Home » BPL Card ಹೊಂದಿರುವವರೇ ನಿಮಗೊಂದು ಸಿಹಿ ಸುದ್ದಿ!!!

BPL Card ಹೊಂದಿರುವವರೇ ನಿಮಗೊಂದು ಸಿಹಿ ಸುದ್ದಿ!!!

0 comments

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ. ಇದೀಗ, ಉಚಿತ ಪಡಿತರ ಪಡೆಯುವವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.

ಬೆಳಗಾವಿ ಮಾನದಂಡಗಳ ಅನುಸಾರ ಬಿಪಿಎಲ್ ಕಾರ್ಡ್ ರದ್ದು ಸ್ಥಗಿತ ಮಾಡಲು ಸಂಬಂಧ ಪಟ್ಟಂತೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಸಚಿವ ಗೋವಿಂದ ಕಾರಜೋಳ ರವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ದ್ವಿಚಕ್ರ ವಾಹನ ಹೊಂದಿದವರಿಗೂ ಬಿಪಿಎಲ್ ಕಾರ್ಡ್ ಇಲ್ಲ ಎನ್ನುವ ಮಾನದಂಡ ತರಲಾಗಿತ್ತು. ಈಗ ನಾಲ್ಕು ಚಕ್ರಗಳ ವಾಹನ ಹೊಂದಿರುವ ಕುಟುಂಬಗಳು ಅರ್ಹವಲ್ಲ ಎಂದು ಪರಿಗಣಿಸಲಾಗಿದೆ. ತರಕಾರಿ ಮಾರುವವರು, ಬಾಡಿಗೆ ವಾಹನಗಳ ಚಾಲಕರ ಕುಟುಂಬಗಳು ಸೇರಿದಂತೆ ಲಕ್ಷಾಂತರ ಬಡ ಕುಟುಂಬದವರು ನಾಲ್ಕು ಚಕ್ರಗಳ ವಾಹನ ಹೊಂದಿದ್ದಾರೆ. ಈ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದು ಸರಿಯಾದ ಕ್ರಮವಲ್ಲ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವ ಕುರಿತು ಮಾನದಂಡಗಳಲ್ಲಿ ಬದಲಾವಣೆಗೆ ಸೂಚಿಸಲಾಗುತ್ತದೆ ಎಂದು ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯ ವೇಳೆಯ ಸಂದರ್ಭ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಷಯ ಪ್ರಸ್ತಾಪ ಮಾಡಿ , 30 ಸಾವಿರ ರೂಪಾಯಿಗೂ ಹಳೆಯ ಕಾರು ಲಭ್ಯವಾಗುತ್ತಿದ್ದು, ಬಡವರು ಕಾರ್ ನಲ್ಲಿ ಓಡಾಡಬಾರದೇ ಎಂದು ಪ್ರಶ್ನಿಸಿ ಕಾರು ಹೊಂದಿರುವ ಮಾತ್ರಕ್ಕೆ ಸಾವಿರಾರು ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ನಾಲ್ಕು ಚಕ್ರಗಳ ವಾಹನ ಸೇರಿದಂತೆ ಮಾನದಂಡಗಳ ಅನುಸಾರ ಬಿಪಿಎಲ್ ಕಾರ್ಡ್ ರದ್ದು ಸ್ಥಗಿತ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ.

You may also like

Leave a Comment