Home » ಈ ವಾಸ್ತುಸಲಹೆಗಳನ್ನು ಪಾಲಿಸಿದರೆ ನಿಮಗಿರೋದಿಲ್ಲ ಸಾಲದ ಟೆನ್ಶನ್!

ಈ ವಾಸ್ತುಸಲಹೆಗಳನ್ನು ಪಾಲಿಸಿದರೆ ನಿಮಗಿರೋದಿಲ್ಲ ಸಾಲದ ಟೆನ್ಶನ್!

0 comments

‘ಸಾಲ’ ಎಂಬುದು ಕೇವಲ ಒಂದು ಪದವಾದರೆ, ಇದು ಅದೆಷ್ಟೋ ಜನರ ಪ್ರಾಣವನ್ನೇ ಹಿಂಡಿದೆ. ಸಾಲ ಮರುಪಾವತಿಯಾಗದೆಯೋ ಅಥವಾ ಇನ್ಯಾರೋ ಹಣ ಪಾವತಿಸದಿದ್ದಾಗ ಇದರ ಹೊರೆ ಸಾಲಗಾರನ ಮೇಲೆ ಬಿದ್ದು ಅದೆಷ್ಟೋ ಬಡ ಜೀವಗಳು ಆತ್ಮಹತ್ಯೆ ಎಂಬ ಪರಿಹಾರಕ್ಕೆ ತಲೆ ಕೊಟ್ಟಂತಹ ಅದೆಷ್ಟೋ ಘಟನೆಗಳು ನಡೆದಿದೆ.

ಕಷ್ಟದ ಸಂದರ್ಭದಲ್ಲಿ ಮಾಡಿದ ಸಾಲ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ತೀರಿಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ನೀವು ಕಷ್ಟ ಪಟ್ಟು ಕೆಲಸ ಮಾಡುವುದರ ಜೊತೆಗೆ ಕೆಲವೊಂದು ವಾಸ್ತುಸಲಹೆಗಳನ್ನು ಕೂಡಾ ಅನುಸರಿಸಬೇಕಿದೆ. ಹಾಗಿದ್ರೆ ಬನ್ನಿ ಯಾವ ವಾಸ್ತು ಸಲಹೆ ಪಾಲಿಸಿದರೆ ಸಾಲದಿಂದ ಮುಕ್ತಿ ಪಡೆದುಕೊಳ್ಳಬಹುದೆಂದು ತಿಳಿದುಕೊಳ್ಳೋಣ..

ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ:
ಮನೆಯನ್ನು ಸ್ವಚ್ಛವಾಗಿ ಇರಿಸುವುದರ ಮೂಲಕ ಮನೆಯಲ್ಲಿ ನೆಮ್ಮದಿ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ. ಮನೆಯಲ್ಲಿ ಲಕ್ಷ್ಮಿ ಕೂಡಾ ಶಾಶ್ವತವಾಗಿ ನೆಲೆಸುತ್ತಾಳೆ. ಸಂಜೆ ಆಗುತ್ತಿದ್ದಂತೆ ಮನೆಯ ಕಸ ಗುಡಿಸಲು ಮರೆಯಬೇಡಿ. ಪ್ರತಿದಿನ ನೀವು ಸಂಜೆ 5.30ರ ನಂತರ ಕಸ ಗುಡಿಸಿದರೆ ಲಕ್ಷ್ಮಿಯನ್ನು ಮನೆಯಿಂದ ಕಳಿಸುತ್ತಿದ್ದೀರಿ ಎಂದೇ ಅರ್ಥ. ಆದ್ದರಿಂದ ಆದಷ್ಟು ಬೇಗ ಮನೆಯನ್ನು ಸ್ಚಚ್ಛಗೊಳಿಸಿ. ಏಕೆಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಸಂಜೆ ವೇಳೆ ಮನೆಯನ್ನು ಶುಚಿಗೊಳಿಸದಿದ್ದರೆ ಅದೃಷ್ಟವಂತನ ಜೀವನದಲ್ಲಿ ಬಡತನ ಮತ್ತು ಸಾಲಗಳು ಹೆಚ್ಚಾಗುತ್ತವೆ. ಇದಲ್ಲದೆ, ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತವೆ.

ಸಂಜೆ ವೇಳೆ ಮಲಗಬೇಡಿ:
ವಾಸ್ತುಶಾಸ್ತ್ರದ ಪ್ರಕಾರ, ಸಂಜೆ ವೇಳೆ ಮಲಗುವುದು ಬಹಳ ತಪ್ಪು. ನೀವು ಹೀಗೆ ಮಾಡುತ್ತಿದ್ದರೆ, ತಕ್ಷಣವೇ ಅಭ್ಯಾಸವನ್ನು ನಿಲ್ಲಿಸಿ. ಏಕೆಂದರೆ ಸಂಜೆಯ ಸಮಯದಲ್ಲಿ ಮಲಗುವುದರಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಸಾಲದ ಹೊರೆಯೂ ಹೆಚ್ಚಾಗಲಿದೆ. ಹಾಗಾಗಿ ಸಂಜೆ ಮಲಗುವ ಬದಲು, ಮನೆಯನ್ನು ಸ್ವಚ್ಛಗೊಳಿಸಿ, ನೀವೂ ಶುಚಿಯಾಗಿ ನಿಮ್ಮ ಇಷ್ಟ ದೇವತೆಗಳನ್ನು ಪೂಜಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕೂಡಾ ನೀಡುತ್ತದೆ.

