Home » ಸಮಂತಾ ಬಗ್ಗೆ ರಶ್ಮಿಕಾ ಮಂದಣ್ಣ ಹೀಗ್ಯಾಕೆ ಹೇಳಿದ್ರು! ಅವರು ಹೇಳಿದ್ದೇನು ಗೊತ್ತ?

ಸಮಂತಾ ಬಗ್ಗೆ ರಶ್ಮಿಕಾ ಮಂದಣ್ಣ ಹೀಗ್ಯಾಕೆ ಹೇಳಿದ್ರು! ಅವರು ಹೇಳಿದ್ದೇನು ಗೊತ್ತ?

0 comments

ಕನ್ನಡ ಸಿಮಾಗಳ ಮೂಲಕ ಚಿತ್ರರಂಗ ಪ್ರವೇಶಿಸಿ ಸದ್ಯ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗಂತೂ ಏನಾದರೂ ಹೇಳಿಕೆಯಿಂದ ಸುದ್ಧಿಯಲ್ಲಿರುತ್ತಾರೆ. ಇದೀಗ ಸಮಂತಾ ವಿಚಾರದಲ್ಲಿ ತಲೆ ಹಾಕಿರುವ ರಶ್ಮಿಕಾ, ನಾನು ಎಂದಿಗೂ ಸಮಂತಾ ಪರವಾಗಿದ್ದೆನೆ, ಮುಂದೆ ಇರುತ್ತೇನೆ ಎಂದಿದ್ದಾರೆ.

ನಟಿಯರಾದ ಸಮಂತಾ ಮತ್ತು ರಶ್ಮಿಕಾ ಇಬ್ಬರೂ ಸೌತ್ ಇಂಡಿಯಾದ ಸೂಪರ್ ಸ್ಟಾರ್ ಹೀರೋಯಿನ್ ಗಳು. ಸದ್ಯ ‘ವಾರಿಸು’ ಸಿನಿಮಾ ಪ್ರರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ರಶ್ಮಿಕಾಗೆ ಬಾಲಿವುಡ್ ನಲ್ಲಿಯೂ ಆಫರ್ ದೊರೆತಿದೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನಟಿ ಸಮಂತಾ ಅವರ ಕಾಯಿಲೆ ಬಗ್ಗೆ ಮಾತನಾಡಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

‘ಮೈಯೋಸಿಟಿಸ್ ಕಾಯಿಲೆ ಬಗ್ಗೆ ಸಮಂತಾ ಹೇಳಿಕೊಂಡಾಗ ನನಗೆ ತುಂಬಾ ಬೇಸರವಾಗಿತ್ತು. ಸಮಂತಾ ವಿಚಾರದಲ್ಲಿ ನಾನು ಯಾವಾಗಲೂ ಪೊಸೆಸಿವ್. ನಾನು ಯಾವಾಗಲೂ ಅವರ ಪರವಾಗಿರುತ್ತೇನೆ. ಜೊತೆಗೆ ಅವರನ್ನು ರಕ್ಷಿಸಲು ಬಯಸುತ್ತೇನೆ. ಸದಾ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ಸಮಂತಾ ಸದ್ಯ ಚೇತರಿಸಿಕೊಂಡಿದ್ದು ಶೀಘ್ರದಲ್ಲೇ ಗುಣಮುಖರಾಗಿ ಶೂಟಿಂಗ್‌ಗೆ ಮರಳುತ್ತಾರೆ ಎಂದು ನಟಿ ರಶ್ಮಿಕಾ ಹೇಳಿದ್ದಾರೆ.

ಪುಷ್ಪ ಸಿನಿಮಾದ ಒಂದೇ ಪ್ರೇಮ್ ನಲ್ಲಿ ಸಮಂತಾ ಮತ್ತು ರಶ್ಮಿಕಾ ಇಬ್ಬರೂ ಅಭಿನಯಿಸಿದ್ದರು. ಈ ಚಿತ್ರದ ಮೂಲಕ ಇಬ್ಬರ ನಡುವೆ ಒಂದೊಳ್ಳೆ ಬಾಡಿಂಗ್ ಕ್ರಿಯೆಟ್ ಆಗಿತ್ತು. ಈ ಸಿನಿಮಾದ ಬಳಿಕ ಇಬ್ಬರಿಗೂ ಬಾಲಿವುಡ್ ನಿಂದ ಸಾಕಷ್ಟು ಆಫರ್ ಬರುತ್ತಿದೆ. ಆರೋಗ್ಯ ಸಮಸ್ಯೆಯಿಂದ ಕೆಲ ಸಿನಿಮಾಳಿಂದ ಹಿಂದೆ ಸರಿದ ಸಮಂತಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಶಾಕುಂತಲಂ ಚಿತ್ರ ಫೆಬ್ರವರಿಯಲ್ಲಿ ರಿಲೀಸ್​ ಆಗಲಿದೆ.

You may also like

Leave a Comment