Home » Fire Boltt Smartwatch: ಫೈರ್​ಬೋಲ್ಟ್​ ಸ್ಮಾರ್ಟ್​​ವಾಚ್ ಫುಲ್‌ ಫೈರ್‌ ತರಹನೇ​! ಬೆಲೆ ಎಷ್ಟು?

Fire Boltt Smartwatch: ಫೈರ್​ಬೋಲ್ಟ್​ ಸ್ಮಾರ್ಟ್​​ವಾಚ್ ಫುಲ್‌ ಫೈರ್‌ ತರಹನೇ​! ಬೆಲೆ ಎಷ್ಟು?

0 comments

ಇತ್ತೀಚಿಗೆ ಸ್ಮಾರ್ಟ್ ವಾಚ್ ಗೆ ಬಹಳ ಬೇಡಿಕೆ ಇದ್ದು ಜೊತೆಗೆ ಈಗಿನ ಟ್ರೆಂಡ್ ಕೂಡ ಆಗಿದೆ. ಅದಲ್ಲದೆ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ವಾಚ್​​ಗಳಿಗೆ ಬೇಡಿಕೆಯಿದ್ದಷ್ಟು ಬೇರೆ ಯಾವ ಸಾಧನಗಳಿಗೂ ಇಲ್ಲ ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವಂತಹ ಫೀಚರ್ಸ್​ ಆಗಿರಬಹುದು. ಇದೀಗ ಹೊಸ ವರ್ಷದಲ್ಲಿ ಸ್ಮಾರ್ಟ್​​ವಾಚ್ ಯುಗದಲ್ಲಿ ಜನಪ್ರಿಯ ಕಂಪನಿಯಾಗಿರುವ ಫೈರ್ ​ಬೋಲ್ಟ್ ಇದೀಗ ಫೈರ್​​ಬೋಲ್ಟ್​ ರಾಕೆಟ್ ವಾಚ್ ಎಂಬ ಸಾಧನವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಪ್ರಸ್ತುತ ಫೈರ್ ಬೋಲ್ಟ್ ರಾಕೆಟ್‌ ವಾಚ್‌ 1.3 ಇಂಚಿನ ಹೆಚ್​​ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ರೌಂಡ್ ಡಯಲ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನ ಬಲಭಾಗದಲ್ಲಿ ಫಿಸಿಕಲ್‌ ಬಟನ್ ಹೊಂದಿದ್ದು, IP67 ಪ್ರಮಾಣೀಕೃತ ವಾಟರ್‌ ರೆಸಿಸ್ಟೆನ್ಸಿಯನ್ನು ಇದು ಹೊಂದಿದೆ. ಇದು ವಿವಿಧ ಮಾದರಿಯ ಸ್ಮಾರ್ಟ್‌ವಾಚ್‌ ಫೇಸ್‌ಗಳನ್ನು ಒಳಗೊಂಡಿದೆ. ಫೈರ್ ಬೋಲ್ಟ್ ರಾಕೆಟ್‌ ವಾಚ್‌ ಆರೋಗ್ಯದ ದೃಷ್ಟಿಯಿಂದ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪಿಂಗ್‌ ಟ್ರ್ಯಾಕರ್ ಮತ್ತು ಸ್ತ್ರೀ ಸೈಕಲ್ ಮಾನಿಟರ್ ಅನ್ನು ಹೊಂದಿದೆ.

ಹಾಗೂ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ವಿವಿಧ ಸ್ಪೋರ್ಟ್ಸ್‌ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಮೂಲಕ ಸ್ಟೆಪ್ಸ್‌, ಡಿಸ್ಟೆನ್ಸ್‌, ಕ್ಯಾಲೂರಿ ಬರ್ನಿಂಗ್ಸ್‌ ಅನ್ನು ಅಳೆಯುವುದಕ್ಕೆ ಬಹಳಷ್ಟು ಸಹಕಾರಿ ಆಗುತ್ತದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಸ್ಪೀಕರ್ ಮತ್ತು ಮೈಕ್ರೊಫೋನ್ ಅನ್ನು ಹೊಂದಿದೆ. ಫೈರ್ ​ಬೋಲ್ಟ್​ ರಾಕೆಟ್​ ವಾಚ್​ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಹೊಂದಿದ್ದು, ಬಳಕೆದಾರರು ಬ್ಲೂಟೂತ್ ಕನೆಕ್ಟ್​ ಮಾಡುವ ಮೂಲಕ ಕಾಲ್​ ಮಾಡಬಹುದು ಮತ್ತು ಸ್ವೀಕರಿಸಿ ಮಾತಾಡುವ ಅವಕಾಶ ಕೂಡಾ ಇದೆ.

ಇನ್ನು ಫೈರ್​ಬೋಲ್ಟ್​ ಕಂಪನಿಯ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿಯನ್ನು ಕೂಡ ಸಪೋರ್ಟ್​ ಮಾಡುತ್ತದೆ. ಜೊತೆಗೆ ಇದು ನೋಟಿಫಿಕೇಶನ್‌ ಆಲರ್ಟ್‌ಗಳನ್ನು ಸಹ ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಮಲ್ಟಿ ಫಂಕ್ಷನ್‌ ಫೀಚರ್ಸ್‌ಗಳನ್ನು ಹೊಂದಿದೆ. ವಿಶೇಷವಾಗಿ ಫೈರ್​ಬೋಲ್ಟ್​​ ಇದುವರೆಗೆ ಬಿಡುಗಡೆ ಮಾಡಿದ ಸಾಧನಗಳಿಗಿಂತ ಇದು ಸ್ವಲ್ಪ ಹೆಚ್ಚು ಫೀಚರ್ಸ್​ ಅನ್ನು ಹೊಂದಿದೆ. ಆದ್ದರಿಂದ ನಾಯ್ಸ್‌, ಬೋಟ್‌, ಅಮೇಜ್‌ಫಿಟ್‌, ರಿಯಲ್‌ಮಿ ಮತ್ತು ಬಜೆಟ್‌ ಬೆಲೆಯಲ್ಲಿ ಬರುವ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುವುದು ಖಚಿತವಾಗಿದೆ.

ಈ ಮೇಲಿನ ಸ್ಮಾರ್ಟ್​ವಾಚ್​ ಅನ್ನು ಫೈರ್​ಬೋಲ್ಟ್​ ಕಂಪನಿಯ ಅಧಿಕೃತ ಇಕಾಮರ್ಸ್​ ವೆಬ್​ಸೈಟ್​ನಲ್ಲಿ ಖರೀದಿ ಮಾಡಬಹುದಾಗಿದೆ. ಇದೀಗ ಭಾರತದಲ್ಲಿ ಲಾಂಚ್‌ ಆಗಿರುವ ಫೈರ್ ಬೋಲ್ಟ್ ರಾಕೆಟ್ ಸ್ಮಾರ್ಟ್​ವಾಚ್​ ಅನ್ನು ಕೇವಲ 2,499 ರೂಪಾಯಿ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್​ವಾಚ್​ ಮಾರುಕಟ್ಟೆಯಲ್ಲಿ ಕಪ್ಪು, ಸಿಲ್ವರ್ ಗ್ರೇ, ಷಾಂಪೇನ್ ಗೋಲ್ಡ್ ಮತ್ತು ಗೋಲ್ಡ್ ಪಿಂಕ್ ಬಣ್ಣದ ಆಯ್ಕೆಗಳಲ್ಲಿ ಕೊಡುಕೊಳ್ಳಬಹುದಾಗಿದೆ .

You may also like

Leave a Comment