ಸಂಜೆ ವೇಳೆ ತುಳಸಿ ಎಳೆ ಅಥವಾ ಹೂ ಕೀಳಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ ಸಂಜೆ ವೇಳೆ ತುಳಸಿ ಎಲೆಗಳನ್ನು ಪೂಜೆಗಾಗಿ ಅಥವಾ ಇತರ ಯಾವುದೇ ಕೆಲಸಕ್ಕಾಗಿ ಕತ್ತರಿಸಬಾರದು. ಹೀಗೆ ಮಾಡುವುದರಿಂದ ಜನರ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ. ಹೂವುಗಳನ್ನು ಕೂಡಾ ಕೀಳಬೇಡಿ. ಹಾಗೇ ಸಂಜೆ ವೇಳೆ ನೀವು ಯಾರಿಂದಲೂ ಹಣವನ್ನು ತೆಗೆದುಕೊಳ್ಳದಿರಲು ಅಥವಾ ಇತರರಿಗೆ ಹಣ ನೀಡುವುದನ್ನು ಆದಷ್ಟು ತಪ್ಪಿಸಿ. ಇದನ್ನು ತಪ್ಪಿ ನಡೆದರೆ ಹಣಕಾಸಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

ಆಹಾರವನ್ನು ವೇಸ್ಟ್‌ ಮಾಡಿ ಎಸೆಯಬೇಡಿ:
ಆಹಾರ ಲಕ್ಷ್ಮಿ ಇದ್ದಂತೆ. ಕೆಲವರು ಇದನ್ನು ಬೇಕಾಬಿಟ್ಟಿ ನಿರ್ಲಕ್ಷಿಸುತ್ತಾರೆ. ಪ್ರತಿದಿನ ಅನ್ನ ಉಳಿಸುವುದು, ಹೊರಗೆ ಎಸೆಯುವುದು ಮಾಡಬೇಡಿ. ನಿಮಗೆ ಅಗತ್ಯವಿದ್ದಷ್ಟು ತಯಾರಿಸಿಕೊಳ್ಳಿ. ಒಂದು ವೇಳೆ ಹೆಚ್ಚಿಗೆ ಉಳಿದರೂ ಮರುದಿನವಾದರೂ ಅದನ್ನು ಉಪಯೋಗಿಸಿ. ಅಥವಾ ಬೇರೆಯವರಿಗೆ ನೀಡಿ. ಪ್ರತಿದಿನ ನೀವು ಆಹಾರ ಉಳಿಸುವುದು, ಹೊರಗೆ ಎಸೆಯುವುದು ಮಾಡಿದರೆ ಲಕ್ಷ್ಮಿಗೆ ಅಪಮಾನವಾದಂತೆ.

ಸಾಲವನ್ನು ತೀರಿಸಿ ನೀವು ಧನವಂತರಾಗಲು ಮೇಲೆ ತಿಳಿಸಿದ ವಾಸ್ತು ಟಿಪ್ಸ್‌ಗಳೊಂದಿಗೆ ಕುಬೇರ ಯಂತ್ರವನ್ನು ಮನೆಗೆ ತಂದು ಪೂಜಿಸಿ. ಈ ಯಂತ್ರಕ್ಕೆ ಶಮಿ ಎಲೆಗಳನ್ನು ಇಟ್ಟು ಪೂಜಿಸುತ್ತಾ ಬಂದರೆ ಆದಷ್ಟು ಬೇಗ ನೀವು ಸಾಲದಿಂದ ವಿಮುಕ್ತಿ ಹೊಂದಲಿದ್ದೀರಿ. ಇದನ್ನು ಹೊರತು ಪಡಿಸಿ, ಗೊವುಗಳು, ಇರುವೆ, ಮೀನು, ಪಶು ಪಕ್ಷಿಗಳಿಗೆ, ಬಡ ಬಗ್ಗರಿಗೆ ಆಹಾರ ನೀಡಿದರೆ ನಿಮ್ಮ ಋಣಭಾರ ಕಡಿಮೆ ಆಗುತ್ತದೆ. ಈ ಸಲಹೆಗಳನ್ನು ಅನುಸರಿಸಿ ಸಾಲದಿಂದ ವಿಮುಕ್ತರಾಗಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ.

You may also like

Leave a Comment