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುಬಹುದು ಅಥವಾ ಮೈ ಆಧಾರ್ ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳನ್ನು (ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ) ಆನ್ನೈನಲ್ಲಿ ಅಪ್ಲೋಡ್ ಮಾಡುವ ಮೂಲಕ ಜನರು ತಮ್ಮ ಆಧಾರ್ ವಿವರಗಳನ್ನು ನವೀಕರಿಸಬಹುದಾಗಿದೆ. ನಿಮ್ಮ ಆಧಾರ್’ನಲ್ಲಿ ದಾಖಲೆಗಳನ್ನು ನವೀಕರಿಸಲು ನೀಡಬೇಕಾದ ಶುಲ್ಕಗಳು, ಆನ್ಲೈನ್ : 25 ರೂ., ಆಫ್ಲೈನ್ : 50 ರೂ. ಎಂದು ಯುಐಡಿಎಐ ಟ್ವಿಟ್ ಮಾಡಿದೆ.
ನಿಮ್ಮ ವಿಳಾಸವನ್ನು ನವೀಕರಿಸಲು ಸೆಲ್ಫ್-ಸರ್ವೀಸ್ ಅಪ್ ಡೇಟ್ ಪೋರ್ಟಲ್ (SSUP)ನಲ್ಲಿ ನೀವು ಆನ್ನೈನಲ್ಲಿ ಮೂಲಕ ನವೀಕರಿಸಬೇಕು ಎಂದು ಯುಐಡಿಎಐ ತಿಳಿಸಿದೆ. ಆಧಾರ್’ನಲ್ಲಿ ಜನಸಂಖ್ಯಾ ವಿವರಗಳಾದ ಹೆಸರು, ವಿಳಾಸ, ಡಿಒಬಿ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ಮತ್ತು ಬಯೋಮೆಟ್ರಿಕ್ಸ್ (ಫಿಂಗರ್ ಪ್ರಿಂಟ್ಸ್, ಐರಿಸ್ ಮತ್ತು ಫೋಟೋಗ್ರಫಿ) ನಂತಹ ಇತರ ವಿವರಗಳಿಗಾಗಿ, ನೀವು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಇದಲ್ಲದೆ, ಆಧಾರ್ ಹೊಂದಿರುವ 15 ವರ್ಷ ತುಂಬಿದ ಮಕ್ಕಳು ಅಥವಾ ತಮ್ಮ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಬೇಕಾದ ಇತರರು – ಬೆರಳಚ್ಚುಗಳು, ಐರಿಸ್ ಮತ್ತು ಛಾಯಾಚಿತ್ರಗಳನ್ನು ನವೀಕರಿಸಲು ಸಹ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
